ಉನ್ನತ ಸ್ಥಾನದಲ್ಲಿರುವವರ ಮಾತು ತೂಕವಾಗಿರಬೇಕು
ಚಿಕ್ಕನಾಯಕನಹಳ್ಳಿ: ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಟೀಕಿಸುವ ನೈತಿಕತೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಇಲ್ಲ ಎಂದು ತುಮಕೂರು ಲೋಕಸಭಾ ಜೆಡಿಎಸ್ ಅಭ್ಯರ್ಥಿ ಎ.ಕೃಷ್ಣಪ್ಪ ತೀಕ್ಷಣವಾಗಿ ಪ್ರತಿಕ್ರಿಯಿಸಿದರು.
ಈ ಸಂಬಂದ ಇಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಉನ್ನತ ಸ್ಥಾನದಲ್ಲಿರುವವರ ಮಾತುಗಳು
ತೂಕವಾಗಿರಬೇಕು. ಇಲ್ಲದಿದ್ದರೆ ಬಾಯಿಗೆ ಬೀಗ ತಗುಲಿಸಿಕೊಂಡು ಸುಮ್ಮನಿರಬೇಕು. ನಾಲಿಗೆಯಿದೆಯೆಂದು
ಬಾಯಿಗೆ ಬಂದ ಹಾಗೆ ಮಾತನಾಡಿದರೆ ತಮ್ಮ ಸ್ಥಾನದ ಘನತೆಯನ್ನು ಕಳೆದುಕೊಳ್ಳುತ್ತಾರೆ. ಡಾ. ಜಿ.ಪರಮೇಶ್ವರ್ ಅವರು, ಎಚ್.ಡಿ.ದೇವೇಗೌಡರು ಜೆಡಿಎಸ್ ಸೋತರೆ ವಿಷಕುಡಿಯುವುದಾಗಿ ಹೇಳಿದ್ದನ್ನು ಪ್ರಸ್ತಾಪಿಸಿ ಅವರು ಇನ್ನು ಏಕೆ ಕುಡಿದಿಲ್ಲ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ನವರು ಬೇರೆ ಪಕ್ಷದವರಿಗೆ ವಿಷ ಕುಡಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಆಡುವ ಮಾತಿನಲ್ಲಿ ಹಿಡಿತವಿರದಿದ್ದರೆ, ಅದಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ,ಅವರು ಸುಮ್ಮನಿರಲಿ ಎಂದು ಎಚ್ಚರಿಕೆ ನೀಡಿದರು.
ತೃತೀಯ ರಂಗದ ನಾಯಕರು ದೇವೇಗೌಡರ ಬಗ್ಗೆ ಇಟ್ಟಿರುವ ಗೌರವದಿಂದ ತೃತೀಯ ರಂಗದ ನೇತೃತ್ವ ವಹಿಸಿಕೊಳ್ಳಿ, ನೀವೇ ಪ್ರಧಾನಿಯಾಗಿ ಎಂದು ದುಂಬಾಲು ಬಿದ್ದಿದ್ದಾರೆ. ಆದರೆ ದೇವೇಗೌಡರಿಗೆ ರಾಜ್ಯದ ಬಗ್ಗೆ ಕಾಳಜಿಯಿದೆ. ಆದ್ದರಿಂದ ರಾಜ್ಯದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸುವ ಮೂಲಕ, ನಿಷ್ಕಳಂಕ ವ್ಯಕ್ತಿತ್ವದ, ಭ್ರಷ್ಟಾಚಾರ ರಹಿತ ಆಡಳಿತ ನೀಡಿದ, ದೊಡ್ಡಗೌಡರನ್ನು ಮತ್ತೊಮ್ಮೆ ಈ ದೇಶದ ಪ್ರಧಾನಿ ಮಾಡಲು ಸಹಕರಿಸಿ ಎಂದರು.
ಸ್ಪರ್ಧಿಸಲು ಆಸಕ್ತಿಯಿರಲಿಲ್ಲ: ಈ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಅಂತಹ ಆಸಕ್ತಿಯಿರಲಿಲ್ಲ, ಆದರೆ ಗೌಡರ ಒತ್ತಾಸೆಯ ಮೇರೆಗೆ ನಾನು ಸ್ಪರ್ಧಿಸಿದ್ದೇನೆ. ಇಲ್ಲಿಗೆ ಬರುವ ಮೊದಲು ಪತ್ರಿಕೆಗಳಲ್ಲಿ ನನ್ನ ವಿರುದ್ಧ ಜಿಲ್ಲೆಯ ಜೆಡಿಎಸ್ ಶಾಸಕರು ವಿರೋಧವಿದ್ದಾರೆಂದು ಬರೆದವು. ಆದರೆ ಅದೆಲ್ಲಾ ಸುಳ್ಳು, ಎಲ್ಲಾ ಶಾಸಕರು ನನಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರ ಮಾತನ್ನು ನಂಬಿ ಬಂದಿದ್ದೇನೆ. ಸುರೇಶ್ಬಾಬು ಅವರು ಸದಾ ನನ್ನ ಜೊತೆಯಲ್ಲಿದ್ದಾರೆ. ಜಿಲ್ಲೆಯಲ್ಲಿರುವ 3 ಪ್ರಮುಖ ಸಮಸ್ಯೆಗಳಾದ ನೀರಾವರಿ, ವಿದ್ಯುತ್, ಕೃಷಿಮಾರುಕಟ್ಟೆಗಳ ಸ್ಥಾಪನೆ ಬಗ್ಗೆ ವಿಶೇಷ ಕ್ರಮಕೈಗೊಳ್ಳುವುದಾಗಿ ನುಡಿದರು. ಈ ಸಂದರ್ಭದಲ್ಲಿ ಶಾಸಕ ಸಿ.ಬಿ. ಸುರೇಶ್ಬಾಬು, ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್, ಪುರಸಭಾಧ್ಯಕ್ಷೆ ಗೀತಾ, ಸ್ಥಾಯಿಸಮಿತಿ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

