ಲೋಕೇಶ್ವರರಿಂದ ಮನೆ ಮನೆಗೆ ತೆರಳಿ ಮತಯಾಚನೆ
ತಿಪಟೂರು: ದೇಶದ ಅಭಿವೃದ್ಧಿಗೆ ಮತ್ತು ಜನಸಾಮಾನ್ಯರ ಕಷ್ಟಕೋಟಲೆಗಳನ್ನು ನಿವಾರಿಸಲು ಬಿಜೆಪಿಗೆ ಮತ ನೀಡಬೇಕೆಂದು ಮುಖಂಡ ಲೋಕೇಶ್ವರ ತಾಲೂಕಿನ ಕಲ್ಲೇಗೌಡನಪಾಳ್ಯದಲ್ಲಿ ಮನೆ ಮನೆಗೆ ತೆರಳಿ ಮತ ಯಾಚಿಸಿದರು.
ಲೋಕೇಶ್ವರ ಮತ್ತು ಕಾರ್ಯಕರ್ತರು ಬೆಳಿಗ್ಗೆ 9.30ರಲ್ಲಿ ಶಾಸಕ ಕೆ. ಷಡಕ್ಷರಿಯವರ ಗ್ರಾಮ ಕಲ್ಲೇಗೌಡನಪಾಳ್ಯದ ಗ್ರಾಮದೇವರಾದ ಶ್ರೀ ಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಾತನಾಡುತ್ತಾ ಈ ಬಾರಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು ಮೋದಿಯವರೇ ಪ್ರಧಾನಿಯಾಗಲಿದ್ದಾರೆ. ಮುಂದಿನ ಕೆಲವೇ ದಿನಗಳಲ್ಲಿ ದೇಶದ ಅಭಿವೃದ್ಧಿಯಲ್ಲಿ ಭಾರೀ ಬದಲಾವಣೆಯಾಗಲಿದ್ದು, ಯುವಕರಿಗೆ ಉದ್ಯೋಗ ಸೃಷ್ಟಿ, ರೈತರ ಜ್ವಲಂತ ಸಮಸ್ಯೆಗಳಿಗೆ ತಕ್ಕ ಪರಿಹಾರಗಳನ್ನು ಮೋದಿಯವರು ಕಂಡುಕೊಳ್ಳಲಿದ್ದಾರೆ. ಒಟ್ಟಾರೆ ಈ ಬಾರಿ ದೇಶಕ್ಕೆ ಹೊರೆಯಾಗಿರುವ ಕಾಂಗ್ರೆಸ್ ಅನ್ನು ಅಧಿಕಾರ ಗದ್ದುಗೆಯಿಂದ ಹಿಮ್ಮೆಟ್ಟಲು ಮತದಾರರು ನಮ್ಮ ಅಭ್ಯರ್ಥಿ ಜಿ.ಎಸ್. ಬಸವರಾಜು ಅವರನ್ನು ಗೆಲ್ಲಿಸುವ ಮೂಲಕ ಬಿಎಸ್ವೈ ಅವರ ಕೈಬಲಪಡಿಸಲು ಮತ ನೀಡಿ ಸಹಕರಿಸಬೇಕೆಂದು ಲೋಕೇಶ್ವರ ಮನವಿ ಮಾಡಿದರು. ನಂತರ ತಾಲೂಕಿನ ಹಳೇಪಾಳ್ಯ, ಮಾರನನಗೆರೆ, ಶಾರದಾನಗರ ಸೇರಿದಂತೆ ನಾನಾ ಗ್ರಾಮಗಳಲ್ಲಿ ಲೋಕೇಶ್ವರ ಸಂಜೆವರೆಗೂ ಮತ ಯಾಚಿಸಿದರು. ಪ್ರಚಾರದಲ್ಲಿ ಮುಖಂಡರಾದ ನಿಜಗುಣ, ಜಿ.ಹೆಚ್. ರಾಜು, ಯದುನಂದನ, ಸುಧಾಕರ್, ಕೆ. ಶಿವಶಂಕರ್, ಎಂಸಿ. ಬಸವರಾಜು, ಕೆ.ಸಿ. ಶಿವಣ್ಣ, ಷಡಕ್ಷರಿ, ನಟರಾಜು, ಕೆ.ಬಿ. ಬಸವರಾಜು, ಕುಮಾರ್, ನಾಗೇಶ್, ನವೀನ್, ವೇದಮೂರ್ತಿ, ಶಿವಬಸವಯ್ಯ, ಜಗದೀಶ್, ಕೆ.ಸಿ. ರಾಜಶೇಖರ್, ರವಿ, ಕೆ.ಸಿ. ಮಲ್ಲಿಕಾರ್ಜುನ್, ಮರಿಕಲ್ಲೇಶ್ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

