ಚಮ್ಮಾರನ ಹೆಂಡತಿ ನಾಟಕ ಪ್ರದರ್ಶನ ಇಂದು
ತಿಪಟೂರು: ಪಟ್ಟಣದ ಕೆ.ಆರ್. ಬಡಾವಣೆಯ ಬಯಲು ರಂಗಮಂದಿರದಲ್ಲಿ ಹೆಗ್ಗೋಡಿನ ಥಿಯೇಟರ್ ಸಮುರಾಯ್ ಅಭಿನಯಿಸುವ ಸ್ಪೈನ್ ಕವಿ, ನಾಟಕಕಾರ ಗಾರ್ಸಿಯಾ ಲೋರ್ಕಾನ ಶೂ ಮೇಕರ್ ಪ್ರೈಡಿಜಿಯಸ್ ವೈಫ್ ಪ್ರದರ್ಶಿತಗೊಳ್ಳಲಿದೆ. ಕನ್ನಡ ರೂಪಾಂತರವನ್ನು ಕೆ.ವಿ. ಅಕ್ಷರ ಅವರು ಚಮ್ಮಾರನ ಹೆಂಡತಿ ಎಂದು ಮಾಡಲಾಗಿದೆ. ನಾಟಕ ಪ್ರದರ್ಶಿಸಲಾಗುತ್ತಿದೆ. ಸತೀಶ್ ತಿಪಟೂರು ಅವರ ನಿರ್ದೇಶನದಲ್ಲಿ ಇಂದು ಸಂಜೆ 7ಗಂಟೆಗೆ ಪ್ರದರ್ಶನಗೊಳ್ಳಲಿದೆ ಎಂದು ಸ್ನೇಹ ಜ್ಯೋತಿ ಸಂಸ್ಥೆಯ ಮುಖ್ಯಸ್ಥ ಸಂತೋಷ್ ತಿಳಿಸಿದ್ದಾರೆ.
ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ
ತುಮಕೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಟ 5 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿ, ಸಂಸ್ಥೆಗಳಿಗೆ ರಾಜ್ಯ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. ಜಿಲ್ಲೆಯ ಅರ್ಹ ಇಬ್ಬರು ವ್ಯಕ್ತಿಗಳಿಗೆ ಹಾಗೂ 2 ಸಂಸ್ಥೆಗಳಿಗೆ ಈ ಪ್ರಶಸ್ತಿ ನೀಡಲಾಗುವುದು. ಆಯ್ಕೆಯಾದ ವ್ಯಕ್ತಿಗಳಿಗೆ ತಲಾ ರು. 25 ಸಾವಿರು ನಗದು ಮತ್ತು ಪ್ರಶಸ್ತಿಪತ್ರ ಹಾಗೂ ಸಂಸ್ಥೆಗಳಿಗೆ ತಲಾ ರು. 1 ಲಕ್ಷ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಪ್ರಶಸ್ತಿಯನ್ನು ಮಕ್ಕಳ ದಿನಾಚರಣೆಯಂದು ಪ್ರದಾನ ಮಾಡಲಾಗುವುದು. ಆಸಕ್ತರು ತಮ್ಮ ಅರ್ಜಿಗಳನ್ನು ದ್ವಿಪ್ರತಿಯಲ್ಲಿ ಆಗಸ್ಟ್ 16ರೊಳಗೆ ಸಲ್ಲಿಸಬೇಕು. ಅರ್ಜಿ ಕನ್ನಡ ಭಾಷೆಯಲ್ಲಿಯೇ ಭರ್ತಿ ಮಾಡಬೇಕು. ಅರ್ಜಿ ಮತ್ತಿತರ ಮಾಹಿತಿಗಾಗಿ ಉಪನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಕಟ್ಟಡ, ಎಂ.ಜಿ.ರಸ್ತೆ, ತುಮಕೂರು ಇವರನ್ನು ಸಂಪರ್ಕಿಸಬಹುದು.246056 ಸಂಪರ್ಕಿಸಬಹುದು.
