ತುಮಕೂರು

ಕೋಮುವಾದಿ ಕಾಂಗ್ರೆಸ್ ತಿರಸ್ಕರಿಸಿ: ಮಾಳವಿಕಾ

Published On :
ಚಿಕ್ಕನಾಯಕನಹಳ್ಳಿ:  ಬಿಜೆಪಿಯನ್ನು ಕೋಮುವಾದಿ ಎಂದು ಟೀಕಿಸುವ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರಿಗೆ ಮಾತ್ರ ಶಾದಿ ಭಾಗ್ಯ ನೀಡುವ ಮೂಲಕ ತಾನು ಕೋಮುವಾದಿ ಎಂಬುದನ್ನು ನಿರೂಪಿಸಿದೆ ಎಂದು ಬಿಜೆಪಿ ರಾಜ್ಯ ವಕ್ತಾರೆ, ನಟಿ ಮಾಳವಿಕಾ ಟೀಕಿಸಿದರು.
ಮಂಗಳವಾರ ಅವರು ಪಟ್ಟಣದ  ಕನ್ನಡ ಸಂಘದ ವೇದಿಕೆಯಲ್ಲಿ ತಾಲೂಕು ಬಿಜೆಪಿ ಏರ್ಪಡಿಸಿದ್ದ ಮಹಿಳಾ  ಸಮಾವೇಶವನ್ನುದ್ದೇಸಿಸಿ ಮಾತನಾಡುತ್ತಿದ್ದರು. ಜಾತಿ ಭೇದವಿಲ್ಲದೆ ನಮ್ಮ ಸರ್ಕಾರ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆಯನ್ನು ಕೈಬಿಟ್ಟು, ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಅನುಕೂಲವಾಗುವಂತೆ ಜಾರಿಗೊಳಿಸಿರುವ ಶಾದಿ ಭಾಗ್ಯ, ಕಾಂಗ್ರೆಸ್ ಪಕ್ಷದ ಕೋಮುವಾದದ ಪರಮಾವಧಿತನ ತೋರಿಸುತ್ತದೆ. ಕಾಂಗ್ರೆಸ್ ಯುವರಾಜ ರಾಹುಲ್‌ಗಾಂಧಿ  ಪ್ರತಿವೇದಿಕೆಯಲ್ಲೂ ಮಹಿಳೆಯರ ಸಬಲೀಕರಣ ಮತ್ತು ರಕ್ಷಣೆ ಬಗ್ಗೆ ಮಾತನಾಡುವುದನ್ನು ಬಿಟ್ಟು, ತಮ್ಮ ಪಕ್ಷದ ಆಡಳಿತವಿರುವ ರಾಜ್ಯಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಹಾಗೂ ಅತ್ಯಾಚಾರಗಳನ್ನು ತಡೆಗಟ್ಟುವ ಕಾರ್ಯವನ್ನು ಮಾಡಲಿ. ಅದನ್ನು ಬಿಟ್ಟು 5 ವರ್ಷಗಳಿಂದ ಒಬ್ಬ ಮಹಿಳೆ,ಅಪೌಷ್ಟಿಕತೆ ಹಾಗೂ ಹೆರಿಗೆ ನೋವಿನಿಂದ ಮರಣಹೊಂದಿದ ಪ್ರಕರಣವಿಲ್ಲದಂತೆ ಮಹಿಳೆಯರ ಮಾನ ಮತ್ತು ಪ್ರಾಣ ಕಾಪಾಡಿದ ಮೋದಿಯವರ  ಬಗ್ಗೆ ನಿರಾಧಾರ ಟೀಕೆ ಸರಿಯಲ್ಲ. ದೆಹಲಿ ನಿರ್ಭಯಾ ಪ್ರಕರಣದ ಬಗ್ಗೆ ಇಡೀ ದೇಶವೇ ಮಾತನಾಡಿದರೂ ಮೌನಕ್ಕೆ ಶರಣಾಗಿರುವ ನಮ್ಮ ಪ್ರಧಾನಿಯವವರು ಬಾಯಿಬಿಡಲಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಕರ್ನಾಟಕದಲ್ಲಿ ದೌರ್ಜನ್ಯ: ಕರ್ನಾಟಕದ ಬಿಎಂಟಿಸಿ ಬಸ್ಸಿನಲ್ಲಿ ನಡೆದ ಮಹಿಳೆ ಮೇಲಿನ ದೌರ್ಜನ್ಯ, ದಕ್ಷಿಣಕನ್ನಡದ ದೇರ್ಲಕಟ್ಟೆಯಲ್ಲಾದ ಸಾಮೂಹಿಕ ಅತ್ಯಾಚಾರ, ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಚಿತ್ರೀಕರಣಗಳು ನಡೆದಿರುವುದು  ಬಿಜೆಪಿ ಆಡಳಿತವಿರುವ ರಾಜ್ಯದಲ್ಲಲ್ಲ, ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಎಂಬುದನ್ನು ಅವರು  ಮನಗಾಣಬೇಕಿದೆ. ಅತ್ಯಾಚಾರಿಗಳಿಗೆ ಬರೀ ಶಿಕ್ಷೆಯಾದರೆ ಸಾಲದು. ಅತ್ಯಾಚಾರಕ್ಕೊಳಗಾದ ಅಬಲೆಗೆ ಬೇಕು ಸಹಾಯ ಮತ್ತು ನೆಮ್ಮದಿಯ ಜೀವನ. ಮೋದಿ ಹೆಣ್ಣುಮಕ್ಕಳ ಆತ್ಮರಕ್ಷಣೆ ಬಗ್ಗೆ ತರಬೇತಿ, ಆರ್ಥಿಕ ಸಬಲೀಕರಣದ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಬೆಲೆ ಏರಿಕೆಯಿಂದಾಗಿ ಇಂದು ಮಹಿಳೆ ಬಹಳ ನೊಂದಿದ್ದಾಳೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.