ತುಮಕೂರು

700ಕ್ಕೂ ಹೆಚ್ಚು ಮಂದಿಗೆ ಉಚಿತ ಆರೋಗ್ಯ ತಪಾಸಣೆ

Published On :

ಹುಳಿಯಾರು: ಬೆಂಗಳೂರಿನ ಮೈತ್ರೇಯ ಟ್ರಸ್ಟ್ ಹಾಗೂ ಪಟ್ಟಣದ ರೋಟರಿ ಸಂಸ್ಥೆ ಸಹಯೋಗದಲ್ಲಿ ಎಂಪಿಎಸ್ ಶಾಲಾ ಆವರಣದಲ್ಲಿ ಶನಿವಾರ  ನಡೆದ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧಿ ವಿತರಣೆ ಶಿಬಿರದಲ್ಲಿ 700ಕ್ಕೂ ಹೆಚ್ಚು ಮಂದಿಯ ಆರೋಗ್ಯ ತಪಾಸಣೆ ಮಾಡಲಾಯಿತು. ಶಿಬಿರದಲ್ಲಿ  ಉಚಿತ ಔಷಧಿ ವಿತರಣೆ, ಕಣ್ಣು ಪೊರೆ ಶಸ್ತ್ರ ಚಿಕಿತ್ಸೆ, ಮಧುಮೇಹ ಪರೀಕ್ಷೆ, ಇಸಿಜಿ,ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಹೃದಯಕ್ಕೆ ಸಂಬಂಧಿಸಿದ ರೋಗ, ಕೀಲು, ಮೂಳೆ, ಚರ್ಮರೋಗ ಸೇರಿದಂತೆ ಸಾಮಾನ್ಯ ಪರೀಕ್ಷೆಯನ್ನು ನಡೆಸಲಾಯಿತು. ಶಿಬಿರವನ್ನು ಪಿಎಸೈ ಟಿ.ವಿ.ರಾಜು ಉದ್ಘಾಟಿಸಿದರು. ಮೈತ್ರೇಯ ಟ್ರಸ್ಟ್‌ನ ಡಾ.ಬಸವರಾಜು, ರೋಟರಿ ಸಂಸ್ಥೆಯ ಅಧ್ಯಕ್ಷ ಗಂಗಾಧರ ರಾವ್, ರವೀಶ್, ಬ್ಯಾಂಕ್ ಮರುಳಯ್ಯ, ಶ್ರೀಧರ್, ವೈದ್ಯರಾದ ತೇಜಸ್, ಪವನ್, ಉಮಾಪತಿ, ಧರ್ಮಕುಮಾರ್ ಸೇರಿದಂತೆ ಇತರರಿದ್ದರು.

ಇಂದು ಹುಚ್ಚಪ್ಪದಾಸರ ವಿಚಾರ ಸಂಕಿರಣ
ತುಮಕೂರು: ತುಮಕೂರಿನ ಕ್ಯಾತ್ಸಂದ್ರದಲ್ಲಿರುವ ಕವಿತಾಕೃಷ್ಣ ಸಾಹಿತ್ಯಮಂದಿರದಲ್ಲಿ ಹಿರಿಯ ಕವಿ, ಕಥನ ಕೀರ್ತನಕಾರ ಸಿ. ಹುಚ್ಚಪ್ಪದಾಸರ ಕುರಿತು ನ. 24 ರಂದು ಬೆಳಗ್ಗೆ 10 ಗಂಟೆಗೆ ವಿಚಾರ ಸಂಕಿರಣ ಹಾಗೂ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಏರ್ಪಾಟಾಗಿದೆ. ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಪ್ರಶಸ್ತಿ ಪ್ರಧಾನ ಮಾಡಲಿದ್ದು, ತುಮಕೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಕುಮುದಾ ಕೃತಿ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಹಿತಿ ಸೀಗೇಹಳ್ಳಿ ನಾರಾಯಣ್, ಗುಬ್ಬಿ ತಾಪಂ ಮಾಜಿ ಅಧ್ಯಕ್ಷ ಗೋವಿಂದರಾಜು ಪಾಲ್ಗೊಳ್ಳಲ್ಲಿದ್ದಾರೆ. ಜ.ನ. ಪುಟ್ಟಯ್ಯ, ಕಮಲಾ ಬಡ್ಡಿಹಳ್ಳಿ, ಬಿ.ಎಚ್. ರಾಧಾಮಣಿ ಉಪನ್ಯಾಸ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ವಿದ್ಯಾವಾಚಸ್ಪತಿ ಕವಿತಾಕೃಷ್ಣ ವಹಿಸಲಿದ್ದಾರೆ.