ಗುರುಪೂರ್ಣಿಮೆ ಹರಿಕಾರ ಕೃಷ್ಣಮೂರ್ತಿದಾಸರು
ತಿಪಟೂರು: ಪಟ್ಟಣದ ಶ್ರೀ ರಾಮಮಂದಿರ ಗುರುಪೂರ್ಣಿಮೆಯ ಹರಿಕಾರ, ಸಂತ ಕೃಷ್ಣಮೂರ್ತಿದಾಸರು ಲೀನವಾದ 12ವರ್ಷಗಳ ಬಳಿಕೆ ಪುರಾರಂಭಗೊಂಡ ಗುರು ಪೂರ್ಣಿಮಾ ಮಹೋತ್ಸವ ಸೇವೆ ಸಾರ್ಥಕ ದಶಕ ಪೂರೈಸಿದೆ. ಮೂಲತಃ ತುರುವೇಕೆರೆಯಲ್ಲಿ ಜನಿಸಿದ ಕೃಷ್ಣಮೂರ್ತಿದಾಸರು ಪರರ ಕಲ್ಯಾಣಕ್ಕಾಗಿಯೇ ಬದುಕಿ, ಭಕ್ತಿಮಾರ್ಗವನ್ನು ಸಾರಿದರು. ನಗರದ ಶ್ರೀರಾಮ ಮಂದಿರದಲ್ಲಿ ಇವರು ವರ್ಷಗಟ್ಟಲೆ ನೆಲೆಸಿದ್ದರು. ಪ್ರತಿ ಆಷಾಢ ಮಾಸದಲ್ಲಿ ತಿಪಟೂರು, ಹಾಸನ, ತುಮಕೂರು, ಹೊಳೆನರಸೀಪುರ, ರಾಮನಾಥಪುರ, ಅರಕಲಗೂಡು, ತುರುವೇಕೆರೆ ಇನ್ನಿತರ ಸ್ಥಳಗಳಲ್ಲಿ ಸಂಹಿತಾ ಹೋಮ, ಶ್ರೀ ಸದ್ಗುರು ದತ್ತ ಹೋಮಗಳನ್ನು ನಡೆಸಿ, ರಾಮನಾಮ ಹೇಳಿಸಿ, ಜಾತಿ-ಧರ್ಮ ಭೇದವಿಲ್ಲದೆ ಯಥೇಚ್ಛವಾಗಿ ಅನ್ನದಾನ ಮಾಡುತ್ತಿದ್ದರು. ಶ್ರೀಗಳು ಲೀನವಾದ ಬಳಿಕ ಅನ್ನದಾನ ವ್ಯವಸ್ಥೆ ಸತತ 12ವರ್ಷಗಳ ಕಾಲ ಸ್ಥಗಿತಗೊಂಡಿತು. ದಶಕಗಳ ಕಾಲ ನಿರಂತರ ಸೇವೆ ಸಲ್ಲಿಸುತ್ತಾ ಬಂದಿರುವ ಸಮಿತಿ, ಜು.10ರಿಂದ ಜು.12ರವರೆಗೆ ಹನ್ನೊಂದನೇ ವರ್ಷದ ಗುರುಪೂರ್ಣಿಮಾ ಮಹೋತ್ಸವಕ್ಕೆ ಸಜ್ಜಾಗಿದೆ.
ಪ್ರಥಮ ದರ್ಜೆ ಉತ್ತೀರ್ಣರಾದವಿದ್ಯಾರ್ಥಿಗಳಿಗೆ ಬಹುಮಾನ
ತುಮಕೂರು: ತುಮಕೂರು ತಾಲೂಕು ಸಮಾಜ ಕಲ್ಯಾಣ ಇಲಾಖೆಯು ದ್ವಿತೀಯ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಿಗೆ ಬಹುಮಾನ ಧನ ನೀಡಲು ಅರ್ಹ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಅರ್ಜಿಯೊಂದಿಗೆ ತಮ್ಮ ಭಾವಚಿತ್ರ, ರಾಷ್ಟ್ರೀಕೃತ ಬ್ಯಾಂಕ್ ಪಾಸ್ಪುಸ್ತಕ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅಂತಿಮ ವರ್ಷದ ಮೂಲ ಅಂಕಪಟ್ಟಿ ಮತ್ತಿತರ ಮಾಹಿಯನ್ನು ಲಗತ್ತಿಸಬೇಕೆಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

