ಬಿಜೆಪಿ ಅಭ್ಯರ್ಥಿ ವಾಹನದ ಮೇಲೆ ಕಲ್ಲು ತೂರಾಟ
ಕುಣಿಗಲ್ : ರೋಡ್ ಶೋ ಮೂಲಕ ಮತಯಾಚನೆ ಮಾಡುತ್ತಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರಾಜಗೌಡರ ವಾಹನದ ಮೇಲೆ ಕಲ್ಲು ತೂರಾಟ ನಡೆದು, ಬಿಜೆಪಿ ಕಾರ್ಯಕರ್ತನೊಬ್ಬ ಗಾಯಗೊಂಡಿರುವ ಘಟನೆ ತಾಲೂಕಿನ ಹುಲಿಯೂರುದುರ್ಗ ಹೋಬಳಿ ತಾವರೆಕೆರೆ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ಮುನಿರಾಜುಗೌಡ, ಶನಿವಾರ ತಾಲೂಕಿನ ವಿವಿಧ ಹೋಬಳಿಗಳಲ್ಲಿ ರೋಡ್ ಶೋ ಮೂಲಕ ಮತಯಾಚಿಸಿ, ಹುಲಿಯೂರುದುರ್ಗ ಹೋಬಳಿಯ ತಾವರೆಕೆರೆ ಗ್ರಾಮಕ್ಕೆ ರಾತ್ರಿ ಎಂಟೂವರೆ ಗಂಟೆ ವೇಳೆಗೆ ಆಗಮಿಸಿದರು.ಅಪರಿಚತನೊಬ್ಬ ರೋಡ್ ಶೋ ವಾಹನದ ಮೇಲೆ ಕಲ್ಲು ತೂರಿದ್ದು, ಇದು ತಾಲೂಕು ಬಿಜೆಪಿ ಕಾರ್ಯದರ್ಶಿ ವೆಂಕಟೇಶ್ ತಲೆಗೆ ಬಡಿದ ಕಾರಣ ಗಾಯವಾಯಿತು. ಕೂಡಲೆ ರೋಡ್ ಶೋನಲ್ಲಿದ್ದವರು ಎಚ್ಚೆತ್ತು ಆತ ಯಾರೆಂಬುದನ್ನು ನೋಡಲು ಮುಂದಾದಾಗ ಮತ್ತೆ ಕಲ್ಲುತೂರಾಟ ನಡೆದು ಮುನಿರಾಜಗೌಡರ ಖಾಸಗಿ ಕಾರಿಗೆ ಕಲ್ಲುತಾಗಿ ಜಖಂಗೊಂಡಿತು.
ಆಸ್ಪತ್ರೆಗೆ ಗಾಯಾಳು: ಗಾಯಾಳುವನ್ನು ಕುಣಿಗಲ್ ಆಸ್ಪತ್ರೆಗೆ ಸಾಗಿಸಿದ ಕಾರ್ಯಕರ್ತರು, ಕಲ್ಲುಕತೂರಾಟ ನಡೆಸಿದವರ ಬಗ್ಗೆ ಗ್ರಾಮಸ್ಥರಲ್ಲಿ, ಗ್ರಾಮದಲ್ಲಿ ವಿಚಾರಣೆ ನಡೆಸಲು ಮುಂದಾದಾಗ ಈ ಘಟನೆಗೆ ಕಾಂಗ್ರೆಸ್ ಕಾರ್ಯಕರ್ತರೇ ಕಾರಣ ಎಂದು ಬಿಜೆಪಿ ಮುಖಂಡರಾದ ನಟರಾಜು, ತಿಮ್ಮಪ್ಪ ಇತರರು ಆರೋಪಿಸಿದ್ದಾರೆ.
ಸ್ಥಳೀಯ ಪೊಲೀಸರು ರೋಡ್ ಶೋಗೆ ಸೂಕ್ತ ಬಂದೋಬಸ್ತ್ ಕಲ್ಪಿಸದಿರುವುದು ಘಟನೆಗೆ ಕಾರಣವೆಂದು ಆರೋಪಿಸಿ, ಅಭ್ಯರ್ಥಿ ಮುನಿರಾಜಗೌಡ ಧರಣ ಕುಳಿತರು. ಸ್ಥಳಕ್ಕೆ ಸಹಾಯಕ ಚುನಾವಣಾಧಿಕಾರಿಗಳು ಆಗಮಿಸಿ ಘಟನೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಲುವಂತೆ ಆಗ್ರಹಿಸಿದರು. ಸಿಪಿಐ ಧರ್ಮೇಂದ್ರ, ಪಿಎಸೈ ರಂಜನಕುಮಾರ್ ಸೇರಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರೂ ಸ್ಥಳಕ್ಕೆ ಚುನಾವಣಾಧಿಕಾರಿಗಳು ಬರಲೇಬೇಕು ಎಂದು ಪಟ್ಟು ಹಿಡಿದು ಧರಣಿ ಮುಂದುವರೆಸಿದ್ದಾರೆ. ಬಿಜೆಪಿ ಮುಖಂಡರು ನೀಡಿರುವ ಸುಳಿವಿನ ಮೇರೆಗೆ ಆರೋಪಿ ಪತ್ತೆಗೆ ಕ್ರಮ ಕೈಗೊಂಡಿದ್ದು, ಆತ ಯಾವ ಪಕ್ಷದವನೆಂದು ಖಚಿತವಾಗಿ ಸದ್ಯಕ್ಕೆ ಹೇಳಲಾಗದು. ಯಾರೆಂಬುದು ತನಿಖೆ ನಂತರ ಹೊರಬೀಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

