ರಾಮಲಿಂಗೇಶ್ವರ ಸ್ವಾಮಿ ಕುಂಭಾಭಿಷೇಕ
ಗುಬ್ಬಿ: ಇತಿಹಾಸ ಪ್ರಸಿದ್ಧ ಪಟ್ಟಣದ ಸುರ ಸದ್ಮಗಿರಿಯಲ್ಲಿ ನೆಲೆಸಿರುವ ರಾಮಲಿಂಗೇಶ್ವರ ಸ್ವಾಮಿಗೆ ಪ್ರತಿ ವರ್ಷದಂತೆ ಈ ಬಾರಿಯೂ ವಿಜೃಂಭಣೆ ಕುಂಭಾಭಿಷೇಕ ನಡೆಯಿತು.
ಕಾರ್ಯಕ್ರಮದ ಪ್ರಯುಕ್ತ ಆಲಯದಲ್ಲಿ ಸ್ವಸ್ತಿವಾಚನ, ಕಳಶ ಸ್ಥಾಪನೆ, ಹೋಮ, ಹವನ, ಅಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಸೇರಿದಂತೆ ಮುಂತಾದ ಪೂಜಾ ಕೈಂಕರ್ಯಗಳು ನೆರವೇರಿದವು. ಪಟ್ಟಣ ಸೇರಿದಂತೆ ತಾಲೂಕಿನ ಸಹಸ್ರಾರು ಭಕ್ತರು ಬೆಟ್ಟಕ್ಕೆ ಆಗಮಿಸಿ ಸ್ವಾಮಿಯ ದರ್ಶನ ಪಡೆದು ಪುನೀತರಾದರು.
ಆಷಾಢ ಮಾಸದಲ್ಲಿ ವರುಣ ದೇವನ ಕೃಪೆಗಾಗಿ ಅನಾದಿ ಕಾಲದಿಂದಲೂ ಇಲ್ಲಿ ಸಹಸ್ರಾರು ಮಣ್ಣಿನ ಕುಂಭಗಳಿಂದ ದೇವರಿಗೆ ಅಭಿಷೇಕ ನಡೆಯುತ್ತದೆ. ದೇವಾಲಯಕ್ಕೆ ಸಮೀಪವಿರುವ ಪಾರ್ವತಿ ದೋಣಿಯಲ್ಲಿ ಶೇಖರಗೊಂಡ ಪವಿತ್ರ ಜಲವನ್ನು ದೇವರ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳು ಕುಂಭಗಳಲ್ಲಿ ತುಂಬಿ ಸರತಿಯಲ್ಲಿ ಹೊತ್ತು ತಂದು ಸ್ವಾಮಿಗೆ ಅರ್ಪಿಸುತ್ತಾರೆ. ಹೀಗೆ ಮಾಡುವುದರಿಂದ ಉತ್ತಮ ಮಳೆ, ಬೆಳೆಯಾಗುವುದೆಂದು ಪ್ರತೀತಿಯಿದೆ. ಮೂರು ದಿನಗಳ ಕಾಲ ನಡೆದ ಈ ಧಾರ್ಮಿಕ ಕಾರ್ಯಕ್ರಮವನ್ನು ಸ್ಥಳೀಯ ಪಂಚಲಿಂಗ ದೇವಾಲಯಗಳ ಅಭಿವೃದ್ಧಿ ಟ್ರಸ್ಟ್ ಏರ್ಪಡಿಸಿತ್ತು.
ಪೂಜಾ ವಿಧಿ ವಿಧಾನಗಳಲ್ಲಿ ನಾಗೇಂದ್ರ, ಪುರುಷೋತ್ತಮ, ಗು.ನ. ನಾಗೇಂದ್ರಭಟ್, ಸುಬ್ರಮಣ್ಯ ಶಾಸ್ತ್ರಿ, ರವಿಕುಮಾರ್, ರವಿ ಶಾಸ್ತ್ರಿ, ಮ.ನಾ.ಮಂಜುನಾಥ್, ಮತ್ತು ದೇವಾಲಯದ ಆಗಮಿಕ ಅರ್ಚಕರಾದ ರಾಮನಾಥ್ ದೀಕ್ಷಿತ್, ಮಂಜುನಾಥ್ ದೀಕ್ಷಿತ್ ಮತ್ತು ಶಂಕರ್ ದೀಕ್ಷಿತ್, ಟ್ರಸ್ಟ್ ಅಧ್ಯಕ್ಷ ವಿ. ಗಂಗಾಧರ್, ಸಿ.ಆರ್. ಮಂಜುನಾಥ್, ಆರ್.ಸೂರ್ಯ ಪ್ರಕಾಶ್, ರಾಜಶೇಖರ್, ತಿಮ್ಮಾರೆಡ್ಡಿ, ಬ್ಯಾಂಕ್ ಸುಬ್ಬರಾಯಪ್ಪ, ಜೀನರಾಜಯ್ಯ, ವೇಣುಗೋಪಾಲ್, ಸೂರ್ಯನಾರಾಯಣರಾವ್, ರಾಘವೇಂದ್ರ, ಸೇರಿದಂತೆ ಹಲವರು ಭಾಗವಹಿಸಿದ್ದರು.
ಹಿರಿಯರ ತ್ಯಾಗ ಮರೆತರೆ ದೇಶಕ್ಕೆ ಅಪಾಯ
ಕೋಲಾರ: ಚಂದ್ರಶೇಖರ ಆಜಾದ್ ಸೇರಿದಂತೆ ಅನೇಕ ಹಿರಿಯರು ಭಾರತವನ್ನು ಬ್ರಿಟೀಷರ ದಾಸ್ಯದಿಂದ ಪಾರು ಮಾಡಲು ತ್ಯಾಗ ಬಲಿದಾನ ಮಾಡಿದ್ದಾರೆ. ಈ ಹಿರಿಯರ ತ್ಯಾಗವನ್ನು ಮರೆತು ಸ್ವೆಚ್ಛಾಚಾರದಿಂದ ಬದುಕು ನಡೆಸಲು ಹೊರಟರೆ ದೇಶಕ್ಕೆ ಅಪಾಯ ತಪ್ಪಿದ್ದಲ್ಲ ಎಂದು ಜಾಗೃತ ಭಾರತ ಸದಸ್ಯರಾದ ಯಶಸ್ ತಿಳಿಸಿದರು. ನಗರದ ಲಯನ್ಸ್ ಕ್ಲಬ್ನಲ್ಲಿ ಚಂದ್ರಶೇಖರ್ ಆಜಾದ್ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಕೊಂಡಿದ್ದ ಏಕ್ ಶ್ಯಾಮ್ ಆಜಾದ್ ಕೆ ನಾಮ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

