ಉಮಾ ಪ್ರಗತಿ ಕಾಲೇಜಿನಲ್ಲಿ ವಿವೇಕಾನಂದ ದಿನಾಚರಣೆ
ತುಮಕೂರು: ತುಮಕೂರಿನ ಉಮಾ ಪ್ರಗತಿ ಕಾಲೇಜಿನಲ್ಲಿ ಎಬಿವಿಪಿ ವತಿಯಿಂದ ಸ್ವಾಮಿ ವಿವೇಕಾನಂದರ 151ನೇ ಜಯಂತಿ ಆಚರಿಸಲಾಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಂಚಾಲಕ ಸುಬ್ರಮಣಿ, ವಿದ್ಯಾರ್ಥಿಗಳಲ್ಲಿ ಶಕ್ತಿಯನ್ನು ತುಂಬಲು ಹಲವಾರು ಚಟುವಟಿಕೆಗಳಾದ ಥಿಂಕ್ ಇಂಡಿಯಾ, ಜಿಜ್ಞಾಸೆ, ಸೃಷ್ಟಿ, ಪ್ರೇರಣ, ಸೃಜನಾದಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಜೊತೆಗೆ ದೇಶಕ್ಕೆ ಸಮಸ್ಯೆ ಬಂದಾಗ ಮುಂದೆ ನಿಂತು ವಿರೋಧಿಸಿ, ಪರಿಹಾರ ಕಂಡುಕೊಳ್ಳುವ ಏಕೈಕ ಅತಿದೊಡ್ಡ ವಿದ್ಯಾರ್ಥಿ ಸಂಘಟನೆ ಎಂದರು. ಮುಖ್ಯ ಭಾಷಣಕಾರರಾಗಿ ಮಾತನಾಡಿದ ನಗರ ಕಾರ್ಯದರ್ಶಿ ಆಮರೇಶ ಈ ರಾಷ್ಟ್ರದ ಭವಿಷ್ಯವು ರಾಷ್ಟ್ರದ ಅತಿದೊಡ್ಡ ಶಕ್ತಿಯಾದ ಯವಕರಲ್ಲಿದೆ. ಇದನ್ನೇ ಸ್ವಾಮಿ ವಿವೇಕಾನಂದರು ಸಾರಿ ಸಾರಿ ಹೇಳಿದ್ದಾರೆ. ಆದರೆ ಇವತ್ತಿನ ಈ ಯುವ ಪೀಳಿಗೆ ಮಾತ್ರ ತನ್ನ ಕರ್ತವ್ಯವನ್ನು ಮರೆತು, ಮೋಜಿನ ಗುಂಗಿನಲ್ಲಿ ತನ್ನ ಶಕ್ತಿಯನ್ನು ಅಪವ್ಯಯ ಮಾಡುತ್ತಿದೆ. ಇಂದಿನ ಯುವಕರಿಗೆ ಸಿನಿಮಾ ತಾರೆಯರೇ ಮಾದರಿಯಾಗುತ್ತಿದ್ದಾರೆ ಎಂದರು.
ಮಧುಗಿರಿ ರೋಟರಿ ಭವನದಲ್ಲಿ ರಾಷ್ಟ್ರಕವಿ ಶಿವರುದ್ರಪ್ಪ ಸ್ಮರಣೆ
ತುಮಕೂರು: ನಮ್ಮನ್ನಗಲಿದ ರಾಷ್ಟ್ರಕವಿ ಕವಿಚೇತನ ಜಿ.ಎಸ್. ಶಿವರುದ್ರಪ್ಪ ಅವರ ನೆನಪಿನ ಕಾರ್ಯಕ್ರಮವನ್ನು ಜ. 26 ರಂದು ಮಧ್ಯಾಹ್ನ 3.30 ಗಂಟೆಗೆ ಮಧುಗಿರಿಯ ರೋಟರಿ ಭವನದಲ್ಲಿ ಆಯೋಜಿಸಲಾಗಿದೆ ಎಂದು ರೋಟರಿ ಪದಾಧಿಕಾರಿಗಳು ತಿಳಿಸಿದ್ದಾರೆ. ನಾಡು ಮಹಾನ್ ಸಾಹಿತಿಯಾಗ ಜಿ.ಎಸ್. ಶಿವರುದ್ರಪ್ಪನವರ ಮರು ಓದಿನ ಅವಶ್ಯಕತೆಯ ಪ್ರಯತ್ನವಾಗಿ ಅವರ ನೆನಪಿನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಅಂದು ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಕೆ.ಬಿ. ಸಿದ್ದಯ್ಯ ಅವರಿಗೆ ಅಭಿನಂದನಾ ಸಮಾರಂಭವನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಸಮಾರಂಭದ ಅಧ್ಯಕ್ಷತೆಯನ್ನು ಮಧುಗಿರಿ ರೋಟರಿ ಅಧ್ಯಕ್ಷ ಎಂ. ವೆಂಕಟರಾಮು ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸಾಹಿತಿಗಳು ಹಾಗೂ ಚಿಂತಕರೂ ಆದ ಕೆ.ಪಿ. ನಟರಾಜ್ ಮತ್ತು ಯುವ ರಂಗಕರ್ಮಿ ಅನಿಲ್ಕುಮಾರ್ ಚಿಕ್ಕದಳವಾಟ ಆಗಮಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