ಇನ್ಫೋಸಿಸ್‌ನಿಂದ 35 ವಿದ್ಯಾರ್ಥಿಗಳ ಆಯ್ಕೆ
ಹಾಸನ: ರಾಷ್ಟ್ರದ ಪ್ರತಿಷ್ಠಿತ ಸಾಫ್ಟ್‌ವೇರ್ ಸಂಸ್ಥೆಗಳಲ್ಲಿ ಒಂದಾದ ಇನ್ಫೋಸಿಸ್ ಕಂಪನಿಯು ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ 35 ವಿದ್ಯಾರ್ಥಿಗಳನ್ನು ನ.19 ಮತ್ತು 20ರಂದು ನಡೆದ ಕ್ಯಾಂಪಸ್‌ಪ್ಲೇಸ್‌ಮೆಂಟ್‌ನಲ್ಲಿ ಆಯ್ಕೆ ಮಾಡಲಾಯಿತು.   ಆಯ್ಕೆಯಾಗಿರುವ 35 ವಿದ್ಯಾರ್ಥಿಗಳನ್ನು ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ವಿ. ಸತ್ಯನಾರಾಯಣ, ಟ್ರೈನಿಂಗ್ ಹಾಗೂ ಪ್ಲೇಸ್ಮೆಂಟ್ ಅಧಿಕಾರಿ ಹಾಗೂ ಉಪಪ್ರಾಂಶುಪಾಲ ಡಾ.ಕೆ.ಎಸ್. ಜಯಂತ, ಉಪಪ್ರಾಂಶುಪಾಲ ಡಾ.ಎಂ.ಎಸ್.ರವಿಪ್ರಕಾಶ ಮತ್ತು ಸಹಾಯಕ ಪ್ಲೇಸ್ಮೆಂಟ್ ಅಧಿಕಾರಿ ಎಂ.ಕೆ.ರವಿಶಂಕರ ಅಭಿನಂದಿಸಿದ್ದಾರೆ.

ಇಂದು ಹೊ.ನ.ಪುರದಲ್ಲಿ ಕುಸ್ತಿ ಪಂದ್ಯಾವಳಿ
ಹೊಳೆನರಸೀಪುರ: ಪಟ್ಟಣದ ಗರಡಿ ಮನೆ ಜೀರ್ಣೋದ್ಧಾರ ಆಂಗವಾಗಿ ಜೈ ವೀರ ಹನುಮಾನ್ ದೊಡ್ಡಗರಡಿ ವತಿಯಿಂದ ಕುಸ್ತಿ ಪಂದ್ಯಗಳನ್ನು ನ. 24 ರಂದು ಸಂಜೆ 4ಕ್ಕೆ ಪಟ್ಟಣದ ದೊಡ್ಡಗರಡಿ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಜೈವೀರ ಹನುಮಾನ್ ಗರಡಿ ಅಧ್ಯಕ್ಷ, ಪುರಸಭೆ ಮಾಜಿ ಅಧ್ಯಕ್ಷ ಟಿ.ಮಲ್ಲೇಶ್ ಹಾಗೂ ಕಾರ್ಯದರ್ಶಿ ಹಾಗೂ ಪುರಸಭೆ ಸದಸ್ಯ ಎಚ್.ವಿ.ಪುಟ್ಟರಾಜು ತಿಳಿಸಿದ್ದಾರೆ. ಕುಸ್ತಿ ಪಂದ್ಯವನ್ನು ಮಾಜಿ ಸಚಿವ ಎಚ್.ಡಿ. ರೇವಣ್ಣ, ಪತ್ನಿ ಭವಾನಿ ರೇವಣ್ಣ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸೂರಜ್ ರೇವಣ್ಣ,  ಪ್ರಜ್ವಲ್ ರೇವಣ್ಣ ಹಾಗೂ ಜೆಡಿಎಸ್ ಮುಖಂಡ ಟಿ.ಶಿವಕುಮಾರ್, ಮೈಸೂರಿನ ಮಾಜಿ ಮಹಾಪೌರ ದ್ರುವಕುಮಾರ್ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.