ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ಹೊಡೆದಾಟ
ಪಾವಗಡ: ಹಳೇ ದ್ವೇಷ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಮಧ್ಯೆ ಹೊಡೆದಾಟ ನಡೆದು ಕಾಂಗ್ರೆಸ್ ಬೆಂಬಲಿತ 5 ಮಂದಿಗೆ ತೀವ್ರ ಗಾಯಗಳಾಗಿ ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ ಸಂಜೆ ತಾಲೂಕಿನ ಗುಮ್ಮಘಟ್ಟ ಗ್ರಾಮದಲ್ಲಿ ನಡೆದಿದೆ.
ಹಳೇ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರ ಪತ್ನಿ ಮತದಾನ ಮಾಡಲು ಮತಘಟ್ಟೆಗೆ ತೆರಳಿದ ಸಂದರ್ಭದಲ್ಲಿ ಮತದಾನದ ವಿಚಾರವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಗಲಾಟೆ ನಡೆದಿದೆ.
ಶಂಕರಮ್ಮ ನರಸಿಂಹಪ್ಪ, ಮಾಜಿ ಗ್ರಾಪಂ ಅಧ್ಯಕ್ಷ ಬಸವರಾಜ್, ರಾಮಾಂಜಿನಪ್ಪ ಕೃಷ್ಣರೆಡ್ಡಿ ಮತ್ತು ನಾಗರಾಜ್ ಎಂಬುವರಿಗೆ ಘಟನೆಯಲ್ಲಿ ತೀವ್ರ ಗಾಯಗಳಾಗಿ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಕಾರಣರಾಗಿ ಹಲ್ಲೆ ಮಾಡಿದ ಗುಮ್ಮಘಟ್ಟ ಜೆಡಿಎಸ್ ಬೆಂಬಲಿತ ಕಾರ್ಯದರ್ಶಿ ಬಸವರಾಜ್ ರಾಮಾಂಜಿನಪ್ಪ, ನಾರಾಯಣಪ್ಪ ಹಾಗೂ ಹರೀಶ್ ಎಂಬುವರ ವಿರುದ್ಧ ಪಾವಗಡ ಠಾಣೆಗೆ ದೂರು ಸಲ್ಲಿಸುವುದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ್ ಅವರು ತಿಳಿಸಿದ್ದಾರೆ.
ಸಿಟಿಯಲ್ಲಿ ಡಲ್, ಹಳ್ಳಿಯಲ್ಲಿ ಜೋರು ಮತದಾನ
ತುಮಕೂರು: ತುಮಕೂರು ಜಿಲ್ಲೆಯ ಎಲ್ಲಾ 8 ತಾಲೂಕುಗಳ ಕೇಂದ್ರ ಸ್ಥಾನದಲ್ಲಿ ಮತದಾನ ಮಂದಗತಿಯಲ್ಲಿದ್ದರೆ, ಗ್ರಾಮೀಣ ಭಾಗದಲ್ಲಿ ಜನ ಅತ್ಯುತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಗೂಳೂರು, ಹೆಬ್ಬೂರು, ಹೊನ್ನುಡಿಕೆ, ಹೊನ್ನುಡಿಕೆ ಹ್ಯಾಂಡ್ ಪೋಸ್ಟ್, ನಾಗವಲ್ಲಿ, ಸಿ.ಎಸ್. ಪುರ, ಮುಂತಾದ ಬಿರುಸಿನ ಮತದಾನ ನಡೆಯಿತು.ಮತಗಟ್ಟೆಯ ಹೊರಗೆ ಕಾರ್ಯಕರ್ತರು ಗುಂಪು ಗುಂಪಾಗಿ ಇದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವು ಕಡೆ ಸಣ್ಣಪುಟ್ಟ ಗದ್ದಲ ಉಂಟಾಗಿ ಪೊಲೀಸರು ಗುಂಪನ್ನು ಚೆದುರಿಸಿದ್ದು ಕಂಡು ಬಂತು.ಮತಗಟ್ಟೆ ಸುತ್ತಮುತ್ತ ಪೊಲೀಸರನ್ನು ನಿಯೋಜಿಸಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಮತಕೇಂದ್ರದ 100 ಮೀಟರ್ ಹೊರಗೆ ಆಯಾ ಪಕ್ಷಗಳ ಮುಖಂಡರು, ಏಜೆಂಟರ್ ನಿಂತು ಮತದಾರರಿಗೆ ಮಾರ್ಗದರ್ಶನ ಮಾಡುತ್ತಿದ್ದರು.
ಅರಸೀಕೆರೆ ಕಡೆ ಸಾಗಿದ ಕಾಡಾನೆಗಳು
ಹುಳಿಯಾರು: ಬುಧವಾರವಷ್ಟೆ ಬೋರನಕಣಿವೆ ಗುಡ್ಡದ ಅಸುಪಾಸಿನಲ್ಲಿ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿದ್ದ ಆನೆಗಳು ಗುರುವಾರ ಸಂಜೆ ವೇಳೆಗೆ ಹಾಸನ ಜಿಲ್ಲೆಯ ಅರಸೀಕೆರೆ ಕಡೆ ಪ್ರಯಾಣ ಬೆಳೆಸಿವೆ. ಬುಧವಾರ ರಾತ್ರಿ ಬೋರನಕಣಿವೆ ಗುಡ್ಡದಲ್ಲಿ ಆಶ್ರಯ ಪಡೆದಿದ್ದ 2 ಆನೆಗಳು ಮುಂಜಾನೆ ವೇಳೆಗೆ ಸಾದರಹಳ್ಳಿ ಮಾರ್ಗವಾಗಿ ಬೀದರ್ ಶ್ರೀರಂಗಪಟ್ಟಣ ಹೆದ್ದಾರಿ ದಾಟಿ ಅಣೆಕಟ್ಟೆ,ಅರಳಿಕೆರೆ ಕಡೆಯಿಂದ ಅರಸೀಕೆರೆ ಕಡೆ ತೆರಳಿದ್ದು ಅಲ್ಲಿಂದ ತುರುವೇಕೆರೆ ಕಾರಿಡಾರ್ ಮೂಲಕ ವಾಪಸು ಬನ್ನೇರುಗಟ್ಟ ತಲುಪಲಿವೆ ಎಂದು ಚಿಕ್ಕನಾಯಕನಹಳ್ಳಿ ವಲಯ ಅರಣ್ಯ ಅಧಿಕಾರಿ ಮಾರುತಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

