ತುಮಕೂರು

ಸತ್ಸಂಗದಿಂದ ಆತ್ಮಜ್ಞಾನ ಸಾಧ್ಯ: ಗುರುಕುಲ ಶ್ರೀ

Published On :

ತಿಪಟೂರು: ಸತ್ಸಂಗ ಮತ್ತು ಪ್ರಾಣಾನುಸಂಧಾನದಿಂದ ಮಾತ್ರ ಆತ್ಮಜ್ಞಾನ ಲಭ್ಯವಾಗುತ್ತದೆ ಎಂದು ಗುರುಕುಲಾನಂದಾಶ್ರಮದ ಶ್ರೀ ಇಮ್ಮಡಿಕರಿಬಸವದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
 ಪಟ್ಟಣದ ಗುರುಕುಲಾನಂದಾಶ್ರಮದಲ್ಲಿ ಹಮ್ಮಿಕೊಂಡಿದ್ದ ತಮ್ಮಡಿಹಳ್ಳಿ ಲಿಂಗೈಕ್ಯ ಶ್ರೀಮತಿ ಮಲಿಗಮ್ಮ ವೇ.ಶಿವಪ್ಪಶಾಸ್ತ್ರಿಗಳ ಸ್ಮರಣಾರ್ಥ ದತ್ತಿ ಉಪನ್ಯಾಸ ಮಾಲಿಕೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು ಧಾರ್ಮಿಕ ನಂಬಿಕೆಯಿಂದ ಮನುಷ್ಯನ ಆತ್ಮ ಜಾಗೃತಗೊಳ್ಳುವುದಲ್ಲದೆ ಮನುಷ್ಯ ಮನುಷ್ಯನ ನಡುವೆ ಒಡೆದು ಹೋಗಿರುವ ಮನಸ್ಸುಗಳನ್ನು ಒಗ್ಗೂಡಿಸಲು ಸಾಧ್ಯ. ಪ್ರತಿಯೊಬ್ಬರಲ್ಲಿ ಅಂತರಾತ್ಮವಾಗಿ ಅಡಗಿರುವ ಶಕ್ತಿಯನ್ನು ಜಾಗೃತಿಗೊಳಿಸಿ ಸಮಾಜಮುಖಿಯಾಗಿ ಬದುಕು ಕಟ್ಟಿಕೊಳ್ಳಬೇಕೆಂದರು.
  ಎಂ.ಜಿ. ಸಿದ್ದರಾಮಯ್ಯನವರು ಕರ್ನಾಟಕ ಗಾಂಧಿ ಹರ್ಡೇಕರ್ ಮಂಜಪ್ಪನವರ ಬದುಕು ಸಾಧನೆಯ ಬಗ್ಗೆ ಉಪನ್ಯಾಸ ನೀಡಿ, ಮಂಜಪ್ಪನವರು  ಬಡ ಕುಟುಂಬದಲ್ಲಿ ಜನಿಸಿ, ಅತ್ಯಂತ ಕಠಿಣ ಶ್ರಮದಿಂದ ವಿದ್ಯೆ ಕಲಿತು ಕೂಲಿ ಮಠದಲ್ಲಿ ಶಿಕ್ಷಕ ವೃತ್ತಿ ನಡೆಸುತ್ತಿದ್ದ ವೇಳೆಯಲ್ಲಿ ಮಹಾತ್ಮ ಗಾಂಧಿಯವರ ಕರೆಗೆ ಓಗೊಟ್ಟು ರಾಜಿನಾಮೆ ನೀಡಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಸ್ವಾತಂತ್ರ್ಯದ ಬಗ್ಗೆ ಅರಿವು ಮೂಡಿಸಿದರು.  ಮೊಟ್ಟ ಮೊದಲ ಬಾರಿಗೆ ದಾವಣಗೆರೆಯಲ್ಲಿ ಬಸವ ಜಯಂತಿ ಆಚರಣೆಗೆ ಕಾರಣಕರ್ತರಾದರು. 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು, ಅದರಲ್ಲಿ ಸ್ತ್ರೀ ನೀತಿ ಪ್ರಮುಖ ಕೃತಿಯಾಗಿದೆ. ತಮ್ಮ ಇಡೀ ಬದುಕನ್ನು ಗಾಂಧಿ ಮಾರ್ಗದಲ್ಲಿ ಬದುಕಿ ಕರ್ನಾಟಕ ಗಾಂಧಿ ಎಂದೇ ಪ್ರಸಿದ್ಧರಾದವರೇ ಹರ್ಡೇಕರ್ ಮಂಜಪ್ಪನವರು ಎಂದು ಅವರ ಬದುಕಿನ ಹೋರಾಟಗಳನ್ನು ತಿಳಿಸಿದರು.
 ರೇಣುಕಾರಾಧ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು.  ನಗರಸಭಾ ಸದಸ್ಯ ಎಚ್.ಸಿ.ನಾಗರಾಜು, ಲೆಕ್ಕಪರಿಶೋಧಕ ವಿರೂಪಾಕ್ಷಪ್ಪ, ದತ್ತಿ ಸೇವಾಕರ್ತರಾದ ಹುಳಿಯಾರಿನ ನಿವೃತ್ತ ಉಪನ್ಯಾಸಕ ತ.ಶಿ.ಬಸವಮೂರ್ತಿ ಮತ್ತಿತರರಿದ್ದರು. ಕಸಾಪ ನಗರಾಧ್ಯಕ್ಷ ಮಾಕಳ್ಳಿ ಶಿವಕುಮಾರ್ ನಿರೂಪಿಸಿ, ಬೆಳೆಗಾರ ಸಂಘದ ಜಿ.ಎಸ್.ರಘು ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.