ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ
ಮಧುಗಿರಿ: ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು ಅಪರಾದ. ಒಂದು ವೇಳೆ ದುಡಿಸಿಕೊಂಡರೆ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸುವ ಸಾಧ್ಯತೆಯಿದೆ ಎಂದು ಸಿವಿಲ್ನ್ಯಾಯಧೀಶ ಕಸನಪ್ಪನಾಯಕ ಎಚ್ಚರಿಸಿದರು. ಇಲ್ಲಿನ ಎಂಜಿಎಂ ಬಾಲಿಕಾ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿ, 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ದೂಡದಂತೆ ತಡೆಗಟ್ಟುವ ಕಠಿಣ ಕಾನೂನು ಜಾರಿಯಲ್ಲಿದ್ದು ಮಗುವಿನ ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆಗೆ ಅಧಿಕ ಒತ್ತು ಕೊಡಬೇಕು ಎಂದರು. ವಕೀಲರ ಸಂಘದ ಅಧ್ಯಕ್ಷ ಜಯರಾಮ್ ಮಾತನಾಡಿ, ಕಾನೂನಿನ ಅರಿವಿದ್ದರೆ ಬಾಲಪರಾದ ತಡೆಯಬಹುದು. ಕಾನೂನನ್ನು ಗೌರವಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದರು. ವಕೀಲ ಅಶ್ವತ್ಥನಾರಾಯಣರೆಡ್ಡಿ ಮಾತನಾಡಿದರು. ವಕೀಲ ಎಚ್.ಕೆ.ವಿ. ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನ್ಯಾಯಧೀಶ ಸುರೇಶ್, ಬಿಇಒ ವೈ.ಎನ್. ರಾಮಕೃಷ್ಣಯ್ಯ, ಕಾರ್ಯದರ್ಶಿ ಅಶೋಕ್, ರಾಜೇಶ್, ಚಿತ್ತಯ್ಯ ಇದ್ದರು.
ಪಾವಗಡ ತಾಪಂ: ಅಧ್ಯಕ್ಷರ ಆಯ್ಕೆಗೆ ಜೆಡಿಎಸ್ನಲ್ಲಿ ಪೈಪೋಟಿ
ಪಾವಗಡ: ಇಲ್ಲಿನ ತಾಪಂ ಅಧ್ಯಕ್ಷರ ಆಯ್ಕೆಗೆ ಜೆಡಿಎಸ್ನಲ್ಲಿ ಈಗಾಗಲೇ ಕಸರತ್ತು ಶುರುವಾಗಿದ್ದು, ನರಸಮ್ಮ ಓಬಳಪತಿ ಮತ್ತು ನಾಗವೀಣಾ ಗೋವರ್ಧನ ಅವರ ಮಧ್ಯೆ ತೀವ್ರ ಪೈಪೋಟಿ ಆರಂಭವಾಗಿದೆ. ಹಾಲಿ ಅಧ್ಯಕ್ಷರ ಅವಧಿ ಇದೇ ತಿಂಗಳಾಂತ್ಯಕ್ಕೆ ಕೊನೆಯಾಗಲಿದೆ. ಹಾಗಾಗಿ, ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲು ಅನ್ವಯ ತಾಲೂಕಿನ ಗುಜ್ಜನಡು ತಾಪಂನ ಜೆಡಿಎಸ್ ಬೆಂಬಲಿತ ಸದಸ್ಯೆ ನರಸಮ್ಮ ಓಬಳಪತಿ ಹಾಗೂ ಇದೇ ಪಕ್ಷದ ಅರಸೀಕೆರೆ ತಾಪಂನ ನಾಗವೀಣಾ ಗೋವರ್ದನ ಅವರ ಮಧ್ಯೆ ಪೈಪೋಟಿ ಇದೆ. ಒಟ್ಟು 23 ಚುನಾಯಿತ ಸದಸ್ಯರ ಪೈಕಿ 17 ಜೆಡಿಎಸ್ ಮತ್ತು 6 