ವೈದ್ಯರೇ ಬರಲ್ಲ, ನಾನೇನು ಮಾಡ್ಲಿ: ಶಾಸಕ ಕೃಷ್ಣಪ್ಪ
Published On :
ತುರುವೇಕೆರೆ: ಸರ್ಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸಲು ಬಹು ಪಾಲು ವೈದ್ಯರು ಮುಂದೆ ಬರುತ್ತಿಲ್ಲ. ಅದಕ್ಕೂ ಮಿಗಿಲಾಗಿ ಗ್ರಾಮೀಣ ಪ್ರದೇಶಕ್ಕಂತೂ ಬರುವುದೇ ಇಲ್ಲ. ಇಂತಹ ಸ್ಥಿತಿ ಕೇವಲ ನ್ಮು ಕ್ಷೇತ್ರದಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲೇ ಇಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ವಿಷಾದಿಸಿದ್ದಾರೆ.
ತಾಲೂಕಿನ ದಬ್ಬೇಘಟ್ಟ ಹಾಗೂ ಸುತ್ತ ಮುತ್ತಲ ಜನರು ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಬಹಿಷ್ಕಾರ ಮಾಡುವ ಬೆದರಿಕೆ ಹಾಕಿದ್ದಾರೆ. ಇದರಲ್ಲಿ ಆಸ್ಪತ್ರೆಗೆ ವೈದ್ಯರು ಇಲ್ಲ ಎಂಬುದೂ ಸೇರಿದೆ. ಸರ್ಕಾರ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರುಗಳಿಗೆ ಸೂಕ್ತ ಗೌರವ ಧನವನ್ನು ನಿಗದಿ ಮಾಡಿಲ್ಲ. ಹಣ ಕಡಿಮೆ ಎಂಬ ಕಾರಣಕ್ಕೆ ಯಾವ ವೈದ್ಯರೂ ಸರ್ಕಾರಿ ಆಸ್ಪತ್ರೆಗೆ ಕರ್ತವ್ಯ ನಿರ್ವಹಿಸಲು ಮುಂದೆ ಬರುವುದಿಲ್ಲ ಇದಕ್ಕೆ ನಾನೇನು ಮಾಡಲಿ ಎಂದು ಪ್ರಶ್ನಿಸಿದ್ದಾರೆ. ತಾವು ವಿಧಾನಸಭೆಯಲ್ಲಿ ಹಲವಾರು ಬಾರಿ ಪ್ರಶ್ನಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಕೃಷ್ಣಪ್ಪ ಹೇಳಿದರು.
ಕುಡಿಯುವ ನೀರಿಗೆ ಆ ಭಾಗಗಳಲ್ಲಿ ಹಾಹಾಕಾರವಿದೆ ಎಂದು ತಿಳಿದೇ ತಾವು ಏತ ನೀರಾವರಿ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದ್ದು. ನೀಲನಕ್ಷೆ ತಯಾರಿಸಿ ಇನ್ನೇನು ಕಾಮಗಾರಿ ಪ್ರಾರಂಭಿಸಬೇಕು ಎನ್ನುವ ವೇಳೆಗೆ ಕಾವೇರಿ ನ್ಯಾಯಾಧಿಕರಣದ ಪ್ರಶ್ನೆ ಎದುರಾಯಿತು. ತದ ನಂತರದ ಬೆಳವಣಿಗೆಯಲ್ಲಿ ಟೆಂಡರ್ ಪ್ರಕ್ರಿಯೆಯೂ ಆಯಿತು. ಆದರೆ ಕಾಮಗಾರಿಯನ್ನು ಮಾಡಲು ಕೇವಲ ಏಕೈಕ ವ್ಯಕ್ತಿ ಮಾತ್ರ ಅರ್ಜಿ ಹಾಕಿದ್ದಾರೆ. ಅಲ್ಲದೇ ಶೇಕಡಾ 45 ಕ್ಕೂ ಹೆಚ್ಚಿಗೆ ಹಣಕ್ಕೆ ವಿನಂತಿಸಿಕೊಂಡಿದ್ದಾರೆ. ಇದಕ್ಕೆ ಸರ್ಕಾರ ಒಪ್ಪಿಗೆ ನೀಡಿಲ್ಲ. ಹೀಗಾಗಿ 2 ಬಾರಿ ಟೆಂಡರ್ ಪ್ರಕ್ರಿಯೆಯೂ ಮುಂದಕ್ಕೆ ಹೋಗುತ್ತಿದೆ. ಆ ಕ್ಷೇತ್ರದ ಜನರು ಎಂದೆಂದೂ ತಮ್ಮ
ಜೆಡಿಎಸ್ ಪರವಾಗಿದ್ದಾರೆ ಎಂಬ ಉದ್ದೇಶದಿಂದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ದುರುದ್ದೇಶಪೂರ್ವಕವಾಗಿ ತಮ್ಮ ವಿರುಧ್ಧ ಹರಿಹಾಯ್ದಿದ್ದಾರೆ ಎಂದು ಶಾಸಕ ಕೃಷ್ಣಪ್ಪ ದೂರಿದರು.
ದಬ್ಬೇಘಟ್ಟ ಹಾಗೂ ಸುತ್ತಮುತ್ತಲಿಗೆ ನಿರೀಕ್ಷೆಗಿಂತಲೂ ಹೆಚ್ಚಿಗೆ ಕಾಮಗಾರಿಗಳನ್ನು ಮಾಡಿಸಲಾಗಿದೆ. ಸುವರ್ಣಗ್ರಾಮ, ಸರ್ಕಾರಿ ಆಸ್ಪತ್ರೆ, ಆಯುರ್ವೇದ ಆಸ್ಪತ್ರೆಗೆ ಕಟ್ಟಡ, ಕಸ್ತೂರ ಬಾ ವಸತಿ ನಿಲಯ, ಬಾಲಕರ ವಸತಿ ನಿಲಯ ಮುಂತಾದ ಅಭಿವೃದ್ಧಿ ಕಾಮಗಾರಿಯನ್ನು ಮಾಡಿದ್ದರೂ ಸಹ ತಮ್ಮ ವಿರುದ್ಧ ಮಾತನಾಡುವುದು ಸರಿಯಲ್ಲ ಎಂದು ಕೃಷ್ಣಪ್ಪ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

