ಜಿಪಂ ವತಿಯಿಂದ ಕೈಗೊಂಡ ಕಾಮಗಾರಿಗಳು ಕಳಪೆ: ಆರೋಪ
ಕ.ಪ್ರ. ವಾರ್ತೆ , ಪಾವಗಡ , ಮೇ 24
2009ರಿಂದ 2012ರವರೆವಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ಜಿಪಂ ವತಿಯಿಂದ ಕೈಗೊಂಡ ಕಾಮಗಾರಿಗಳು ಕಳಪೆಯಿಂದ ಕೂಡಿದ್ದು ಕಳಪೆ ಕಾಮಗಾರಿಗಳ ನಿರ್ವಹಣೆಯಲ್ಲಿ ತೊಡಗಿ ಬಿಲ್ಲು ಪಾಸು ಮಾಡಿ ಲಕ್ಷಾಂತರ ರು. ಗಳ ಹಣ ದುರಪಯೋಗಪಡಿಸಿಕೊಂಡ ಜಿಪಂ ಎಇ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ತಾಲೂಕು ಜೆಡಿಎಸ್ ಮುಖಂಡ ಕ್ಯಾತಗಾನಹಳ್ಳಿ ಹನುಮಪ್ಪ ಒತ್ತಾಯಿಸಿದ್ದಾರೆ.
ತಾಲೂಕಿನ ವದನಕಲ್ಲು, ಅರಸೀಕೆರೆ ನ್ಯಾಯದಗುಂಟೆ, ಮಂಗಳವಾಡ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಜಿಪಂನಿಂದ ನಿರ್ವಹಿಸಿದ ಬಹುತೇಕ ಕಾಮಗಾರಿಗಳು ಕಳಪೆಯಿಂದ ಕೂಡಿದ್ದು ಕಾಮಗಾರಿಗಳನ್ನು ನಿರ್ವಹಿಸಿದೇ ಕಾಮಗಾರಿಗಳ ಹೆಸರಿನಲ್ಲಿ ಲಕ್ಷಾಂತರ ಹಣ ಡ್ರಾ ಮಾಡಿರುವುದಾಗಿ ಆರೋಪಿಸಿದ್ದಾರೆ. ಕಳಪೆ ಕಾಮಗಾರಿಗಳ ದಾಖಲೆ ಸಮೇತ ಸಾಬೀತುಪಡಿಸಲು ತಾವು ಸಿದ್ಧರಿದ್ದು ವಿಭಾಗ ವ್ಯಾಪ್ತಿಯ ಕಳಪೆ ಕಾಮಗಾರಿಗಳ ಬಗ್ಗೆ ಸಂಬಂಧಪಟ್ಟ ತುಮಕೂರು ಜಿಪಂ ಸಿಇಒ ಅವರಿಗೆ ದೂರು ನೀಡಿಲಾಗಿದೆ. ಅವರು ಕೂಡಲೇ ತನಿಖೆ ಮಾಡುವಂತೆ ಒತ್ತಾಯಿಸಿದರು.
ವದನಕಲ್ಲು ಗ್ರಾಪಂ ವ್ಯಾಪ್ತಿಯ ಹೊಟ್ಟೆಬಮ್ಮನಹಳ್ಳಿ ಗ್ರಾಮದಲ್ಲಿ ಜಿಪಂನ ಬರ ನಿರ್ವಹಣೆ ಯೋಜನೆಯಲ್ಲಿ 5ಲಕ್ಷ ಮಂಜೂರಾಗಿದ್ದು ಕುಡಿಯುವ ನೀರು ಸರಬರಾಜು ಮಾಡುವ ಹಿನ್ನೆಲೆಯಲ್ಲಿ ಗ್ರಾಮದ ನೀರಿಲ್ಲದ ಸ್ಥಳದಲ್ಲಿ ಕೊಳವೆಬಾವಿ ಕೊರೆಸಿ ನೀರು ಬರದಿದ್ದರೂ ಕೂಡ ಕಳಪೆ ಪೈಪುಲೈನ್ ಕಾಮಗಾರಿ ಮಾಡಿಸಿ ಮೋಟರ್ ಪಂಪುಗಳ ಹೆಸರಿನಲ್ಲಿ 5ಲಕ್ಷ ಹಣ ಡ್ರಾ ಮಾಡಿ ದುರುಪಯೋಗಪಡಿಸಿಕೊಂಡಿದ್ದಾರೆ. ಕುಡಿಯುವ ನೀರಿಲ್ಲದೇ ಇಂದಿಗೂ ಗ್ರಾಮದಲ್ಲಿ ಪರಿತಪ್ಪಿಸುತ್ತಿದ್ದಾರೆ ಎಂದ ಅವರು ಕಳಪೆ ಕಾಮಗಾರಿ ಹೆಸರಿನಲ್ಲಿ 5ಲಕ್ಷ ಡ್ರಾ ಮಾಡಿ ಸರ್ಕಾರಕ್ಕೆ ವಂಚಿಸಿದ ಭ್ರಷ್ಟ ಎಂಜಿನಿಯರ್ ಮತ್ತು ಗುತ್ತಿದಾರನ ವಿರುದ್ಧ ಜಿಪಂ ಸಿಇಒ ಅವರಿಗೆ ದೂರಿರುವುದಾಗಿ ತಿಳಿಸಿದ್ದಾರೆ.
ತಾಲೂಕು ಜಿಪಂ ವತಿಯಿಂದ ನ್ಯಾಯದಗುಂಟೆ ಗ್ರಾಪಂ ವ್ಯಾಪ್ತಿಯ ತುಮಕುಂಟೆ ಗಡಿಯ 2ಕಿಮೀ ರಸ್ತೆ ಅಂಕು ಡೊಂಕಿನಿಂದ ಕೂಡಿದ್ದು ಈ ರಸ್ತೆ ಅಭಿವೃದ್ಧಿಗೆ ಜಿಪಂನ ಗಡಿ ಗ್ರಾಮ ಅಭಿವೃದ್ಧಿ ಯೋಜನೆಯಲ್ಲಿ 5ಲಕ್ಷ ಮಂಜೂರು ಮಾಡಿಸಿ ಕಾಮಗಾರಿ ಮಾಡಿಸದೇ ಕಾಮಗಾರಿ ಹೆಸರಿನಲ್ಲಿ ಬಿಲ್ಲು ಪಾಸು ಮಾಡುವ ಮೂಲಕ 5ಲಕ್ಷ ಡ್ರಾ ಮಾಡಿ ವಂಚಿಸಲಾಗಿದೆ ಎಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

