ತುಮಕೂರು

ಪುರಸಭೆ ಆಡಳಿತ ದಿವಾಳಿಯತ್ತ: ರಂಗಸ್ವಾಮಿ

Published On :

ಕುಣಿಗಲ್: ಪುರಸಭೆಯ ಆಡಳಿತ ವಹಿಸಿಕೊಂಡಿರುವ ಉಪ ವಿಭಾಗಾಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪುರಸಭೆ ವ್ಯವಹಾರಗಳಲ್ಲಿ ಪಾರದರ್ಶಕದ ಕೊರತೆಯಿಂದಾಗಿ ಪುರಸಭೆ ದಿವಾಳಿ ಅಂಚಿನತ್ತ ಸಾಗುತ್ತಿದ್ದು, ಜಿಲ್ಲಾಧಿಕಾರಿ ಕೂಡಲೇ ಮಧ್ಯೆ ಪ್ರವೇಶಿಸುವಂತೆ ಪುರಸಭೆ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ರಂಗಸ್ವಾಮಿ ಆಗ್ರಹಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಂತೆ ಮೈದಾನದ ಬಳಿ ಇರುವ ನೀರು ಶುದ್ಧೀಕರಣ ಕಾರ್ಯಾಗಾರದ ರಾಸಾಯನಿಕ ಮನೆಯ ಸಂಗ್ರಹಾರದಲ್ಲಿ ಸುಮಾರು ಹತ್ತು ಟನ್ ಆಲಂ(ನೀರು ಶುದ್ಧೀಕರಿಸಲು ಬಳಸುವ ರಾಸಾಯನಿಕ)ವನ್ನು ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸದೆ ಸಂಗ್ರಹಿಸಿದ್ದಾರೆ. ಈ ಬಗ್ಗೆ ಮುಖ್ಯಾಧಿಕಾರಿಗಳಿಗೆ ಕೇಳಿದರೆ ತಮಗೆ ಗೊತ್ತಿಲ್ಲ ಎನ್ನುತ್ತಾರೆ. ಇನ್ನು ಸಂಬಂಧಪಟ್ಟ ಅಭಿಯಂತರರನ್ನು ಪ್ರಶ್ನಿಸಿದರೆ ಅವರೂ ಸಹ ತಮಗೆ ಗೊತ್ತಿಲ್ಲವೆನ್ನುತ್ತಾರೆ. ಪುರಸಭೆಗೆ ಸೇರಿದ ಸಂಗ್ರಹಾರದಲ್ಲಿ ಹತ್ತು ಟನ್ ಆಲಂನ್ನು ಯಾವುದೋ ಖಾಸಗಿ ವ್ಯಕ್ತಿ ಸಂಗ್ರಹಿಸುತ್ತಾರೆಯೇ. ಈ ಬಗ್ಗೆ ಆಡಳಿತಾಧಿಕಾರಿಗಳಾದ ತುಮಕೂರು ಉಪ ವಿಭಾಗಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿಲ್ಲ.
ಈ ನಿಟ್ಟಿನಲ್ಲಿ ಆಡಳಿತಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಪುರಸಭೆ ಆಡಳಿತವನ್ನು ಉಪ ವಿಭಾಗಾಧಿಕಾರಿಗಳು ವಹಿಸಿಕೊಂಡಾಗಿನಿಂದಲೂ ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಕಾರಣ ಪುರಸಭೆಯ ಆಡಳಿತ ಕುಸಿಯುವಂತಾಗಿದೆ. ಅಲ್ಲದೆ, ಲೀಕೇಜ್ ಕಾಮಗಾರಿ ವಿಭಾಗದಲ್ಲಿ ಸಂಬಂಧಪಟ್ಟ ಸಿಬ್ಬಂದಿ ತಿಂಗಳುಗಟ್ಟಲೇ ಗೈರಾದರೂ, ಒಟ್ಟಾರೆ ಆರು ತಿಂಗಳು ಬಿಲ್‌ನ್ನು ನೀಡಿದ್ದಾರೆ. ಆದರೆ ಲೀಕೇಜ್ ವಿಭಾಗದ ಕಾರ್ಮಿಕರೇ ಹೇಳುವಂತೆ ತಾವು ತಿಂಗಳುಗಟ್ಟಲೆ ಕೆಲಸ ಮಾಡಿಲ್ಲವೆಂದು. ಹೀಗಿರುವಾಗ ಆಡಳಿತಾಧಿಕಾರಿಗಳು, ಲೀಕೇಜ್ ಕಾಮಗಾರಿಗೆ ಸಂಬಂಧಿಸಿದಂತೆ ಬಿಲ್ ಮಾಡಿದ್ದಾರೆ ಎಂದು ಆರೋಪಿಸಿದರು.
ಇದೇ ರೀತಿಯಾಗಿ ಹಲವು ಬಿಲ್‌ಗಳನ್ನು ಪಾರದರ್ಶಕತೆ ಕಾಯ್ದುಕೊಳ್ಳದೆ ನೀಡಿರುವ ಮೂಲಕ ಪುರಸಭೆ ದಿವಾಳಿ ಅಂಚಿನತ್ತ ಸಾಗಿದೆ. ಇದನ್ನು ತಪ್ಪಿಸಲು ಜಿಲ್ಲಾಧಿಕಾರಿ ಕೂಡಲೇ ಮಧ್ಯೆ ಪ್ರವೇಶಿಸಿ, ಪುರಸಭೆಯಲ್ಲಿ ನಡೆದಿರುವ ಅಕ್ರಮಗಳ ತನಿಖೆ ನಡೆಸುವಂತೆ ಆಗ್ರಹಿಸಿರುವ ಅವರು, ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಪುರಸಭೆ ಮುಂಭಾಗದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಸದಸ್ಯರಾದ ಶಂಕರ್, ಜಗದೀಶ್, ಅರುಣ್‌ಕುಮಾರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.