ಪ್ರತಿ ಪಂಚಾಯ್ತಿಗೆಒಂದು ಆಟದ ಮೈದಾನ; ಸ್ವಾಗತ
ತಿಪಟೂರು: ಪ್ರತಿ ಪಂಚಾಯ್ತಿಗೊಂದರಂತೆ ಆಟದ ಮೈದಾನ ನಿರ್ಮಾಣ ಮಾಡುವ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಅವರ ಈ ಯೋಜನೆ ಗ್ರಾಮೀಣ ಪ್ರದೇಶದ ಯುವ ಆಟಗಾರರಿಗೆ ಸಕಾರಾತ್ಮಕ ಹೆಜ್ಜೆಯಾಗಿದೆ ಎಂದು ತಾಲೂಕು ಕಾಂಗ್ರೆಸ್ ವಕ್ತಾರ ಕೆ.ಎಸ್. ಸದಾಶಿವಯ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಹಳ್ಳಿಗಳಲ್ಲಿ ಪ್ರತಿ ಸಂಜೆ ಊರ ಯುವಕರೆಲ್ಲ ಒಂದೆಡೆ ಸೇರಿ ಕಬಡ್ಡಿ, ಖೋ-ಖೋ, ವಾಲಿಬಾಲ್, ದಬ್ಬೆ ಚೆಂಡು, ಸಂಗ್ರಾಮ ಕಲ್ಲು ಎತ್ತುವುದು ಮುಂತಾದ ಕ್ರೀಡೆಗಳಲ್ಲಿ ತೊಡಗುವುದು, ಸಂಭ್ರಮ ಪಡುವುದು, ನೋವು- ನಲಿವು ಹಂಚಿಕೊಳ್ಳುವುದು ಸಹಜವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ಮಾಯವಾಗಿ ಜನರೆಲ್ಲ ಟಿವಿ ಮುಂದೆ ಕೂತು ಮನೆ ಬಿಟ್ಟು ಹೊರಗಡೆ ಹೋಗದೇ ಕೂಪ ಮಂಡೂಕಗಳಾಗಿ ದಿನದೂಡುತ್ತಾ ಕಾಲ ಕಳೆಯುತ್ತಿದ್ದಾರೆ. ಇಂತಹ ಸಂದಿಗ್ಧ ದಿನಗಳಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವರು ಹಳ್ಳಿ ಸೊಗಡನ್ನು ಮರು ಸ್ಥಾಪಿಸಲು ಕೈಗೊಂಡಿರುವ ಕೆಲಸ ಪ್ರಶಂಶನೀಯ. ಅದರಂತೆ ಪ್ರತಿ ಹಳ್ಳಿಗೊಂದು ಗ್ರಂಥಾಲಯ ಅಥವಾ ವಾಚನಾಲಯ, ವ್ಯಾಯಾಮ ಶಾಲೆ, ಯಕ್ಷಗಾನ, ನಾಟಕ ಕಲಿಯಲು ಸಾಂಸ್ಕೃತಿಕ ಭವನ ನಿರ್ಮಾಣ ಮಾಡಲಿ. ಸಶಕ್ತ ಕರ್ನಾಟಕ ನಿರ್ಮಾಣದಲ್ಲಿ ಇದೊಂದು ಅತ್ಯಂತ ಪರಿಣಾಮಕಾರಿ ಹೆಜ್ಜೆ ಎಂದೇ ಹೇಳಬಹುದು ಎಂದರು.
ಜಯರಾಂ ರಾಜ್ಯ ಮಟ್ಟಕ್ಕೆ ಆಯ್ಕೆ
ತಿಪಟೂರು: ತುಮಕೂರಿನ ಮಹಾತ್ಮ ಗಾಂಧೀಜಿ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಈಜು ಸ್ಪರ್ಧೆಗಳಾದ ಪ್ರೀಸ್ಟೈಲ್, ಬ್ಲಾಕ್ ಸ್ಪೋಕ್ ಮತ್ತು ರಿಲೆ ಪ್ರೀಸ್ಟೈಲ್ ಹಾಗೂ ಕುಸ್ತಿ ಪಂದ್ಯಾವಳಿಗಳಲ್ಲಿ ತಿಪಟೂರು ವಿದ್ಯಾ ಇಲಾಖೆಯ ಶಿಕ್ಷಕರಾದ ಎಚ್. ಜಯರಾಂ ವಿಜೇತರಾಗಿ ಬೆಳಗಾವಿಯಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಲಿದ್ದಾರೆ.
ಗೋವಿಂದರಾಯಗೆ ಪಿಎಚ್.ಡಿ
ಗುಬ್ಬಿ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಎಂ. ಗೋವಿಂದರಾಯ ಅವರು ಡಾ. ವಿ. ನಾಗರಾಜ ಮಾರ್ಗದರ್ಶನದಲ್ಲಿ ಗಡಿ ನಾಡಿನ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಒಂದು ಅಧ್ಯಯನ(ವಿಶೇಷವಾಗಿ ತುಮಕೂರು ಜಿಲ್ಲಾ ಗಾಡಿ ನಾಡು) ಎಂಬ ವಿಷಯದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಸಂಶೋಧನೆ ಕೈಗೊಂಡು ಸಲ್ಲಿಸಿದ ಪ್ರೌಢ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿ ಗೌರವಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

