ತುಮಕೂರು

ತುಮಕೂರಿಗೆ ಮತ್ತೊಂದು ವನ್ಯಜೀವಿಧಾಮ

Published On :

ತುಮಕೂರು: ಕೃಷ್ಣಮೃಗ ವನ್ಯಜೀವಿಧಾಮ ಹೊಂದಿರುವ ತುಮಕೂರು ಜಿಲ್ಲೆಯಲ್ಲಿ ಕರಡಿ ವನ್ಯಜೀವಿಧಾಮ ಘೋಷಣೆಗೂ ಸರ್ಕಾರ ತೀರ್ಮಾನಿಸಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಉನ್ನತಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಅಲ್ಲಿಗೆ ಮಧುಗಿರಿ ತಾಲೂಕಿಗೆ ಎರಡು ವನ್ಯಜೀವಿಧಾಮಗಳು ದೊರೆತಂದಾಗಿದೆ.
ಈಗಾಗಲೇ ಘೋಷಿಸಿರುವ ಜಯಮಂಗಲಿ ಕೃಷ್ಣಮೃಗ ಸಂರಕ್ಷಿತ ಪ್ರದೇಶದೊಂದಿಗೆ ಹೊಸದಾಗಿ ಮಧುಗಿರಿ ಹಾಗೂ ಕೊರಟಗೆರೆಯ ವ್ಯಾಪ್ತಿಯಲ್ಲಿ ಬರುವ ತಿಮ್ಲಾಪುರ ಸೇರ್ಪಡೆಯಾಗಲಿದೆ.
ಕರಡಿ ಹಾಗೂ ಮಾನವ ಸಂಘರ್ಷದಿಂದ ಬಳ್ಳಾರಿ ನಂತರ ಅತೀ ಹೆಚ್ಚು ಸಾವು, ನೋವುಗಳು ವರದಿಯಾಗಿದ್ದು ಇದೇ ಭಾಗದಲ್ಲಿ. ಹೀಗಾಗಿ ತುಮಕೂರಿನ ವನ್ಯಜೀವಿ ನಿಸರ್ಗ ಸಂಸ್ಥೆ 12 ವರ್ಷಗಳಿಂದ ತಿಮ್ಲಾಪುರವನ್ನು ಕರಡಿ ವನ್ಯಧಾಮವಾಗಿ ಘೋಷಿಸಲು ಒತ್ತಡ ಹೇರುತ್ತಲೇ ಇತ್ತು. ಈ ಸಂಬಂಧ ಅರಣ್ಯ ಇಲಾಖೆಯ ಮುಖಾಂತರ ಸರ್ಕಾರಕ್ಕೆ ವಿವರವಾದ ವರದಿಯನ್ನೂ ಸಲ್ಲಿಸಿತ್ತು.
ಅರಣ್ಯ ವ್ಯಾಪ್ತಿಯ 3047.07 ಹೆಕ್ಟರ್ ಪ್ರದೇಶವನ್ನು ವನ್ಯಜೀವಿಧಾಮದೊಳಗೆ ಸೇರಿಸಲು ತೀರ್ಮಾನಿಸಿದೆ. ಕಮ್ಮನಕೋಟೆ, ಹೊಸಹಳ್ಳಿ, ತಾಯಗೊಂಡನಹಳ್ಳಿ, ಸಜ್ಜಲಹಳ್ಳಿ, ತಿಮ್ಲಾಪುರ, ಬೊಮ್ಮೇತಿಮ್ಮನಹಳ್ಳಿ, ಕಾವನದಾಳ, ಚಿಕ್ಕತಿಮ್ಮನಹಳ್ಳಿ, ಕುರ್ರಂಕೋಟೆ, ತಿಮ್ಮನಪಾಳ್ಯ ಹಾಗೂ ಬಿಸಾಡಿಕರಿಯನ ಪಾಳ್ಯಗಳು ವನ್ಯಜೀವಿಧಾಮಕ್ಕೆ ಸೇರಲಿವೆ. ಈ ಪ್ರದೇಶವು ಮಧುಗಿರಿ ಹಾಗೂ ಕೊರಟಗೆರೆ ತಾಲೂಕಿಗೆ ಸೇರಿದ ಪ್ರದೇಶದಲ್ಲಿದೆ. ಕೋಳಿಕಾಲ್ ಕಾದಿಟ್ಟ ಅರಣ್ಯವೂ ಈ ವ್ಯಾಪ್ತಿಗೆ ಬರುವದರಿಂದ ಸುಪ್ರಸಿದ್ದ ಸಿದ್ದರ ಬೆಟ್ಟ ಸಹ ವನ್ಯಧಾಮದ ಸರಹದ್ದಿಗೆ ಬರುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.