ತುಮಕೂರು

ಹುಳಿಯಾರು ಹೋಬಳಿಯಲ್ಲಿ ರಾಗಿ ಬಿತ್ತನೆಗೆ ಚಾಲನೆ

Published On :

ಹುಳಿಯಾರು: ಪಟ್ಟಣ ಸೇರಿದಂತೆ ಹೋಬಳಿಯ ನಾನಾ ಭಾಗಗಳ ರೈತರು ರಾಗಿ ಬಿತ್ತನೆಗಾಗಿ ಹೊಲ ಹದ ಮಾಡುವ ಕಾರ್ಯದಲ್ಲಿ ತೊಡಗಿದ್ದು, ಕೆಲವೆಡೆ ಇನ್ನೊಂದು ಹದ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಕಳೆದ ಕೆಲ ದಿನಗಳ ಹಿಂದ ಬಂದ ಅಲ್ಪಸ್ವಲ್ಪ ಮಳೆಯಿಂದಾಗಿ ಹುಳಿಯಾರು ಹೋಬಳಿಯ ಕೆಂಕೆರೆ, ಪುರದಮಠ, ಬರಕನಹಾಳ್, ರಂಗನಕೆರೆ ಮುಂತಾದ ಭಾಗದ ರೈತರು ರಾಗಿ ಬಿತ್ತನೆ ಮಾಡಲು ಸಜ್ಜಾಗಿ ತಮ್ಮ ಹೊಲ ಹದ ಮಾಡಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆ. ಜುಲೈ ತಿಂಗಳಿಂದ ರಾಗಿ ಬಿತ್ತನೆ ಪ್ರಾರಂಭವಾಗಿದ್ದು ಈ ಸಮಯದಲ್ಲಿ ಬೀಜಬಿತ್ತಿ, ಉತ್ತಮ ಮಳೆಯಾದರೆ ಹೆಚ್ಚು ಫಸಲು ದೊರೆಯುತ್ತದೆ ಎಂಬ ನಂಬಿಕೆಯಿಂದೆ. ರಾಗಿ ಬೆಳೆಯನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ತಾಲೂಕು ಕೃಷಿ ಇಲಾಖೆವತಿಯಿಂದ ಹೋಬಳಿಯ ನಾನಾ ಭಾಗದ ರೈತರಿಗೆ ಒರಟು ಧಾನ್ಯಗಳ ಅಭಿವೃದ್ಧಿ ಯೋಜನೆಯಡಿ ಉಚಿತವಾಗಿ ರಾಗಿ, ಜಿಪ್ಸಂ, ಬೋರೆಕ್ಸ್ನಂತಹ ಲಘುಪೋಷಕಾಂಶಯುಕ್ತ ಗೊಬ್ಬರವನ್ನು ವಿತರಿಸುತ್ತಿದ್ದಾರೆ. ಗ್ರಾಮಗಳಿಗೆ ತೆರಳಿ ಬೆಳೆಯ ಬಗ್ಗೆ  ಮಾಹಿತಿ ನೀಡುವುದರ ಮೂಲಕ ರೈತರು ಹೆಚ್ಚು ಬೆಳೆಯುವಂತೆ ಪ್ರೋತ್ಸಾಹಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.