ತುಮಕೂರು

ಉಗಮ ಶ್ರೀನಿವಾಸ್‌ಗೆ ಸಂಘಟನೆಗಳ ಅಭಿನಂದನೆ

Published On :

ಪಾವಗಡ: ಕನ್ನಡಪ್ರಭ ಜಿಲ್ಲಾ ವರದಿಗಾರ ಉಗಮ ಶ್ರೀನಿವಾಸ್ ಹಾಗೂ ಪತ್ರಕರ್ತ ಜಿ.ಎಸ್.ಹನುಮಂತರಾಯಪ್ಪ ಅವರಿಗೆ ಕರ್ನಾಟಕ ಮಾಧ್ಯಮ ಆಕಾಡೆಮಿ ಪ್ರಶಸ್ತಿ ಲಭಿಸಿರುವುದಕ್ಕೆ ಇಲ್ಲಿನ ಕರ್ನಾಟಕ ಕಾರ್ಯನಿರತ ಪ್ರಕರ್ತರ ಸಂಘ ತಾಲೂಕು ಶಾಖೆ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ದಲಿತ ಪರ ಧ್ವನಿಯಾಗಿ ಜಿಲ್ಲೆಯ ಪತ್ರಿಕೋದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಎತ್ತಿ ಹಿಡಿಯುವಲ್ಲಿ ಖ್ಯಾತರಾದ ಉಗಮ ಶ್ರೀನಿವಾಸ್ ಅವರಿಗೆ ತಾಯಿ ಎದೆ ಹಾಲಿನಲ್ಲಿ ಹಾಲಾಹಲ ಮತ್ತು ಬತ್ತಿದ ಅಂತರ್ಜಲಕ್ಕೆ ಮಾಧ್ಯಮ ಅಕಾಡೆಮಿ ಬಂದಿರುವುದು ಹರ್ಷದ ಸಂಗತಿ ಎಂದಿದ್ದಾರೆ. ಹಿರಿಯ ಪತ್ರಕರ್ತ ಶ್ಯಾನ ಪ್ರಸನ್ನಮೂರ್ತಿ, ಪಾವಗಡ ಜೆ.ನಾಗೇಂದ್ರ ಹಾಗೂ ತಾ. ವರದಿಗಾರರು ಶುಭ ಹಾರೈಸಿದ್ದು ಜಿಲ್ಲೆಯ ಇಬ್ಬರು ವರದಿಗಾರರಿಗೆ ಮಾಧ್ಯಮ ಆಕಾಡೆಮಿ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ಸಂಗತಿ ಎಂದೂ ಹೇಳಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ರಾಷ್ಟ್ರೀಯ ಕಿಸಾನ್ ಸಂಘ, ದಲಿತ ವಿಮೋಚನೆ ಸೇನೆ, ತಾ.ರೈತ ಸಂಘ, ದಂಡೋರ ಸಮಿತಿ,ಇತರೆ ಸಂಘಟನೆ  ಪದಾಧಿಕಾರಿಗಳು ಇಬ್ಬರನ್ನೂ ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.