ವಿದ್ಯಾರ್ಥಿಗಳಿಗೆ ರಂಗ ಕಲೆಗಳ ಗೀಳು ಹುಟ್ಟಿಸಿ'
ತುರುವೇಕೆರೆ: ದೂರದರ್ಶನ ಹಾಗೂ ವಿದೇಶೀ ಸಾಹಿತ್ಯಗಳ ಹಾವಳಿಯಿಂದ ದೇಶೀಯ ಸಂಸ್ಕೃತಿಗೆ ಪೆಟ್ಟು ಬಿದ್ದಿದೆ. ಇವುಗಳ ದಾಳಿಯಿಂದ ದೂರವಾಗಿ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಅರಿವು ಮೂಡಿಸಲು ಶಾಲಾ ಕಾಲೇಜುಗಳಲ್ಲಿರುವ ವಿದ್ಯಾರ್ಥಿಗಳಿಗೆ ಅನಾದಿಕಾಲದಿಂದಲೂ ಭಾವನಾತ್ಮಕವಾಗಿ ಗ್ರಾಮಾಂತರ ಪ್ರದೇಶದಲ್ಲಿ ಹಾಸುಹೊಕ್ಕಿರುವ ಜಾನಪದ ಕಲೆಯನ್ನು ಕಲಿಸುವ ಪ್ರಯತ್ನ ಮಾಡಬೇಕು ಎಂದು ರಂಗಭೂಮಿಯ ಕಲಾವಿದ ಹಾಗೂ ಶಿವಶಕ್ತಿ ಕಲಾವಿದರ ಸಂಘದ ಅಧ್ಯಕ್ಷ ಅಮಾನಿಕೆರೆ ಮಂಜುನಾಥ್ ಕರೆ ನೀಡಿದರು. ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಸಾಂಸ್ಕೃತಿಯ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಶಾಲಾ ಕಾಲೇಜಿನಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತತ್ವ ಪದಗಳು, ಭಜನೆ ಹಾಗೂ ರಂಗಗೀತೆಗಳ ಅಭ್ಯಾಸವನ್ನು ಮಾಡಿಸಿದಲ್ಲಿ ನೆನಪಿನ ಶಕ್ತಿ ಹೆಚ್ಚುತ್ತದೆ. ಪ್ರಶಾಂತ ಮನಸ್ಥಿತಿಯೂ ಸಹ ಲಭಿಸಲಿದೆ ಎಂದು ಮಂಜುನಾಥ್ ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಜುಂಜಯ್ಯ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪನ್ಯಾಸಕರಾದ ನಾಗರಾಜಪ್ಪ, ಟಿ. ಭೈರಪ್ಪಾಜಿ, ಬಸವರಾಜು, ಶ್ರೀ ಭವನೇಶ್ವರಿ ರಂಗಕಲಾ ಸಂಘದ ಅಧ್ಯಕ್ಷ ಡಿ.ಎಲ್.ನಂಜುಂಡಸ್ವಾಮಿ, ಅಂಧ ಕಲಾವಿದ ಕಸವನಹಳ್ಳಿ ನಾಗರಾಜ್ ದಾಸ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಹಲವಾರು ರಂಗ ಕಲಾವಿದರು ತತ್ವಪದ, ಜಾನಪದ ಗೀತೆಗಳು, ಭಾವಗೀತೆಗಳು ಹಾಗೂ ರಂಗಗೀತೆಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.
ರಾಮುಗೆ ನಾಳೆ ಶ್ರದ್ಧಾಂಜಲಿ ಸಭೆ
ಪಾವಗಡ: ದಲಿತ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ತಾಲೂಕಿನ ಕೂತ್ತೂರು ಗ್ರಾಮದ ವಾಸಿ ಕೊತ್ತುರು ರಾಮು (49) ಅವರು ಈಚೆಗೆ ನಿಧನರಾಗಿದ್ದು ಅವರ ಸವಿ ನೆನಪಿಗಾಗಿ ತಾಲೂಕಿನ ಎಲ್ಲಾ ದಲಿತಪರ ಸಂಘಟನೆಗಳು ಸೇರಿ ನ.25ರಂದು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶ್ರದ್ಧಾಂಜಲಿ ಸಭೆ ಏರ್ಪಡಿಸಿರುವುದಾಗಿ ದಲಿತ ಮುಖಂಡ ಕೊತ್ತೂರು ಜಯರಾಮ್ ತಿಳಿಸಿದ್ದಾರೆ.
ಇಂದು ಉಚಿತ ತರಬೇತಿ
ತುಮಕೂರಿನ ಭೀಮ್-ರಾಮ್ ಸಮಾಜ ಕಲ್ಯಾಣ ಸಂಸ್ಥೆ ವತಿಯಿಂದ ನ.24 ರಂದು ಬೆಳಗ್ಗೆ 10-30 ಕ್ಕೆ ಎಂಪ್ರೆಸ್ ಪಪೂ ಕಾಲೇಜಿನಲ್ಲಿ ಉದ್ಯಮಶೀಲತೆ ಕುರಿತು ಒಂದು ದಿನದ ಉಚಿತ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9964151220 ಸಂಪರ್ಕಿಸುವಂತೆ ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

