ತುಮಕೂರು

ಪ್ರತಿಭೆ ಹೊರತರಲು ಚಿತ್ರಕಲೆ ಸ್ಪರ್ಧೆ ಸಹಕಾರಿ

Published On :

ಕ.ಪ್ರ.ವಾರ್ತೆ ,  ಕೊರಟಗೆರೆ ,  ಜ.13
ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರತರಲು ಪಠ್ಯೇತರ ಚಟುವಟಿಕೆಯಾಗಿರುವ ಚಿತ್ರಕಲೆ ಸ್ಪರ್ಧೆ ತುಂಬಾ ಸಹಕಾರಿ ಎಂದು ಜಿ.ಪಂ ಮಾಜಿ ಅಧ್ಯಕ್ಷೆ ಪ್ರೇಮಾ ತಿಳಿಸಿದರು.
ಅವರು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಹೆಜ್ಜೆ ಫೌಂಡೇಶನ್ ವತಿಯಿಂದ ಡಾ. ಜಿ.ಎಸ್. ಶಿವರುದ್ರಪ್ಪ ಅವರ ನೆನಪಿನ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಮಕ್ಕಳ ಬೆಳವಣಿಗೆಗೆ ಹಿರಿಯರ ಮಾರ್ಗದರ್ಶನ ಅತ್ಯಗತ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಪಿ.ಆರ್ ಸುಧಾಕರ್ ಲಾಲ್ ಸಮಾಜದ ಬದಲಾವಣೆಗೆ ಸಂಘ ಸಂಸ್ಥೆಗಳ ಅವಶ್ಯಕತೆ ಇದ್ದು ಯುವಕರು ಮುಂದೆ ಬಂದು ಸಮಾಜಿಕ ಅರಿವು ಮೂಡಿಸುವ ಕೆಲಸ ಮಾಡುವಂತೆ ಸಲಹೆ ನೀಡಿದರು.
ನಿವೃತ್ತ ಮುಖ್ಯ ಶಿಕ್ಷಕ ವಿ. ಮಲ್ಲೇಶಯ್ಯ ಮಾತನಾಡಿ ಸಾಹಿತ್ಯ ಬಲ್ಲವರು ಯಾವುದೇ ನೋವಿಗೆ ಸಿಲುಕಲಾರದಷ್ಟು  ಪ್ರಭಲವಾಗಿರುತ್ತಾರೆ, ಹೃದಯ ಅರಳಲು ಸಾಹಿತಿಗಳು ಅದೇ ರೀತಿ ಮೆದುಳು ಅರಳಲು ವಿಜ್ಞಾನಿಗಳು ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.
ಗದ್ಯ-ಪದ್ಯಗಳು ಅಕ್ಷರಗಳಲ್ಲಿ ಮೂಡಿದರೆ ಮಾತುಗಳಿಂದ ಹೇಳಲಾರದ ಪದವನ್ನು ಚಿತ್ರವರ್ಣದಿಂದ ತಿಳಿಸುವ ದಿವ್ಯ ಶಕ್ತಿ ಇದೆ ಆದ್ದರಿಂದ ಚಿತ್ರಕಲೆಯಲ್ಲಿ ಪಾಲ್ಗೊಳ್ಳುವವರು ಜ್ಞಾನವಂತರಾಗಿರುತ್ತಾರೆ ಎಂದು ಪ್ರತಿಪಾದಿಸಿದರು.
ಜಿ.ಪಂ ಸದಸ್ಯೆ ದಾಕ್ಷಾಯಿಣಿ, ತಾ.ಪಂ ಅಧ್ಯಕ್ಷೆ ಅನಿತಾ,  ಸದಸ್ಯ ಎಲ್.ವಿ. ಪ್ರಕಾಶ್, ಮಾಜಿ ಪ.ಪಂ ಅಧ್ಯಕ್ಷ ಶಂಕರಪ್ಪ, ರಂಗಭೂಮಿ ಕಲಾವಿದ ಡಮರುಗ ಉಮೇಶ್, ಮುಖಂಡ ಕ್ಯಾಶವಾರ ಹನುಮಂತರಾಯಪ್ಪ, ಮೂಡ್ಲಗಿರೀಶ್, ಲಕ್ಷ್ಮಿನಾರಾಯಣ್, ಹೆಜ್ಜೆ ಪೌಂಡೇಶನ್ ಅಧ್ಯಕ್ಷ ಸುನಿಲ್ ರಾಜ್ ಅರಸ್, ಚಂದ್ರು, ದಿನೇಶ್, ಅನಿಲ್, ಚಿರಂಜೀವಿ, ಗಣೇಶ್, ವೀಣಾ ಜಗದಾಂಬ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.