ಟೆಂಪೋ ಪಲ್ಟಿ: ಇಬ್ಬರ ಸಾವು ಆರು ಮಂದಿ ಸ್ಥಿತಿ ಗಂಭೀರ
ಪಾವಗಡ: ಕರ್ಬುಜ ಹಣ್ಣು ಸಾಗಿಸುತ್ತಿದ್ದ ಟೆಂಪೋ ಪಲ್ಟಿಯೊಡೆದ ಪರಿಣಾಮ, ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದು, 6 ಮಂದಿ ತೀವ್ರ ಗಾಯಗೊಂಡಿರುವ ಘಟನೆ ತಾಲೂಕಿನ ಕೆ.ರಾಂಪುರ ಗೇಟ್ ಬಳಿ ಗುರುವಾರ ರಾತ್ರಿ ನಡೆದಿದೆ.
ಕೂಲಿ ಕಾರ್ಮಿಕರಾದ ಆಂಧ್ರ ಮೂಲದ ಓಬಳರೆಡ್ಡಿ (60)ಹಾಗೂ ಈರಪ್ಪ(33)ಎಂಬುವರು ಘಟನೆಯಲ್ಲಿ ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡ ಸುವರ್ಣಮ್ಮ, ಲಲಿಲತಮ್ಮ,ಲಿಂಗಮಯ್ಯ, ಓಬರೆಡ್ಡಿ,ಲಾಲುಸಾಬ್, ಮುತ್ಯಾಲಪ್ಪ, ಎಂಬುವರನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವಿರ: ತಾಲೂಕಿನ ಲಿಂಗಮಯ್ಯ ಎಂಬುವರ ತೋಟದಲ್ಲಿ ಕಾಟಾವು ಮಾಡಿದ ಕರ್ಬುಜ ಹಣ್ಣುಗಳನ್ನು ಟೆಂಪೋಗೆ ತುಂಬಿಸಿಕೊಂಡು ಮಾರಾಟಕ್ಕಾಗಿ ಆಂಧ್ರ ಮಾರ್ಗವಾಗಿ ತೆರಳುತ್ತಿರುವಾಗ ಎದುರಿಗೆ ಬಂದ ದ್ವಿಚಕ್ರ ವಾಹನಮೊಂದಕ್ಕೆ ಟೆಂಪೋ ಸೈಡ್ ಕೊಡಲು ಹೋಗಿ ರಸ್ತೆ ಪಕ್ಕದಲ್ಲಿ ಟೆಂಪೋಪಲ್ಲಿ ಹೊಡೆದಿದೆ. ಟೆಂಪೋ ಪಲ್ಟಿ ಹೊಡೆದ ಪರಿಣಾಮ, ಟೆಂಪೋದಲ್ಲಿದ್ದ 8 ಮಂದಿ ಕೂಲಿ ಕಾರ್ಮಿಕರ ಪೈಕಿ 2ಸ್ಥಳದಲ್ಲಿಯೇ ಮೃತಪಟ್ಟಿದ್ದು, ಉಳಿದ 6 ಮಂದಿ ತೀವ್ರ ಗಾಯಗೊಂಡು ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧಪಟ್ಟ ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆಯ ಪಿಎಸ್‌ಐ ಎನ್.ಕಿರಣ್‌ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

