ಬಂಡೆಗೆ ಭಾವಪೂಣ ಶ್ರದ್ಧಾಂಜಲಿ
ಕನ್ನಡಪ್ರಭ ವಾರ್ತೆ , ತುಮಕೂರು , ಜ.16
ಹುತಾತ್ಮ ಪೊಲೀಸ್ ಆಧಿಕಾರಿ ಮಲ್ಲಿಕಾರ್ಜುನ ಬಂಡೆಯವರಿಗೆ ತುಮಕೂರಿನ ಭಗತ್ ಕಾಂತ್ರಿ ಸೇನೆಯ ವತಿಯಿಂದ ಭಾವಪೂಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ತುಮಕೂರು ನಗರದ ಟೌನ್ ಹಾಲ್ ವೃತ್ತದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳಾದ ಕೆ.ಆರ್. ರಾಘವೇಂದ್ರ ಅವರು ಮಲ್ಲಿಕಾರ್ಜುನ ಬಂಡೆಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನ ಆಚರಣೆಯ ಮೂಲಕ ಹುತಾತ್ಮರ ಆತ್ಮಕ್ಕೆ ಶಾಂತಿಯನ್ನು ಕೋರಲಾಯಿತು.
ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಭಗತ್ ಕ್ರಾಂತಿ ಸೇನೆಯ ಮಂಚಲದೊರೆ ಆರಾಧ್ಯ ಹುತಾತ್ಮ ಪೊಲೀಸ್ ಆಧಿಕಾರಿ ಮಲ್ಲಿಕಾರ್ಜುನ ಬಂಡೆಯವರ ಸೇವೆ ಅನುಪಮವಾದದ್ದು. ಅವರ ಸೇವೆಯನ್ನು ನಾವೆಲ್ಲರೂ ಸ್ಮರಿಸಬೇಕಾದದ್ದು ಕರ್ತವ್ಯ ಎಂದರು.
ಸಮಾಜ ಘಾತುಕ ಶಕ್ತಿಗಳನ್ನು ದಮನ ಮಾಡಲು ರಾಜ್ಯ ಸರ್ಕಾರ ಸೂಕ್ತ ಭದ್ರತಾ ಸಲಕರಣೆಗಳನ್ನು ನೀಡಬೇಕು. ಇಲ್ಲವಾದಲ್ಲಿ ಮತ್ತಷ್ಟು ದಕ್ಷ ಆಧಿಕಾರಿಗಳನ್ನು ನಾವೆಲ್ಲ ಕಳೆದುಕೊಳ್ಳಬೇಕಾಗುತ್ತದೆ. ಮುನ್ನಾನಂತಹ ಸಮಾಜ ಘಾತುಕರನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕುವಂತಹ ಕಾರ್ಯವಾಗಬೇಕು ಎಂದರು.
ಯಾವುದೋ ರಾಜಕೀಯ ಅಥವಾ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಪೊಲೀಸ್ ವ್ಯವಸ್ಥೆ ಒಳಗಾಗಬಾರದು, ಪೊಲೀಸ್ ವ್ಯವಸ್ಥೆಯು ಇಂತಹ ಸಮಾಜ ಘಾತುಕಗಳ ವಿರುದ್ಧ ವ್ಯವಸ್ಥಿತ ತಾಂತ್ರಗಾರಿಕೆಯಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ರಾಷ್ಟ್ರಪತಿ ಪದಕದೊಂದಿಗೆ ಹುತಾತ್ಮ ಬಂಡೆಯವರನ್ನು ಗೌರವಿಸಬೇಕೆಂದು ಒತ್ತಾಯಿಸಿದ್ದಾರೆ.
ಶಿವಾನಂದ್, ಶ್ರೀನಿವಾಸ್ ಗೌಡ, ವಿನಯ್, ರೋಷನ್, ಕರುಣಾರಾಧ್ಯ, ವಿಷ್ಣುವರ್ಧನ್, ವಿರೂಪಾಕ್ಷ, ಬಸವರಾಜು. ಚೇತನ್, ಹನುಮಂತರಾಜು ಟಿ.ಎಚ್, ಶಂಭುಲಿಂಗಸ್ವಾಮಿ, ಬಿ.ಎನ್, ಮಂಜುನಾಥ್, ಓಂಕಾರ್, ಕುಣಿಗಲ್ ಮಂಜು, ನಾಗಭೂಷಣ್, ರವಿಶಂಕರ್ ಬೆಳ್ಳಾವಿ ಇತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

