ಕೆಂಕೆರೆ ಕಾಳಮ್ಮದೇವಿ ಅಗ್ನಿಕುಂಡೋತ್ಸವ
ಹುಳಿಯಾರು: ಹೋಬಳಿ ಕೆಂಕೆರೆ ಗ್ರಾಮದಲ್ಲಿ ಆರಂಭಗೊಂಡಿರುವ ಗ್ರಾಮದೇವತೆ ಶ್ರೀಕಾಳಿಕಾಂಭದೇವಿಯ
ಜಾತ್ರಾಮಹೋತ್ಸವದಲ್ಲಿ ಭಾನುವಾರ ಸಂಜೆ ಅಮ್ಮನವರ ಅಗ್ನಿಕುಂಡೋತ್ಸವ ಕಾರ್ಯ ಅಪಾರ ಸಂಖ್ಯೆಯ
ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿತು. ಕೆಂಕೆರೆ ಕಾಳಮ್ಮ ಹಾಗೂ ದಮ್ಮಡಿಹಟ್ಟಿ ಈರಬೊಮ್ಮಕ್ಕದೇವರ ಸಮ್ಮುಖದಲ್ಲಿ ಮಲ್ಲೇಶಪ್ಪನವರ ಮನೆಯಿಂದ ಕಳಸವನ್ನು ಸಿದ್ಧಗೊಳಿಸಿಕೊಂಡು ಸಕಲವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ದೇವಾಲಯದ ಆವರಣದಲ್ಲಿ ಭೇಟಿ ನಡೆದು ನಂತರ ಗ್ರಾಮದ ಸಮೀಪವಿರುವ ಪುರಾತನಬಾವಿಯಲ್ಲಿ ಗಂಗಾಪೂಜೆ ಮಾಡಿ, ನೂರಾರು ಭಕ್ತರ ಹರ್ಷೋದ್ಗಾರದೊಂದಿಗೆ ಕಳಸ ಹೊತ್ತ ಮಹಿಳೆ ಹಾಗೂ ದೇವರು ಅಗ್ನಿಕುಂಡವನ್ನು ಹಾಯುವ ಮೂಲಕ ಕಾರ್ಯ ನೆರವೇರಿತು.
ಶಿಬಿರ ಮುಂದೂಡಿಕೆ
ತುಮಕೂರು: ಮಧುಗಿರಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಏ. 17 ರಂದು ಶಿರಾ ತಾಲೂಕಿನಲ್ಲಿ ನಡೆಯಬೇಕಿದ್ದ ಶಿಬಿರ (ಕ್ಯಾಂಪ್) ವನ್ನು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರದ್ದುಗೊಳಿಸಿ, ಈ ಶಿಬಿರವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಏ. 22 ರಂದು ಮರುನಿಗದಿ ಪಡಿಸಲಾಗಿದೆ ಎಂದು ಮಧುಗಿರಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಮಾಂಸ ಮಾರಾಟ ನಿಷೇಧ
ತುಮಕೂರು:ಶ್ರೀರಾಮನವಮಿ ಪ್ರಯುಕ್ತ ಏ. 8 ರಂದು ಮಾಂಸ ಮಾರಾಟ ನಿಷೇಧಿತ ದಿನವೆಂದು ಘೋಷಿಸಲಾಗಿದೆ ಎಂದು ತುಮಕೂರು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏ.8ರ ಮಧ್ಯರಾತ್ರಿ 12 ಗಂಟೆಯವರೆಗೆ ತುಮಕೂರು ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಸಾಯಿಖಾನೆ ಹಾಗೂ ಎಲ್ಲಾ ರೀತಿಯ ಮಾಂಸ ಮಾರಾಟ ಮಳಿಗೆಗಳನ್ನು ಮುಚ್ಚುವುದು, ಈ ಅವಧಿಯಲ್ಲಿ ಮಾಂಸ ಮಾರಾಟ ಮಾಡುವುದಾಗಲಿ, ಸಂಗ್ರಹಣೆ ಮಾಡುವುದಾಗಲಿ ನಿಷೇಧಿಸಿದೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

