ಎಂ.ಎಚ್. ಪಟ್ಟಣಕೆರೆಯಲ್ಲಿ ಆರು ಕಾಡಾನೆ ಬೀಡು
ಗುಬ್ಬಿ: ಕುಂಕುಮನಹಳ್ಳಿ ಕೆರೆಯಲ್ಲಿ ತಂಗಿದ್ದ 6 ಕಾಡಾನೆಗಳು ವಕ್ಕೂಡಿ, ಮುದಿಗೆರೆ ಮಾರ್ಗವಾಗಿ ಕಳೆದ ರಾತ್ರಿ ತಾಲೂಕಿನ ಎಂ.ಎಚ್. ಪಟ್ಟಣಕೆರೆಯಲ್ಲಿ ವಾಸ್ತವ್ಯ ಹೂಡಿದ್ದು ಕಾಡಾನೆಗಳನ್ನು ಸುರಕ್ಷಿತವಾಗಿ ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಓಡಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ. ಗುಬ್ಬಿ ತಾಲೂಕಿನ ಎಂ.ಎಚ್. ಪಟ್ಟಣ ಕೆರೆಯಲ್ಲಿ ಹೇಮಾವತಿ ನೀರು ಸಂಗ್ರಹವಾಗಿದ್ದು ಕಾಡಾನೆಗಳು ನೀರಿನಲ್ಲಿ ಇಡೀ ದಿನ ಆಟವಾಡಿಕೊಂಡಿದ್ದು ಸಂಜೆಯಾಗುತ್ತಿದ್ದಂತೆ ಕೆರೆಯ ಸಮೀಪದಲ್ಲಿದ್ದ ಕಳ್ಳಿಪಾಳ್ಯ ಗ್ರಾಮದ ರೈತ ಲೋಕೇಶ್ ಅವರಿಗೆ ಸೇರಿದ ಬತ್ತದ ಗದ್ದೆಯನ್ನು ಹಾಳು ಮಾಡಿವೆ. ಅಕ್ಕಪಕ್ಕದ ತೆಂಗು, ಅಡಿಕೆ ಮತ್ತು ಬಾಳೆ ತೋಟಗಳನ್ನು ನಾಶಪಡಿಸಿವೆ. ಕಳೆದೊಂದು ತಿಂಗಳಿನಿಂದಲೂ ಜಿಲ್ಲೆಯ ತುಮಕೂರು, ಗುಬ್ಬಿ, ಚಿಕ್ಕನಾಯಕನಹಳ್ಳಿ, ಶಿರಾ ಸೇರಿದಂತೆ ಹಲವಾರು ತಾಲೂಕುಗಳಲ್ಲಿ ಸಂಚರಿಸಿದ ಕಾಡಾನೆಗಳು ಮತ್ತೆ ಗುಬ್ಬಿ ತಾಲ್ಲೂಕಿನತ್ತ ಪ್ರಯಾಣ ಬೆಳೆಸಿದ್ದು ಎಂ.ಎಚ್. ಪಟ್ಟಣ ಕೆರೆಯಲ್ಲಿ ತಂಗಿದ್ದು ನೀರಿನಲ್ಲಿ ಸ್ವಚ್ಛಂದವಾಗಿ ಆಟವಾಡುತ್ತಿವೆ. ಸ್ಥಳಕ್ಕೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಅಮರನಾಥ ಪಾಂಡೆ, ವಲಯ ಅರಣ್ಯಾಧಿಕಾರಿ ಹರೀಶ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದು ಆನೆಗಳಿಂದ ಯಾವುದೇ ರೀತಿಯ ಹಾನಿ ಸಂಭವಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಹಗಲು ವೇಳೆ ಕೆರೆಯಲ್ಲಿ ತಂಗಿರುವ ಕಾಡಾನೆಗಳು ರಾತ್ರಿಯಾಗುತ್ತಿದ್ದಂತೆ ಪ್ರಯಾಣ ಬೆಳೆಸುತ್ತವೆ. ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳಿಂದ ರೈತರಿಗೆ ಹಾನಿ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಗ್ರಾಮಗಳಿಗೆ ಸೂಕ್ತ ಮುನ್ನೆಚ್ಚರಿಕೆ ನೀಡಲಾಗುತ್ತಿದೆ. ಆನೆಗಳನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಓಡಿಸಲು ವ್ಯಾಪಕ ಕ್ರಮಗಳನ್ನು ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

