ಸುದ್ದಿ ಸಂಕ್ಷೇಪ
ಮಹಾಲಕ್ಷ್ಮೀ ಪೂಜೆಯಲ್ಲಿ ಅಪಾರ ಜನಸ್ತೋಮ
ಕೊರಟಗೆರೆ: ತಾಲೂಕಿನ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದಲ್ಲಿ ನಡೆದ ಮಹಾಲಕ್ಷ್ಮೀ ಪೂಜೆ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಜನಸ್ತೋಮ ಸೇರಿತ್ತು.
ರಾಜ್ಯದ ನಾನಾ ಮೂಲೆಗಳಿಂದ ಅಪಾರಸಂಖ್ಯೆಯಲ್ಲಿ ಮಹಿಳಾ ಭಕ್ತಾದಿಗಳು ಆಗಮಿಸಿ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಟ್ರಸ್ಟ್ ವತಿಯಿಂದ 25 ನೇ ರಜತ ಮಹೋತ್ಸವದ ಅಂಗವಾಗಿ 3 ದಿನಗಳ ಕಾಲ ವಿವಿಧ ಪೂಜೆ, ಉತ್ಸವ ಏರ್ಪಾಟಾಗಿತ್ತು.
ಟ್ರಸ್ಟ್ನ ಪದಾಧಿಕಾರಿಗಳು, ಇತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಇಂದು ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
ತುಮಕೂರು: ಬೆಳಗಾವಿ ನಗರದಲ್ಲಿ ಕಬ್ಬು ಬೆಳೆಗಾರರು ತಮ್ಮ ಬೇಡಿಕೆಗಳ ಈಡೇರಿಕೆಗೆ ನಡೆಸುತ್ತಿದ್ದ ಪ್ರತಿಭಟನಾ ಸಮಯದಲ್ಲಿ ಸರ್ಕಾರದ ಬೇಜಾಬ್ದಾರಿ ವರ್ತನೆಗೆ ಬೇಸತ್ತು ಕಬ್ಬು ಬೆಳೆಗಾರ ವಿಠಲ್ ಅರಭಾವಿ ವಿಷ ಕುಡಿದು ಆತ್ಮಹತ್ಯೆಗೆ ಮಾಡಿಕೊಂಡಿದ್ದು, ಬಿಜೆಪಿ ರೈತಮೋರ್ಚಾ ಘಟಕವು ತೀವ್ರವಾಗಿ ಸಂತಾಪ ವ್ಯಕ್ತಪಡಿಸಿ, ಸರ್ಕಾರದ ಬೇಜಾಬ್ದಾರಿ ನಿಲುವನ್ನು ಖಂಡಿಸಿದೆ.
ರೈತ ವಿರೋಧಿ ಸರ್ಕಾರದ ನಿಲುವನ್ನು ಖಂಡಿಸಿ, ಆತ್ಮಹತ್ಯೆಯ ವಿರುದ್ದ ಪ್ರತಿಭಟಿಸಲು ಬಿಜೆಪಿ ರೈತಮೋರ್ಚಾ ಘಟಕವು ನ.28 ರ ಗುರುವಾರ ಬೆಳಿಗ್ಗೆ ತುಮಕೂರು ಜಿಲ್ಲಾಧಿಕಾರಿಗಳವರ ಕಚೇರಿ ಎದುರು ಪ್ರತಿಭಟಿಸಲಿದೆ. ಈ ಪ್ರತಿಭಟನೆಗೆ ಬಿಜೆಪಿಯ ರೈತಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಆಗಮಿಸಬೇಕೆಂದು ಬಿಜೆಪಿ ರೈತಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಶಿವಪ್ರಸಾದ್ ಮತ್ತು ಜಿಲ್ಲಾಧ್ಯಕ್ಷ ಸಿದ್ದರಾಮಣ್ಣ (ಜಿ. ಅರಿವೇಸಂದ್ರ) ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

