ತುಮಕೂರು

ಸಂಸ್ಕೃತಿಯನ್ನೇ ಮರೆತ ವಿದ್ಯಾರ್ಥಿಗಳು

Published On :

ಕ.ಪ್ರ.ವಾರ್ತೆ ಕೊರಟಗೆರೆ ಸೆ.1
ಇಂದಿನ ವಿದ್ಯಾರ್ಥಿಗಳು ವಿದ್ಯಾರ್ಜನೆ ಬಿಟ್ಟು ಬೇರೆಲ್ಲಾ ವಿದ್ಯೆಗಳನ್ನು ಬಹುಬೇಗ ಕಲಿಯುವ ಮೂಲಕ ನಮ್ಮ ದೇಶದ ಸಂಸ್ಕೃತಿಯನ್ನೆ ಮರೆತು ತಪ್ಪು ದಾರಿ ಹಿಡಿಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಪ್ರಾಂಶುಪಾಲ ಲಕ್ಕಮುತ್ತಯ್ಯ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀನಿವಾಸ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರಸಕ್ತ ಸಾಲಿನ ಕ್ರೀಡಾ, ಸಾಂಸ್ಕೃತಿಕ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಮೊಬೈಲ್ ಫೋನ್ಗಳಿಗೆ ಮಾರು ಹೋಗಿ ದಾರಿ ತಪ್ಪುತ್ತಿದ್ದಾರೆ. ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳನ್ನೆ ಮರೆಯುತ್ತಿದ್ದು, ಗುರುಹಿರಿಯಲ್ಲಿ ಗೌರವ ಭಾವನೆ ಇಲ್ಲವಾಗುತ್ತಿರುವುದು ದೊಡ್ಡ ದುರಂತ. ಗ್ರಾಮೀಣ ಕ್ರೀಡೆಗಳ ಮೌಲ್ಯ ನಶಿಸಿ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಬೆಳೆಸುತ್ತಿರುವುದರಿಂದ ಸಮಾಜ ಮುಂದೊಂದು ದಿನ ಅಳಿವಿನಂಚಿಗೆ ತಲುಪಲಿದೆ ಎಂದರು.
ಕೊರತೆ: ಶ್ರೀನಿವಾಸ ಕಾಲೇಜಿನ ಪ್ರಾಂಶುಪಾಲ ಎಚ್.ಡಿ. ಶ್ರೀನಿವಾಸ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳ ಕೊರತೆ ಇದೆ. ಸಂಬಂಧಗಳ ಮಹತ್ವವೇ ಹಾಳಾಗುತ್ತಿದೆ ಎಂದರು. ಕೋಳಾಲ ಬಸವೇಶ್ವರ ಕಾಲೇಜಿನ ಪ್ರಾಂಶುಪಾಲ ಕೃಷ್ಣಯ್ಯ ಮಾತನಾಡಿದರು. ಪಟ್ಟಣದ ಕಿಯೋನಿಕ್ಸ್ (ಶ್ರೀರಾಮ್ ಫ್ಯೂಚರ್ಟೆಕ್) ಕಂಪ್ಯೂಟರ್ ತರಬೇತಿ ಸಂಸ್ದೆಯ ತೊಳಸಮ್ಮ, ಕೆ.ರಂಗಯ್ಯ ವತಿಯಿಂದ ಹಾಗೂ ಉಪನ್ಯಾಸಕರಾದ ದಯಾನಂದ್, ನಟರಾಜು, ಗುರುಪ್ಪಗೌಡ, ಶಿವಶಂಕರಯ್ಯ ಅವರಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಿಯೋನಿಕ್ಸ್ನ ಎ.ಆರ್. ಚಿದಂಬರ, ಉಪನ್ಯಾಸಕರಾದ ಮಾಯಣ್ಣ, ರಾಮಲಿಂಗೇಗೌಡ, ಸಣ್ಣಸಿದ್ದಪ್ಪ, ಎ.ರಮೇಶ್, ಮೆಹೆರ್ತಾಜ್, ರಫತ್ ಜಬೀನಾ, ಉಮಾದೇವಿ, ಹೊನ್ನಪ್ಪ, ಅವಸರಿಗಯ್ಯ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.