ಸಮ್ಮೇಳನಾಧ್ಯಕ್ಷರು ಸ್ಥಳೀಯರಾಗಲಿ ಕವಿತಾಕೃಷ್ಣ
ತುಮಕೂರು: ಜಿಲ್ಲಾ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಗಳಲ್ಲಿ ಸಮ್ಮೇಳನಾಧ್ಯಕ್ಷರಾಗುವವರು ಜಿಲ್ಲೆಯಲ್ಲೇ ಇದ್ದು ನಿರಂತರ ನುಡಿಸೇವೆ ಮಾಡುವವರಾಗಬೇಕು ಎಂದು ಸಾಹಿತಿ ಕವಿತಾಕೃಷ್ಣ ಸಲಹೆ ನೀಡಿದರು.
ಅವರು ಇಲ್ಲಿನ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ಅಂಚೆ ರಾಮಣ್ಣ ಅವರ ಶಂಕ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಖಿಲ ಭಾರತ ಮಟ್ಟದಲ್ಲಿ ಅಧ್ಯಕ್ಷ ಸ್ಥಾನ ವಹಿಸುವವರನ್ನು ಒತ್ತಾಯ ಪೂರ್ವಕವಾಗಿ ಕರೆ ತರುವ ಅಗತ್ಯವಿದೆಯೇ ಎಂದು ಪ್ರಶ್ನಿಸಿದ ಅವರು ಈ ರೀತಿ ಮಾಡುವುದರಿಂದ ಸ್ಥಳೀಯ ಪ್ರತಿಭೆಗಳು ಕಮರಿ ಹೋಗುತ್ತದೆ ಎಂದರು.
ವಯಸ್ಸು ಮುಖ್ಯವಲ್ಲ. ಮನಸ್ಸು ಮುಖ್ಯ. 64 ರ ವಯಸ್ಸಿನಲ್ಲಿ ರಾಮಣ್ಣ ಕೃತಿ ರಚನೆ ಮಾಡಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪತ್ರಕರ್ತ ಕಾಮರಾಜು ನುಡಿಸೇವೆ ಮಾಡಲು ವಿದ್ವತ್ತನ್ನೇ ಪಡೆದಿರಬೇಕೆಂಬ ನಿಯಮವಿಲ್ಲ. ಸುತ್ತಮುತ್ತ ನಡೆಯುವ ವಿದ್ಯಾಮಾನಗಳನ್ನು ಗ್ರಹಿಸುವ ಶಕ್ತಿ ಮುಖ್ಯ. ಲೇಖಕರಿಗೆ ಸಾಮಾಜಿಕ ಬದ್ಧತೆ ಇರಬೇಕು. ರಾಮಣ್ಣನವರ ಪದ್ಯಗಳಲ್ಲಿ ಸಾಮರಸ್ಯ, ಸಮಾನತೆಗಳನ್ನು ಕಾಣಬಹುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೃತಿ ಕುರಿತು ಮಾತನಾಡಿದ ಪದ್ಮಾಕೃಷ್ಣಮೂರ್ತಿ ರಾಮಣ್ಣನವರು ಬಡತನದ ಭವಣೆಯನ್ನು ಬಿಚ್ಚಿಟ್ಟಿದ್ದಾರೆ. ಸಾಮಾಜಿಕ ಕಳಕಳಿಯನ್ನು ತೋರಿದ್ದಾರೆ. ನಾಡು ನುಡಿ ಮೆರೆದಿದ್ದಾರೆ ಎಂದರು.
ಲೇಖಕಿ ಕಮಲಾ ಬಡ್ಡಿಹಳ್ಳಿ ಮಾತನಾಡಿ ಪಂಪನಿಂದ ಕುವೆಂಪುವರೆಗೆ ಸಾಗಿ ಬಂದ ಕಾವ್ಯ ಪರಂಪರೆಯನ್ನು ವಿವರಿಸಿದರು. ಎಂಜಿನಿಯರ್ ನಾಗರಾಜು ಮತ್ತು ರಾಜಣ್ಣ ಅಳಿಲುಘಟ್ಟ ಅಭಿಪ್ರಾಯ ವ್ಯಕ್ತಪಡಿಸಿದರು. ನಾಗರಾಜ್ ಯಾದವ್, ಸವಣೂರು, ಶೀಗೇಹಳ್ಳಿ ನಾರಾಯಣ, ರಮೇಶ್, ಶಿವಕುಮಾರ್ ಇದ್ದರು. ಮಂಜುಳಾದೇವಿ ಪ್ರಾರ್ಥಿಸಿದರು. ತುಮಕೂರು ಭಾರ್ಗವಿ ಸ್ವಾಗತಿಸಿದರು. ಉಮಾಶರ್ಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

