ತುಮಕೂರು

ಲೈನ್‌ಮನ್ ಬೈಕ್ ಕಳವು

Published On :

ಕುಣಿಗಲ್: ಬೆಸ್ಕಾಂನ ಲೈನ್‌ಮನ್ ಅವರ ಬೈಕ್ ಕಳುವಾಗಿದ್ದು, ಅಮೃತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳವಾದ ಬೈಕ್ ಲೈನ್‌ಮನ್ ರಾಜು ಎಂಬವರಿಗೆ ಸೇರಿದೆ. ಮೇ 22ರಂದು ಎಡೆಯೂರಿನಲ್ಲಿ ತಮ್ಮ ಸ್ನೇಹಿತನ ಮದುವೆಗೆ ತಮ್ಮ ಹಿರೋ ಹೊಂಡಾ ಸ್ಪ್ಲೆಂಡರ್ ಬೈಕ್‌ನಲ್ಲಿ ಆಗಮಿಸಿದ್ದರು.  ನಂತರ ಎಡೆಯೂರಿನ ಸಮೀಪ ಮುಖ್ಯರಸ್ತೆಯ ಪಕ್ಕದಲ್ಲಿ ಬೈಕ್ ನಿಲ್ಲಿಸಿ ಮೂತ್ರ ವಿಸರ್ಜನೆಗೆ ತೆರಳಿದ್ದರು. ವಾಪಸ್ ಬರುವಷ್ಟರಲ್ಲೇ ಬೈಕ್ ಕಳವಾಗಿತ್ತು.
ಗುಚ್ಛ ಗ್ರಾಮಗಳಲ್ಲಿ ಮಾಹಿತಿ ಪ್ರಚಾರ
ತಿಪಟೂರು: ಭೂ ಚೇನತ ಯೋಜನೆಯಡಿ ಗುಚ್ಛಗ್ರಾಮಗಳಲ್ಲಿ ಮಾಹಿತಿ ಪ್ರಚಾರ ಸಭೆಗಳನ್ನು ಬುಧವಾರದಿಂದ ಜೂ.13ರವರೆಗೆ ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಜಯಪ್ಪ ತಿಳಿಸಿದ್ದಾರೆ. ಭೂ ಚೇತನ ಯೋಜನೆಯಡಿ ವಿವಿಧ ಬೆಳೆಗಳಲ್ಲಿ ಅಳವಡಿಸಬಹುದಾದ ತಾಂತ್ರಿಕತೆ ಕುರಿತು ಮಾಹಿತಿ ನೀಡಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಸದುಪಯೋಗಪಡೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಮಹಿಳಾ ಕಾಲೇಜಿಗೆ ಪ್ರವೇಶ ಆರಂಭ
ಪಾವಗಡ: ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್ ಆರಂಭವಾಗಿದ್ದು, ವಿದ್ಯಾರ್ಥಿನಿಯರು ಪ್ರವೇಶ ಪಡೆದುಕೊಳ್ಳಬೇಕು ಎಂದು ಪ್ರಾಂಶುಪಾಲ ಡಾ.ವೈ.ಎಸ್.ಹನುಮಂತರಾಯಪ್ಪ ತಿಳಿಸಿದ್ದಾರೆ.  2014-15ನೇ ಸಾಲಿನ ಶೈಕ್ಷಣಿಕ ವರ್ಷದ ಬಿಎ, ಬಿಕಾಂ, ಬಿಎಸ್‌ಸಿ ಪ್ರಥಮ ವರ್ಷದ ತರಗತಿಗಳ ಪ್ರವೇಶ ಆರಂಭವಾಗಿದ್ದು, ಕಾಲೇಜಿನಿಂದ ಅರ್ಜಿ ವಿತರಿಸಲಾಗುತ್ತಿದೆ. ಸುಮಾರು 57ಅರ್ಜಿಗಳು ವಿತರಣೆ ಆಗಿದ್ದು, ಮುಂದಿನ ದಿನಗಳಲ್ಲಿ ಪ್ರವೇಶಕ್ಕೆ ಬೇಡಿಕೆ ಹೆಚ್ಚಾಗುವ ವಿಶ್ವಾಸ ಅವರು ವ್ಯಕ್ತಪಡಿಸಿದರು. ಕಾಲೇಜಿಗೆ ಎಲ್ಲ ರೀತಿಯಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ. ಹಂತಹಂತವಾಗಿ ಮುಂದಿನ ದಿನಗಳಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಡಾ,ವೈ.ಎಸ್.ಹನುಮಂತರಾಯಪ್ಪ ಪ್ರಾಂಶುಪಾಲರು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್ ಪಾವಗಡ ಮತ್ತು  ಸೆಲ್ 9448432918 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.