ಮುನಿಯೂರಿನಲ್ಲಿ ಮೇಳೈಸಿದ ಕನ್ನಡ ಹಬ್ಬ
ಗ್ರಾಮದ ತುಂಬೆಲ್ಲಾ ರಂಗೋಲಿ, ತಳಿರು ತೋರಣಗಳ ಸಾಲು ಸಾಲು
ಕನ್ನಡಪ್ರಭ ವಾರ್ತೆ, ತುರುವೇಕೆರೆ, ನ,24
ಗ್ರಾಮದ ತುಂಬೆಲ್ಲಾ ರಂಗೋಲಿ, ತಳಿರು ತೋರಣಗಳ ಸಾಲು ಸಾಲು. ಬೆಳಗ್ಗೆ 7 ಕ್ಕೆ ಜಾನಪದ ಕಲಾ ತಂಡಗಳೊಂದಿಗೇ ಕನ್ನಡಾಂಬೆಯ ಸ್ತಬ್ಧ ಚಿತ್ರ ಎತ್ತಿನ ಗಾಡಿಯಲ್ಲಿ ಮೆರವಣಿಗೆ. ಮನೆ ಮುಂದೆ ನಿಂತ ಜನರು ಕೈ ಮುಗಿದು ಕನ್ನಡಾಂಬೆಗೆ ಕೈ ಮುಗಿದರು. ಕೆಲವರು ಹಣ್ಣು ಕಾಯಿ ಮಾಡಿಸಿ ಪೂಜೆಯನ್ನೂ ಮಾಡಿಸಿದರು.
ಇದು ಕನ್ನಡದ ಹಬ್ಬದ ನಿಮಿತ್ತ ನಡೆದ ಲಕ್ಷ್ಮೀರಂಗನಾಥಸ್ವಾಮಿ ಭಜನಾ ಮಂಡಲಿಯ 11 ನೇ ವಾರ್ಷಿಕೋತ್ಸವ ಕಾರ್ಯಕ್ರಮ. ಎಲ್ಲರ ಗಮನ ಸೆಳೆದದ್ದು ವಿಶೇಷ.
ಕನ್ನಡ ನಾಡಿನಲ್ಲಿ ಕನ್ನಡಾಂಬೆ ನೊಂದುಕೊಳ್ಳುತ್ತಿದ್ದಾಳೆ. ಆಂಗ್ಲ ಭಾಷಾ ವ್ಯಾಮೋಹಿಗಳಾಗಿರುವ ಜನರು ಕನ್ನಡ ಮಾತು ಆಡಿದರೆ ಅವಮಾನ ಎಂಬಂತೆ ವರ್ತಿಸುತ್ತಿದ್ದಾರೆ. ಇದರಿಂದಾಗಿ ನಮ್ಮ ಹೆತ್ತಮ್ಮನನ್ನೇ ಅವಮಾನ ಮಾಡಿದಂತೆ. ಆದ್ದರಿಂದ ಎಲ್ಲರೂ ಕನ್ನಡ ಭಾಷೆಯ ಬಗ್ಗೆ ವ್ಯಾಮೋಹಿಗಳಾಗಬೇಕು. ಭಾಷೆಯ ಬಗ್ಗೆ ಹೃದಯ ವೈಶಾಲ್ಯತೆ ಮೆರೆಯಬೇಕು ಎಂದು ಬಾಣಸಂದ್ರದ ವಿಎಸ್ಎಸ್ಎನ್ ಕಾಲೇಜಿನ ಉಪನ್ಯಾಸಕ ಸಿ.ಪಿ. ನಂದೀಶ್ ಹೇಳಿದರು.
ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರಂಗಧಾಮಯ್ಯ,ನಿವೃತ್ತ ಮುಖ್ಯ ಶಿಕ್ಷಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೋಮಶೇಖರಯ್ಯ, ಜನತಾ ಕ್ಲಿನಿಕ್ ನ ವೈದ್ಯ ಡಾ.ಎ.ನಾಗರಾಜ್ ಅವರನ್ನು ಗೌರವಿಸಲಾಯಿತು.
ಕನ್ನಡ ಧ್ವಜಾರೋಹಣವನ್ನು ತಾಲೂಕು ಪಂಚಾಯ್ತಿ ಸದಸ್ಯ ಎಂ.ಆರ್.ರಾಮಚಂದ್ರಯ್ಯ ನೆರವೇರಿಸಿದರು. ಮುನಿಯೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕುಸುಮಾ, ಗ್ರಾಮದ ಮುಖಂಡ ಎಂ.ಡಿ.ಮೂರ್ತಿ, ರಂಗನಾಥ ಯುವಕ ಸಂಘದ ಅಧ್ಯಕ್ಷ ಟಿ.ಚಂದ್ರು, ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಂ.ಆರ್.ರಾಜಶೇಖರ್, ಬ್ಯಾಟರಾಯಪ್ಪ, ಹಾಲು ಉತ್ಪಾದಕರ ಸಂಘದ ನಿರ್ದೇಶಕ ಮಹಲಿಂಗಪ್ಪ, ಎಪಿಎಂಸಿ ನಿರ್ದೇಶಕ ಕುಶಾಲ್ ಕುಮಾರ್, ದೇವಾಂಗ ಸಂಘದ ಅಧ್ಯಕ್ಷ ಚಿದಂಬರ್, ಗ್ರಾಮ ಪಂಚಾಯ್ತಿ ಸದಸ್ಯ ಕೀರ್ತಿ, ಸಂಘದ ಉಪಾಧ್ಯಕ್ಷ ಎಂ.ಸಿ.ಶಂಕರ್, ಖಜಾಂಚಿ ಎಂ.ಟಿ.ಅಶ್ವತ್ಥ ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಎಸ್.ಶಿವರಾಜು ಮೊದಲಾದವರು ಭಾಗವಹಿಸಿದ್ದರು. ರಂಗನಾಥ ಕನ್ನಡ ಕಲಾ ಸಂಘದ ಅಧ್ಯಕ್ಷ ತಿಮ್ಮೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುನಿಯೂರಿನ ಭಗವಂತ್ ಬಸವಣ್ಣ ನವರ ತಂಡದ ಯಕ್ಷಗಾನ, ಆಲ್ಬೂರಿನ ನಟರಾಡಜು ತಂಡದವರ ಸೋಮನ ಕುಣಿತ ಮನಸೂರೆಗೊಂಡವು. ಶಿಕ್ಷಕ ಗಂಗಣ್ಣ ಸ್ವಾಗತಿಸಿದರು. ಶಿಕ್ಷಕ ರಾಜು ನಿರೂಪಿಸಿದರು. ಎಂ.ಸಿ.ಶಂಕರ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

