ತುಮಕೂರು

ಕೃಷ್ಣ ಜನ್ಮಾಷ್ಟಮಿ ಹಬ್ಬ ಆಚರಣೆಗೆ ಸೀಮಿತ ಬೇಡ'

Published On :

ತುಮಕೂರು: ಕೃಷ್ಣ ಜನ್ಮಾಷ್ಟಮಿ ಕೇವಲ ಹಬ್ಬ ಆಚರಣೆಗೆ ಮಾತ್ರ ಸೀಮಿತವಾಗದೆ ಕೃಷ್ಣನಲ್ಲಿರುವ ಗುಣ ಮಕ್ಕಳಿಗೆ ಬರಬೇಕು ಎಂದು ಹಾಸ್ಯ ಕಲಾವಿದ ಜಿ.ಕೆ. ಕುಲಕರ್ಣಿ ಅಭಿಪ್ರಾಯಪಟ್ಟರು. ಅವರು ನಗರದ ಕೆ.ಆರ್. ಬಡಾವಣೆಯ ಶ್ರೀರಾಮಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ, ಸಂಸ್ಕಾರ ಭಾರತಿ ಮತ್ತು ಜನ ಕಲ್ಯಾಣ ವಿಶ್ವಸ್ಥ ಮಂಡಳಿ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ ಶ್ರೀಕೃಷ್ಣ ಪುರಾಣ ಪುರುಷನೂ ಹೌದು ಇತಿಹಾಸ ಪುರುಷನೂ ಹೌದು ಎಂದರು. ಕೃಷ್ಣ ಸ್ನೇಹ ಜೀವಿ ಎಂದು ಬಣ್ಣಿಸಿದ ಅವರು ತಾಯಂದಿರು ಮಕ್ಕಳಿಗೆ ಉತ್ತಮವಾದ ಸಂಸ್ಕಾರದ ಜತೆಯಲ್ಲಿ ಇಂದಿನ ಸಂಸ್ಕೃತಿಯ ಬಗ್ಗೆ ಹಾಗೂ ಕೃಷ್ಣನಲ್ಲಿರುವ ಆದರ್ಶ ಹಾಗೂ ಶೂರತ್ವ, ಧೀರತ್ವದ ಬಗ್ಗೆ ತಿಳಿಸಬೇಕು ಎಂದರು. ಕೇವಲ ಪುಸ್ತಕ ಓದಿನ ಬಗ್ಗೆ ಮಾತ್ರ ಗಮನಹರಿಸದೆ ಇಂತಹ ಮಹಾನ್ ಪುರುಷರ ಬಗ್ಗೆ ತಿಳಿದುಕೊಂಡು ಸತ್ಜ್ರಜೆಗಳಾದಾಗ ಮಾತ್ರ ಇಂತಹ ಜನ್ಮಾಷ್ಟಮಿ ಕಾರ್ಯಕ್ರಮ ಸಾರ್ಥಕವಾಗುತ್ತದೆ ಎಂದರು. ಸಮಾರಂಭದಲ್ಲಿ 200 ಕ್ಕೂ ಹೆಚ್ಚು ಮುದ್ದು ಮುದ್ದಾದ ಕೃಷ್ಣನ ವೇಷ ತೊಟ್ಟ ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮದ ನಿಮಿತ್ತ ನಡೆದ ಭಗವದ್ಗೀತೆ ಕಂಠಪಾಠ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ದೇವರ ನಾಮ ಸ್ಪರ್ಧೆ, ರಸಪ್ರಶ್ನೆ, ದೇಶಭಕ್ತಿಗೀತೆ, ರಂಗಗೀತೆ ಸ್ಪರ್ಧೆ, ಭಜನಾ ಸ್ಪರ್ಧೆ, ಮೊಸರು ಕುಡಿಕೆ ಒಡಿಯುವ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಮಾರಂಭದಲ್ಲಿ 30 ಅಡಿ ಎತ್ತರದ ಜಾರುವ ಮಲ್ಲಕಂಬ ಏರಿ ಮಡಿಕೆ ಹೊಡಿಯುವ ಸಾಹಸಮಯ ಸ್ಪರ್ಧೆಯಲ್ಲಿ ಹರೀಶ್ ಶೆಟ್ಟಿಹಳ್ಳಿ ಮೊದಲ ಸ್ಥಾನ ಹಾಗೂ ಪಿರಮಿಡ್ ಮಾಡಿಕೊಂಡು ಮಡಿಕೆ ಹೊಡಿಯುವ ಸ್ಪರ್ಧೆಯಲ್ಲಿ ಶ್ರೀ ಮಾರುತಿ ಯುವಕರ ಸಂಘ ಮೊದಲ ಬಹುಮಾನ ಪಡೆದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ಕ್ಷೇತ್ರ ಶಿಕ್ಷಣಾಧಿಕಾರಿ ಕುಮುದಮ್ಮ ವಹಿಸಿದ್ದರು.
ಡಾ. ತಿಪ್ಪೇಸ್ವಾಮಿಗೆ ಟಿಕೆಟ್ ನೀಡಲು ಒತ್ತಾಯ
ಶಿರಾ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಡಾ. ಜೆ.ಜೆ. ತಿಪ್ಪೇಸ್ವಾಮಿ ಅವರಿಗೆ ಟಿಕೆಟ್ ನೀಡಬೇಕೆಂದು ಮಾದಿಗ ದಂಡೋರ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಗೋಡು ಯೋಗಾನಂದ್ ಹಾಗೂ ಕಾರ್ಯಾಧ್ಯಕ್ಷ ಕೆ. ಭೂತರಾಜು ಒತ್ತಾಯಿಸಿದ್ದಾರೆ. ತುಮಕೂರು ಜಿಲ್ಲೆಯ ಪಾವಗಡ ಮತ್ತು ಶಿರಾ ತಾಲೂಕುಗಳಲ್ಲಿ 1 ಲಕ್ಷಕ್ಕೂ ಅಧಿಕ ಎಡಗೈ ಮಾದಿಗರ ಮತಗಳಿವೆ ಮತ್ತು 8 ವಿಧಾನಸಭಾ ಕ್ಷೇತ್ರಗಳಿಂದ 4.5 ಲಕ್ಷ ಮಾದಿಗ ಮತಗಳಿವೆ ಕಳೆದ ಬಾರಿ ಡಾ.ಜೆ.ಜೆ.ತಿಪ್ಪೇಸ್ವಾಮಿ ಚುನಾಣೆಗೆ ಸ್ಪರ್ಧಿಸಿ 2.5 ಲಕ್ಷ ಮತಗಳನ್ನು ಪೆಡಿದ್ದರು ಹಾಗೂ ಇವರು ಎಲ್ಲಾ ಜಾತಿಗಳ ಕಾರ್ಯಕರ್ತರ ಸಂಪರ್ಕ ಹೊಂದಿದ್ದಾರೆ. ಆದ್ದರಿಂದ ಡಾ.ಜೆ.ಜೆ.ತಿಪ್ಪೇಸ್ವಾಮಿ ಅವರಿಗೆ ಟಿಕೆಟ್ ನೀಡಬೇಕು. ಇಲ್ಲವಾದಲ್ಲಿ ಈ ಮತಗಳು ವಿಭಜನೆಯಾಗುವ ಸಂಭವವಿದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.