ಚುನಾವಣೆಗೆ ಅಗತ್ಯ ಸಿದ್ಧತೆ ಪೂರ್ಣ: ಅನೂಪ್
ಕುಣಿಗಲ್ ಗುರುವಾರ ನಡೆಯಲಿರುವ ಲೋಕಸಭೆ ಚುನಾವಣೆಗಳಿಗೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಅನೂಪ್ ತಿಳಿಸಿದರು. ತಾಲೂಕಿನಾದ್ಯಂತ 263 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 39 ಅತಿಸೂಕ್ಷ್ಮ, 39ಸೂಕ್ಷ್ಮ, 185 ಸಾಮಾನ್ಯ ಮತಗಟ್ಟೆಗಳಾಗಿವೆ. ಒಟ್ಟಾರೆಯಾಗಿ 1208ಮತಗಟ್ಟೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು ಈ ಪೈಕಿ 156 ಸಿಬ್ಬಂದಿಗಳನ್ನು ಮೀಸಲು ಸಿಬ್ಬಂದಿಯಾಗಿ ನಿಯೋಜಿಸಲಾಗಿದೆ. ಮತದಾನ ಕೇಂದ್ರಗಳಿಗೆ ಸಿಬ್ಬಂದಿ ಸಾಗಿಸಲು 37 ರೂಟ್ಗಳ ಮೂಲಕ 40 ಬಸ್,18 ಮ್ಯಾಕ್ಸಿ ಕ್ಯಾಬ್, 10ಜೀಪ್ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಒಟ್ಟಾರೆ 1,77,234 ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಲಿದ್ದು ಈ ಪೈಕಿ ಪುರುಷರು-89544, ಮಹಿಳೆಯರು 87674 ಮತದಾರರಿದ್ದು, ಇತರೆ (ಮಂಗಳಮುಖಿ) 14 ಮಂದಿ ಮತದಾರರಿದ್ದಾರೆ. ಅತಿಸೂಕ್ಷ್ಮ, ಸೂಕ್ಷ್ಮ ಮತಗಟ್ಟೆಗಳಿಗೆ 80 ಕ್ಕೂ ಹೆಚ್ಚು ಮೈಕ್ರೋ ವೀಕ್ಷಕರನ್ನು ನೇಮಿಸಲಾಗಿದ್ದು, ಇವರಿಗೂ ಸೂಕ್ತತರಬೇತಿಯನ್ನು ನೀಡಲಾಗಿದೆ. ಮುಕ್ತ ಹಾಗೂ ಶಾಂತಿಯುತ ಮತದಾನ ನಿರ್ವಹಣೆಗೆ ಸೂಕ್ತ ಪೊಲೀಸ್ ಬಂದೋಬಸ್ ಮಾಡಲಾಗಿದ್ದು, ಡಿವೈಎಸ್ಪಿ-1,ವೃತ್ತ ನಿರಿಕ್ಷಕರು-3,ಎಸೈಗಳು-6,ಎಎಸೈಗಳು-10, ಪೇದೆಗಳು-103, ಗೃಹರಕ್ಷಕದಳದ 180 ಸಿಬ್ಬಂದಿ ಜೊತೆ ಕೇಂದ್ರ ಗಡಿಭದ್ರತಾ ಪಡೆಯ 25 ಮಂದಿ ಸಿಬ್ಬಂದಿ ಸೂಕ್ತ ರಕ್ಷಣೆ ನೀಡಲಿದ್ದು, 17 ಸಂಚಾರಿ ಗಸ್ತು ವಾಹನಗಳನ್ನು ನಿಯೋಜಿಸಲಾಗಿದೆ.
ಬಿಎಸ್ಪಿಗೆ ಮತ ನೀಡಲು ಮನವಿ
ತಿಪಟೂರು: ತುಮಕೂರು ಲೋಕಸಭಾ ಕ್ಷೇತ್ರದ ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿ ನೀಲುಫರ್ ಜಮಾನಿ ಅಹಮ್ಮದ್ ಏಕೈಕ ಮಹಿಳಾ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು,ಇವರಿಗೆ ಮತ ನೀಡುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಬೇಕೆಂದು ತಿಪಟೂರು ವಿಧಾನಸಭಾ ಕ್ಷೇತ್ರದ ಬಿಎಸ್ಪಿ ಮುಖಂಡ ಅಬ್ದುಲ್ ವಕೀಲ್ ಮನವಿ ಮಾಡಿದ್ದಾರೆ. ದೇಶದಲ್ಲಿ ಕೋಮುವಾದಿ ಬಿಜೆಪಿ ಹಾಗೂ ಭ್ರಷ್ಟಾಚಾರವೇ ತಮ್ಮ ಬಂಡವಾಳವಾಗಿಸಿ ಕೊಂಡಿರುವ ಕಾಂಗ್ರೆಸ್ ಪಕ್ಷಗಳು ದಲಿತರು ಹಿಂದುಳಿದ ಹಾಗೂ ಅಲ್ಪಸಂಖ್ಯಾತರನ್ನು ಓಟ್ ಬ್ಯಾಂಕ್ ಆಗಿ ಶೋಷಣೆ ಮಾಡುತ್ತಿದ್ದು, ದಲಿತರ ಹಿಂದುಳಿದ ವರ್ಗಗಳು, ಶೋಷಿತ ಪರವಾಗಿ ಇರುವ ಪಕ್ಷವೆಂದರೆ ಬಿಎಸ್ಪಿ ಮಾತ್ರ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

