ತುಮಕೂರು

ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆಗೆ ಕರೆ

Published On :

ಕುಣಿಗಲ್: ಗ್ರಾಮಾಂತರದ ರೈತಾಪಿ ಜನತೆ, ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಪರಿಸರಸ್ನೇಹಿ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಉತ್ತಮ ಇಳುವರಿ ಪಡೆಯುವ ಮೂಲಕ ದೇಶದ ಆಹಾರ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ತಮ್ಮ ಕೊಡುಗೆ ನೀಡಬೇಕೆಂದು ವಟಿಕುಟಿ ಫೌಂಡೇಶನ್‌ನ ಸಂಸ್ಥಾಪಕ ರಾಜಾ ವಟಿಕುಟಿ ತಿಳಿಸಿದರು.
ಶುಕ್ರವಾರ, ತಾಲೂಕಿನ ಸಂತೇಮಾವತ್ತೂರಿನಲ್ಲಿ ವಟಿಕುಟಿ ಫೌಂಡೇಶನ್ ಮತ್ತು ಐಡಿಎಫ್ ಸುಜೀವನ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ಉತ್ತಮ ಪ್ರಗತಿ ಸಾಧಿಸಿರುವ ಮಹಿಳಾ ಸ್ವಸಹಾಯ ಮತ್ತು ಕೃಷಿಕರ ಸಂಘಗಳಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದಿನದಿಂದ ದಿನಕ್ಕೆ ದೇಶದ ಜನಸಂಖ್ಯೆ ಹೆಚ್ಚುತ್ತಿದೆ. ನಗರೀಕರಣ, ಉದ್ಯೋಗೀಕರಣ ಸೇರಿದಂತೆ ಹಲವು ಕಾರಣಗಳಿಂದಾಗಿ ಕೃಷಿ ಪ್ರದೇಶದ ವಿಸ್ತೀರ್ಣವೂ ಕಡಿಮೆಯಾಗುತ್ತಿದೆ. ಕೃಷಿಕರು ಹಲವು ಕಾರಣಗಳಿಂದ ಕೃಷಿಯಿಂದ ವಿಮುಕ್ತರಾಗುತ್ತಿದ್ದು, ಆಹಾರಧಾನ್ಯಗಳ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದರು.
ಸಮಾರಂಭದಲ್ಲಿ ಅಲ್ಟೋಮೆಟ್ರಿಕ್ ಸಂಸ್ಥೆಯ ಉತ್ತಮನಾಯಕ್ ಮಾತನಾಡಿ, ವಿದ್ಯುನ್ಮಾನ ತಾಂತ್ರಿಕತೆ ಎಲ್ಲೆಡೆಯೂ ಅತ್ಯಂತ ವೇಗವಾಗಿ ಪಸರಿಸುತ್ತಿದೆ. ಈ ತಂತ್ರಜ್ಞಾನದಿಂದ ರೈತರೂ ಸಾಕಷ್ಟು ಸವಲತ್ತುಗಳನ್ನು ತಮ್ಮ ಮನೆ ಬಾಗಿಲಲ್ಲೇ ಪಡೆಯಬಹುದಾಗಿದ್ದು, ಮುಂದುವರೆದ ತಂತ್ರಜ್ಞಾನಕ್ಕೆ ತಕ್ಕಂತೆ ತಾವೂ ಮಾಹಿತಿ ಪಡೆದು, ಮನೆಬಾಗಿಲಲ್ಲೇ ಸಮಸ್ಯೆ ಪರಿಹರಿಸಿಕೊಳ್ಳಬಹುದಾಗಿದೆ ಎಂದರು.
ಪ್ರಮುಖರಾದ ಏರ್‌ಮಾರ್ಷಲ್ ನೇರಿ, ಶ್ರೀಕಾಂತ ಶೆಣೈ, ವಿಶಾಲ್‌ರಾವ್, ಇಬ್ರಾಹಿಂ, ಎಚ್.ಇ.ಶಿವಪ್ಪ ಸೇರಿದಂತೆ ದತ್ತಿಮಂಡಲಿ ಇತರೆ ಸದಸ್ಯರು ಉಪಸ್ಥಿತರಿದ್ದರು. ಉತ್ತಮ ಸಾಧನೆ ಮಾಡಿದ ಎಪ್ಪತ್ತಕ್ಕೂ ಹೆಚ್ಚು ಕೃಷಿಕರಿಗೆ ಕೀಟನಾಶಕ ಯಂತ್ರ ಸೇರಿದಂತೆ ವಿವಿಧ ಉಪಕರಣಗಳನ್ನು ಉಚಿತವಾಗಿ ವಿತರಿಸಲಾಯಿತು.    

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.