ಬಿಜೆಪಿ ಅಧಿಕಾರಕ್ಕೆ ಬಂದರೆ ಅರಾಜಕತೆ
ಮಧುಗಿರಿ: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಅರಾಜಕತೆ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗಲಿರುವ ಕಾರಣ ಬಿಜೆಪಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿ ಎಂದು ಶಾಸಕ ಕೆ.ಎನ್. ರಾಜಣ್ಣ ಕರೆ ನೀಡಿದರು.
ಮಧುಗಿರಿ ಕಸಬಾ ಮರುವೇಕೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡರ ಪರ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಈ ದೇಶದ ಪ್ರಧಾನಿ ಆದರೆ ಎಲ್ಲೆಲ್ಲೂ ಆರಾಜಕತೆ, ಶಾಂತಿ, ನೆಮ್ಮದಿ ಕದಡುತ್ತದೆ ಎಂಬುದಕ್ಕೆ ಗುಜರಾತಿನಲ್ಲಿ ನಡೆದ ಕೆಲವು ಘಟನಾವಳಿಗಳೇ ಸಾಕ್ಷಿ,ನಮೋ ಎಂದರೆ ನಂಬಿಸಿ ಮೋಸ ಮಾಡುವುದು ಎಂದರ್ಥ ಎಂದು ಲೇವಡಿ ಮಾಡಿದ ರಾಜಣ್ಣ, ಹಿಂದೆ ರಾಮನ ಹೆಸರಲ್ಲಿ ಇಟ್ಟಿಗೆ, ಹಣ ಸಂಗ್ರಹಿಸಿದ್ದರು. ಈ ಹಣ ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿ ರಾಜ್ಯದಲ್ಲಿ ಎಲ್ಲೂ ನಮೋ ಅಲೆ ಇಲ್ಲ ಸಿಎಂ ಸಿದ್ದು ಅಲೇ ಮಾತ್ರ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೆಗೌಡ 2 ಸಲ ಶಾಸಕರಾಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಹಾಗೂ ಸಮರ್ಥ ನ್ಯಾಯಧೀಶರಾಗಿ ಸರಳ, ಸಜ್ಜನ ರಾಜಕಾರಣಿ. ಎಲ್ಲರೂ ಮುದ್ದಹನುಮೇಗೌಡರಿಗೆ ಮತ ನೀಡಬೇಕು. ಇಂಥ ಅನುಭವವುಳ್ಳ ವ್ಯಕ್ತಿ ಸಂಸದರಾದರೆ ಕ್ಷೇತ್ರದ ಅಭಿವೃದ್ಧಿ ತನಾಗೆ ಆಗಲಿದೆ. ಯುವಕರಿಗೆ ಮತದಾನದ ಹಕ್ಕು ಜಾರಿಗೊಳಿಸಿದ್ದು ರಾಜೀವ್ ಗಾಂಧಿ ಎಂಬುದನ್ನು ಮರೆಯಬಾರದು ಎಂದ ರಾಜಣ್ಣ, ನನ್ನ ಅವಧಿಯಲ್ಲಿ ತುಮಕೂರು-ರಾಯದುರ್ಗ ಮಧ್ಯೆ ರೇಲ್ವೆ ಸಂಪರ್ಕ ಕಾಮಗಾರಿ ಪೂರ್ಣ ಮಾಡುವುದು. ಎತ್ತಿನ ಹೊಳೆ ಯೋಜನೆಯಡಿ ತಾಲೂಕಿನ 45 ಕೆರೆಗಳಿಗೆ ನೀರುಣಿಸುವುದು ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ ಪ್ರಮಾಣಿಕವಾಗಿ ಶ್ರಮಿಸುವುದಾಗಿ ರಾಜಣ್ಣ ಭರವಸೆ ನೀಡಿದರು.
ಸಾಲ ಮನ್ನಾ: ಡಿಸಿಸಿ ಬ್ಯಾಂಕಿನಿಂದ ಸಾಲ ನೀಡಿ ಸಾಲದ ಸುಳಿಗೆ ಸಿಕ್ಕಿಸುತ್ತಿದ್ದಾರೆ ಎಂಬ ವಿಪಕ್ಷದವರ ಟೀಕೆಗೆ ಉತ್ತರಿಸಿದ ರಾಜಣ್ಣ, ತಾಲೂಕಿನಲ್ಲಿ ಕೋಟಿಗಟ್ಟಲೇ ಸಾಲ ನೀಡಿದ ಪರಿಣಾಮ 10 ಸಾವಿರ ಕುಟುಂಬಗಳಿಗೆ ಸಾಲ ಮನ್ನಾ ಮಾಡಿದ್ದನ್ನು ಸ್ಮರಿಸಬೇಕು. ಮುಂದಿನ ದಿನಗಳಲ್ಲಿ ಪಕ್ಷಾತೀತವಾಗಿ 3 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡಿ ಕೃಷಿಕರ, ರೈತರ ಹಾಗೂ ಕೂಲಿ ಕಾರ್ಮಿಕರು ಶಾಂತಿ, ನೆಮ್ಮದಿ ಜೀವನ ನಡೆಸಲು ಅನುಕೂಲ ಕಲ್ಪಿಸುವುದಾಗಿ ತಿಳಿಸಿ, ತಾಲೂಕಿನಲ್ಲಿ ಬೇನಾಮಿ ಆಸ್ತಿ ಮಾಡುವವರಿಂದ ನಾನು ಕಲಿಯುವ ಅಗತ್ಯವಿಲ್ಲ ಎಂದು ರಾಜಣ್ಣ ಮಾರ್ಮಿಕವಾಗಿ ನುಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಲ್ಲಿಕಾರ್ಜುನಯ್ಯ, ಎಸ್.ಆರ್. ರಾಜ್‌ಗೋಪಾಲ್, ತುಮುಲ್ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಜಿ.ಪಂ.ಸದಸ್ಯೆ ಸುಮನ, ಮುಖಂಡ ಎಸ್.ಡಿ.ಕೃಷ್ಣಪ್ಪ, ಜಿಲ್ಲಾಧ್ಯಕ್ಷ ರಾಮಣ್ಣ, ತಾ.ಪಂ.ಅಧ್ಯಕ್ಷೆ ಸುನಂದ ಸಿದ್ದಪ್ಪ, ಯಶೋಧ, ಮಹಾಲಕ್ಷ್ಮಮ್ಮ, ಮರಿಯಣ್ಣ, ಗೌಡಮುದ್ದಯ್ಯ, ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

