ತುಮಕೂರು

ಮನುಷ್ಯನ ದುರಾಸೆಯಿಂದ ಪರಿಸರ ನಾಶ: ಷಡಕ್ಷರ

Published On :

ತಿಪಟೂರು: ಮನುಷ್ಯನ ಅತಿ ದುರಾಸೆಯಿಂದ ಪರಿಸರ ವಿನಾಶದಂಚಿಗೆ ಬಂದು ತಲುಪಿದೆ. ಹಾಗಾಗಿ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಯತ್ತ ಗಮನಹರಿಸಬೇಕು ಎಂದು ತಿಪಟೂರಿನ ಪರಿಸರ ಪ್ರೇಮಿ ಷಡಕ್ಷರ ದೇವರು ತಿಳಿಸಿದರು. ಪಟ್ಟಣದ ತಾಲೂಕು ವಿಶ್ರಾಂತ ಸರ್ಕಾರಿ ಉದ್ಯೋಗಿಗಳ ಸಂಘದಿಂದ ಏರ್ಪಡಿಸಿದ್ದ ಮಾಸಿಕ ಸಭೆ ಮತ್ತು ವಿಶ್ವ ಪರಿಸರ ದಿನಾಚರಣೆಯನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ನಿವೃತ್ತ ಉಪನ್ಯಾಸಕ ಟಿ.ಎಲ್.ಹಿರಿಯಣ್ಣ ಮಾತನಾಡಿ, ಭೂ ನಮನದ ಮೂಲಕ ವೃಕ್ಷ ಪೂಜೆ, ಆಕಾಶದಲ್ಲಿರುವ ಸೂರ್ಯ,ಚಂದ್ರರಿಗೆ ತೋರಿಸುವ ಭಕ್ತಿ ಹಾಗೂ ಪರಿಸರ ಸಮತೋಲನಕ್ಕೆ ಆಧ್ಯಾತ್ಮಿಕ ನಂಬಿಕೆಗಳೆ ಕಾರಣವಾಗಿವೆ ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಬಾಲಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಡನಹಳ್ಳಿ ಗಂಗಣ್ಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿ.ಗಂಗಣ್ಣ, ಮಲ್ಲಿಕಾರ್ಜುನಯ್ಯ, ಬಸವರಾಜು ಮತ್ತಿತರರಿದ್ದರು. ಶಾರದಮ್ಮ ಪ್ರಾರ್ಥಿಸಿ, ವೆಂಕಟರಾಮು ನಿರೂಪಿಸಿ, ಬಸವಕಾಜು ವಂದಿಸಿದರು.

ಬಾಲ್ಯ ವಿವಾಹಕ್ಕೆ ಯತ್ನ: ದೂರು
ತುರುವೇಕೆರೆ:  ತಾಲೂಕಿನ ಕೆ.ಕಲ್ಕೆರೆಯ ಚಂದ್ರೇಗೌಡರ ಅಪ್ರಾಪ್ತ ಪುತ್ರಿಯ ವಿವಾಹ ನಿಶ್ಚಯವಾಗಿದ್ದು ಕೂಡಲೇ ಇದನ್ನು ತಡೆಗಟ್ಟುವಂತೆ ಮಹಿಳಾ ಮತ್ತು ಶಿಶು ಅಭಿವೃಧ್ಧಿ ಯೋಜನಾಧಿಕಾರಿಗಳು ಪೋಲಿಸರಿಗೆ ದೂರು ನೀಡಿದ್ದಾರೆ.   ಬಾಲಕಿಯ ವಿವಾಹ ಜೂ. 15 ಮತ್ತು 16 ರಂದು ನಡಯಲಿದೆ. ಈ ಕುರಿತು ದೂರು ಬಂದಿದ್ದು ಪರಿಶೀಲನೆ ಮಾಡಲಾಗಿ ಚೈತ್ರಳಿಗೆ ಇನ್ನೂ 17 ವರ್ಷ ಎಂಬುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ವಿವಾಹ ನಡೆಸದಂತೆ  ಪೋಷಕರಿಗೆ ತಿಳಿವಳಿಕೆ ನೀಡಲಾಗಿತ್ತು. ಆದರೆ ಈಗ ಪುನಃ ನಿಗದಿತ ದಿನಾಂಕದಂದೇ ಮದುವೆ ಮಾಡಲು ತಯಾರು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.