ತುಮಕೂರು

ಲೈಂಗಿಕ ದೌರ್ಜನ್ಯಗಳ ವಿರುದ್ಧ ಪ್ರತಿಭಟನೆ

Published On :

ತುಮಕೂರು: ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಸರ್ಕಾರಗಳು ವಿಫಲವಾಗಿದೆ ಎಂದು ಆರೋಪಿಸಿ ನಗರದ ಸಿವಿಲ್ ಬಸ್‌ಸ್ಟ್ಯಾಂಡ್ ಹತ್ತಿರ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಓ) ಮತ್ತು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಜಿಲ್ಲಾ ಘಟಕಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಎಐಎಂಎಸ್‌ಎಸ್‌ನ ರಾಜ್ಯ ಸಮಿತಿಯ ಸೆಕ್ರೆಟೇರಿಯಟ್ ಸದಸ್ಯೆ ಎಸ್. ಶೋಭಾ ಮಾತನಾಡಿ ಮಹಿಳೆಯರು ಇಂದು ಹಲವಾರು ರೀತಿಯ ಲೈಂಗಿಕ ದೌರ್ಜನ್ಯ, ಅತ್ಯಾಚಾರಗಳಿಗೆ ಒಳಗಾಗುತ್ತಿದ್ದಾರೆ. ಆದರೆ ಜನ ಪ್ರತಿನಿಧಿಗಳು ಮಹಿಳೆಯರ ಅತ್ಯಾಚಾರಗಳ ಘಟನೆಗಳ ಬಗ್ಗೆ ಬಹಳ ಹಗುರವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಜನರ ಮುಂದೆ ಸಮಸ್ಯೆಯನ್ನು ಗೌಣವೆನ್ನುವಂತೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಐಎಂಎಸ್‌ಎಸ್ ಜಿಲ್ಲಾ ಸಂಘಟನಾಕಾರರಾದ ಎಂ. ವಿ. ಕಲ್ಯಾಣಿ ಮತ್ತು ಎಐಡಿಎಸ್‌ಓನ ಜಿಲ್ಲಾ ಅಧ್ಯಕ್ಷ ಮಾದಪ್ಪ, ಜಿಲ್ಲಾ ಸಂಘಟಕಿ ಮಂಜುಳಾ ಇದ್ದರು.

ದೇಶದ ಅಭಿವೃದ್ಧಿಗೆ ಪೂರಕ ಶಿಕ್ಷಣ ಸಿಗಲಿ
ತುಮಕೂರು: ದೇಶದ ಅಭಿವೃದ್ಧಿಗೆ ಪೂರಕ ಶಿಕ್ಷಣ ಸಿಗಲಿ ಎಂದು ತುಮಕೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಬ್ಯಾಟರಂಗೇಗೌಡ ಆಶಿಸಿದರು. ನಗರದಲ್ಲಿ ನಡೆದ 3ಡಿ, 2ಡಿ ಅನಿಮೇಷನ್ ಶಿಕ್ಷಣ ಆರಂಭಿಸುವ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ನಿರುದ್ಯೋಗ ನಿರ್ಮೂಲನೆ ಮತ್ತು ವಿಶ್ವಮಟ್ಟದಲ್ಲಿ ಭಾರತ ಪ್ರಜ್ವಲಿಸುವಂಥ ಶಿಕ್ಷಣ ಸಿಗಬೇಕೆಂದು ತಿಳಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ತೇಜಸ್ವಿ ಎಂ.ಜೆ., ನಿರ್ದೇಶಕ ಹೆಚ್.ಎಸ್. ನರೇಂದ್ರಬಾಬು, ಎಬಿವಿಪಿ ಜಿಲ್ಲಾ ಪ್ರಮುಖ ಹಾಗೂ ಸಂಯೋಜಕ ಆರ್.ಕೆ. ಶ್ರೀನಿವಾಸ್, ತ್ರಿಲೋಕ್, ಇಂದ್ರಕುಮಾರ್, ಚಿದಾನಂದ ಇದ್ದರು.

ಶಿಕ್ಷಕರಿಗೆ ಕಾರ್ಯಾಗಾರ 19ಕ್ಕೆ
ಗುಬ್ಬಿ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಗುಬ್ಬಿ ತಾಲೂಕು ಕನ್ನಡ ಭಾಷಾ ಶಿಕ್ಷಕರ ಸಂಘದವತಿಯಿಂದ ಜೂ.19ರಂದು ಪಟ್ಟಣದ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಿಗೆ ಒಂದು ದಿನದ ಪುನಶ್ಚೇತನ ಕಾರ್ಯಾಗಾರ ಆಯೋಜಿಸಲಾಗಿದೆ. ಶಿಕ್ಷಕರು ಈ ಕಾರ್ಯಾಗಾರದಲ್ಲಿ ಭಾಗವಹಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ.ಬಸವರಾಜು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.