ತುಮಕೂರು

ಛಾಯಾಚಿತ್ರ ಸಂಘದಿಂದ ತಾಪಂ ನೂತನ ಅಧ್ಯಕ್ಷರಿಗೆ ಸನ್ಮಾನ

Published On :

ಹುಳಿಯಾರು:  ಚಿಕ್ಕನಾಯಕನಹಳ್ಳಿ ತಾಲೂಕಿನ ತಾ.ಪಂ. ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಹುಳಿಯಾರು ಹೋಬಳಿ ಕೆಂಕೆರೆ ಕೆ.ಎಂ. ನವೀನ್ ಅವರನ್ನು  ಹೋಬಳಿ  ಛಾಯಾಚಿತ್ರ ಗ್ರಾಹಕ ಸೇವಾಚಾರಿಟಬಲ್ ಟ್ರಸ್ಟ್ನವರು ಅಭಿನಂಧಿಸಿ, ಸನ್ಮಾನಿಸಿದರು.
 ಟ್ರಸ್ಟ್ ಗೌರವಾಧ್ಯಕ್ಷ  ತಾಂಡವಾಚಾರ್  ಮಾತನಾಡಿ, ತಮ್ಮ ಟ್ರಸ್ಟ್ ಸ್ಥಾಪನೆಯಾಗಿ  ವರ್ಷಗಳು ಕಳೆದಿದ್ದು, ನಮ್ಮೆಲ್ಲ ಪದಾಧಿಕಾರಿಗಳು ವೃತ್ತಿಯ ಜೊತೆ ಜೊತೆಗೆ ಸ್ವಯಂಪ್ರೇರಣೆಯಿಂದ ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಉತ್ತಮ ಸಂಘಟನೆಯಿಂದಾಗಿ ಸದ್ಯ ಹುಳಿಯಾರು ಹೋಬಳಿ ಮಟ್ಟದಲ್ಲಿ
ಛಾಯಾಚಿತ್ರಗ್ರಾಹಕ ಭವನ ನಿರ್ಮಾಣ ಮಾಡುವ ಬಯಕೆಯನ್ನು ಹೊಂದಿದ್ದು, ಅದಕ್ಕೆ ತಾ.ಪಂ.ಯಿಂದ ದೊರೆಯುವಂತಹ ಸ್ವಲ್ಪ ಮಟ್ಟಿನ ಸೌಲಭ್ಯವನ್ನು ಕಲ್ಪಿಸಿಕೊಂಡುವಂತೆ ಅಧ್ಯಕ್ಷರಲ್ಲಿ ಮನವಿ ಮಾಡಿದರು.
ಸಂಘದ ಅಧ್ಯಕ್ಷ ಗಾಳಿದಿಬ್ಬ ಜಯಣ್ಣ ಮಾತನಾಡಿ, ಸ್ಥಳಿಯ ಸಂಸ್ಥೆಯ ಅಧಿಕಾರಿಗಳಿಗೆ ಸರ್ಕಾರ ನೀಡಿರುವ ಕ್ಯಾಮರಗಳನ್ನು ಅಧಿಕಾರಿಗಳು ಸರ್ಕಾರಿ ಕಾರ್ಯಗಳ ಛಾಯಾಚಿತ್ರ ತೆಗೆಯಲು ಮಾತ್ರ ಬಳಸದೇ, ಇತರೆ ಸಮಾರಂಭಗಳ ಚಿತ್ರಗಳನ್ನು ತೆಗೆಯುತಿದ್ದು, ನಮ್ಮ ಅನ್ನಕ್ಕೆ ಕಲ್ಲು ಹಾಕುತ್ತಿದ್ದಾರೆ, ಇಂತಹದನ್ನು ಗಂಭೀರವಾಗಿ ಪರಿಗಣಿಸಿ, ಈ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿದರು.
 ಸನ್ಮಾನ ಸ್ವೀಕರಿಸಿದ ತಾ.ಪಂ.ಕೆಂಕೆರೆ ನವೀನ್ ಮಾತನಾಡಿ, ನಾನು ಸ್ಥಳಿಯನಾಗಿದ್ದು ಇಲ್ಲಿನ ಸಮಸ್ಯೆಗಳನ್ನು ಚೆನ್ನಾಗಿ ಅರಿತಿದ್ದೇನೆ. ಅವುಗಳ ಪರಿಹಾರಕ್ಕೆ ಕ್ರಮಕೈಗೊಳ್ಳುವುದಾಗಿ ಹಾಗೂ ಹೋಬಳಿಯಲ್ಲಿ  ಛಾಯಾಚಿತ್ರ ಗ್ರಾಹಕ ಭವನವನ್ನು ನಿರ್ಮಾಣ ಮಾಡಲು ಹೊರಟಿರುವುದು ಹೆಮ್ಮೆಯ ಸಂಗತಿಯಾಗಿದ್ದು, ತಾ.ಪಂ. ಅನುಮೋದನೆಯಾದಲ್ಲಿ ಮೊದಲಿಗೆ ತಮ್ಮ ಅನುದಾನದಲ್ಲಿ  ಎರಡು ಲಕ್ಷ ರು.ಗಳನ್ನು ಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಂಬಿಕಾ ಸ್ಟುಡಿಯೋದ ಸುದರ್ಶನಚಾರ್, ಚಂದ್ರಶೇಖರ್, ಈಶ್ವರ್, ರವಿ, ಎಸ್.ಬಿ.ಸ್ಟುಡಿಯೋದ ದುರ್ಗರಾಜು, ರಾಜು, ಬಡಗಿರಾಜು, ಮಹೇಶ್, ಕೆಂಕೆರೆಮಂಜು, ಮೋಹನ್, ರಘು, ಶಿವು ಸೇರಿದಂತೆ ಸಂಘದ ಪದಾಧಿಕಾರಿಗಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.