ತುಮಕೂರು

ಹುಳಿಯಾರಿನ ವಿವಿಧೆಡೆ 2ನೇ ಹಂತದ ಪೋಲಿಯೊ ಕಾರ್ಯಕ್ರಮ

Published On :

ಹುಳಿಯಾರು: ದೇಶಾದ್ಯಂತ ಭಾನುವಾರದಂದು ಎರಡನೇ ಹಂತದ ಪಲ್ಸ್ ಪೋಲಿಯೊ ಕಾರ್ಯಕ್ರಮದ ದಿನವಾಗಿದ್ದು  5ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ  ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆ ಮತ್ತು  ಹುಳಿಯಾರಿನ ರೋಟರಿ ಸಂಸ್ಥೆಯ ಸಹಯೋಗದಲ್ಲಿ ಹೋಬಳಿಯಾದ್ಯಂತ ಯಶಸ್ವಿಯಾಗಿ ನಡೆಸಲಾಯಿತು.
ಹೋಬಳಿಯ ವಿವಿಧೆಡೆ ಹಾಗೂ ಊರಿನ ಪ್ರಮುಖ ಬಡಾವಣೆಗಳಲ್ಲಿ, ಬಸ್ ನಿಲ್ದಾಣದಲ್ಲಿ ಪೋಲಿಯೊ ಬೂತ್‌ಗಳನ್ನು ತೆರೆದಿದ್ದು ಬೆಳೆಗ್ಗಿನಿಂದಲೇ ಪೋಲಿಯೊ ಹನಿ ಹಾಕುವ ಕಾರ್ಯದಲ್ಲಿ ಆಶಾ ಕಾರ್ಯಕರ್ತರು ತೊಡಗಿದ್ದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಹೋಬಳಿಯ ಎಲ್ಲಾ ಅಂಗನವಾಡಿ ಕೇಂದ್ರ, ನಗರದ ಬಸ್ ನಿಲ್ದಾಣ, ಆಜಾದ್ ನಗರ, ಕೇಶವ ಶಾಲೆ, ಇಂದಿರಾ ನಗರ ಸೇರಿದಂತೆ  ಇತರೆಡೆ ಪೊಲಿಯೋ ಬೂತ್‌ಗಳನ್ನು ತೆರೆಯಲಾಗಿತ್ತು. ನಗರದ ಬಸ್ ನಿಲ್ದಾಣದ ಬೂತ್‌ನಲ್ಲಿ ರೋಟರಿ ಅಧ್ಯಕ್ಷ ಗಂಗಾಧರಾವ್, ರವೀಶ್, ಮಂಜುನಾಥ್ ಗುಪ್ತ ಅವರ ನೇತೃತ್ವದಲ್ಲಿ ದಾದಿಯರು, ಆಶಾಕಾರ್ಯಕರ್ತರು ಬಸ್‌ನಿಂದ ಇಳಿದು ಬರುತ್ತಿದ್ದ ಅಕ್ಕಪಕ್ಕ ಗ್ರಾಮಗಳ ಜನರನ್ನು ಗಮನಿಸುತ್ತಿದ್ದು, ಅವರಲ್ಲಿ ಯಾರಾದರು 5 ವರ್ಷದ ಒಳಗಿನ ಮಕ್ಕಳೊಂದಿಗೆ ಇಳಿದರೆ  ಅವರ ಹತ್ತಿರ ಹೋಗಿ ಅವರನ್ನು ಪೋಲಿಯೊ ಬೂತ್ ಹತ್ತಿರ ಕರೆದುಕೊಂದು ಬಂದು, ಲಸಿಕೆ  ಬಗ್ಗೆ ಮಾಹಿತಿ ತಿಳಿಸಿ ಮಗು-ಪೋಷಕರನ್ನು ಬೂತ್‌ಗೆ ಕರೆದುಕೊಂಡು ಬಂದು ಮಗುವಿಗೆ ಪೊಲಿಯೋ ಹನಿ ಹಾಕಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.