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಜುಲೈ ತಾಪಂ ನೂತನ ಅಧ್ಯಕ್ಷರ ಆಯ್ಕೆಯ ನಡೆಯುವ ಸಾಧ್ಯತೆ ಇದೆ. ತಾಪಂ ಅಧ್ಯಕ್ಷರ ಸ್ಥಾನ ಕಳೆದ 20 ವರ್ಷಗಳಿಂದ ಕೈತಪ್ಪಿ ಹಿಂದುಳಿದ ಹಾಗೂ ಎಸ್ಸಿ ವರ್ಗಕ್ಕೆ ಅನ್ಯಾಯವಾಗುತ್ತಿದೆ. ಮೀಸಲು ಕಲ್ಪಿಸಿ ಸರ್ಕಾರ ಅವಕಾಶ ನೀಡಿದ ಕಾರಣ ಈ ಬಾರಿ ತಾಪಂ ಅಧ್ಯಕ್ಷರ ಸ್ಥಾನ ಎಸ್ಸಿಗೆ ನೀಡಿ ಸಹಕರಿಸಬೇಕೆಂದು ಗುಜ್ಜನಡು ತಾಪಂ ಸದಸ್ಯೆ ನರಸಮ್ಮ ಓಬಳಪತಿ ಅವರು ಮನವಿ ಮಾಡಿದ್ದಾರೆ. ಇದೇ ವೇಳೆ, ಅನೇಕ ವರ್ಷಗಳಿಂದ ಜೆಡಿಎಸ್ನಲ್ಲಿ ಗುರುತಿಸಿಕೊಂಡಿರುವ ಅರಸೀಕೆರೆ ತಾಪಂ ಸದಸ್ಯೆ ನಾಗವೀಣಾ ಗೋವರ್ದನ ಅವರು ಪಕ್ಷದ ತತ್ವ ಸಿದ್ಥಾಂತಗಳಿಗೆ ಬದ್ಧರಾಗಿ ಕೆಲಸ ಮಾಡಿದ್ದೇವೆ. ಪಕ್ಷದ ಅಭಿವೃದ್ಧಿಗೆ ಈ ಭಾಗದಲ್ಲಿ ತಮ್ಮ ಸಹಕಾರವಿದೆ. ಕಾಂಗ್ರೆಸ್ ಮಯವಾಗಿದ್ದ ಮಂಗಳವಾಡ ತಾಪಂ ಕ್ಷೇತ್ರವಲ್ಲದೇ ಇಡೀ ನಿಡಗಲ್ ಹೋಬಳಿ ವ್ಯಾಪ್ತಿಯನ್ನು ಜೆಡಿಎಸ್ ಭದ್ರಕೋಟೆಯಾಗಿ ರೂಪಿಸಿದ್ದೇವೆ. ಹಾಗಾಗಿ ತಮಗೂ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಖಾಸಗಿ ಕಟ್ಟಡಕ್ಕೆ ಕಚೇರಿ ಸ್ಥಳಾಂತರ: ಪ್ರತಿಭಟನೆ
ಪಾಂಡವಪುರ: ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಹಲವಾರು ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿದ್ದ ಉಪನೋಂದಣಾಧಿಕಾರಿಗಳ ಕಚೇರಿಯನ್ನು ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸುವ ಕಾರ್ಯ ಬುಧವಾರ ನಡೆಯಿತು. ಪಟ್ಟಣದ ಮಿನಿ ವಿಧಾನಸೌಧದ ಎದುರುಗಡೆ ಇರುವ ಸಿ.ಎಂ. ಜನಾರ್ದನ್ ಅವರ ಖಾಸಗಿ ಕಟ್ಟಡಕ್ಕೆ (ಮೊದಲ ಅಂತಸ್ತಿನ ಕಟ್ಟಡ) ಸ್ಥಳಾಂತರ ಮಾಡಬಾರದು ಎಂದು ಆಕ್ಷೇಪಿಸಿ ಸಾರ್ವಜನಿಕರು ಧರಣಿ, ಪ್ರತಿಭಟನೆ ನಡೆಸಿ ಪ್ರತಿರೋಧ ವ್ಯಕ್ತಪಡಿಸಿದ್ದರು. ಹಾಲಿ ಕಾರ್ಯ ನಿರ್ವಹಿಸುತ್ತಿದ್ದ ಸ್ಥಳವೇ ಸಾರ್ವಜನಿಕರಿಗೆ ಸೂಕ್ತವಾಗಿತ್ತು. ಜತೆಗೆ ಅಲ್ಲಿ ವೃದ್ಧರು, ವಿಕಲಚೇತನರು ಸರಾಗವಾಗಿ ತಮ್ಮ ನೋಂದಣಿ ಕಾರ್ಯವನ್ನು ಬಹು ಸುಲಭವಾಗಿ ಮಾಡಿಕೊಳ್ಳಲು ಅನುಕೂಲವಾಗುತ್ತಿತ್ತು ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

