ತುಮಕೂರು

ಹೆಣ್ಣು ಕುಟುಂಬದ ಕಣ್ಣು: ನ್ಯಾ.ಎನ್. ವೀಣಾ

Published On :

ಚಿಕ್ಕನಾಯಕನಹಳ್ಳಿ: ಹೆಣ್ಣು ತನ್ನ ಜೀವಿತಾವಧಿಯಲ್ಲಿ ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ ಮೂರು
ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಕುಟುಂಬದ ಕಣ್ಣಾಗಿದ್ದಾಳೆ ಎಂದು ಪ್ರಭಾರ ಹಿರಿಯ ಸಿವಿಲ್ ನ್ಯಾಯಾಧೀಶೆ ನ್ಯಾ.ಎನ್. ವೀಣಾ ನುಡಿದರು.
ಅವರು  ಪಟ್ಟಣದ ಶಿಶು ಅಭಿವೃದ್ಧಿ ಕಚೇರಿಯಲ್ಲಿ  ವಿಶ್ವಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೆಣ್ಣೆಂದು ಕೀಳರಿಮೆ ತೋರುವುದನ್ನು ಬಿಡಿ, ಆಕೆ ಬಗ್ಗೆ ಗೌರವ ಭಾವನೆಯಿರಲಿ. ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ  ಪೂಜನೀಯ ಸ್ಥಾನವಿದ್ದರೂ, ಸಮಾಜದಲ್ಲಿ ಹಾಗೂ ಕುಟುಂಬಗಳಲ್ಲಿ ಪುರುಷ ಪ್ರಧಾನ ವ್ಯವಸ್ಥೆಯಿದೆ.
ವಂಶೋದ್ಧಾರಕ್ಕೆ ಗಂಡು ಸಂತಾನ ಬೇಕು ಎಂಬುವವರಿಗೆ, ವಂಶೋದ್ಧಾರಕನನ್ನು ಹೆರುವವಳು ಹೆಣ್ಣೆಂಬ ಬಗ್ಗೆ ಕಲ್ಪನೆಯಿರಲಿ ಎಂದರು.
ಶಿಶು ಅಭಿವೃದ್ಧಿ ಅಧಿಕಾರಿ ಅನೀಸ್‌ಖೈಸರ್ ಮಾತನಾಡಿ ಮಹಿಳಾ ಪರವಾಗಿರುವ ಕಾನೂನುಗಳು ದುರುಪಯೋಗವಾಗಬಾರದು. ಪ್ರತಿಷ್ಠೆಗಾಗಿ ಬಳಸಿದರೆ ಸಮಾಜದ ಸ್ವಾಸ್ಥ್ಯವನ್ನು ಕದಡುತ್ತದೆ. ಅನ್ಯಾಯಕ್ಕೊಳಗಾದಾಗ ಮಾತ್ರ ಅದನ್ನು ಬಳಸಿದರೆ ಅದು ಸಾರ್ಥಕವಾಗುತ್ತದೆ ಎಂದರು.
ಮಹಿಳಾ ದೌರ್ಜನ್ಯ ತಡೆ ಕಾನೂನಿನ ಬಗ್ಗೆ ವಕೀಲೆ ರತ್ನರಂಜನಿ, ಮಹಿಳಾ ಹಕ್ಕುಗಳ ಬಗ್ಗೆ ವಕೀಲೆ ಅಂಬಿಕಾ ಉಪನ್ಯಾಸ ನೀಡಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಸಿ. ವಿಶ್ವನಾಥ್, ಕಾರ್ಯದರ್ಶಿ ವೈ.ಜಿ.ಲೋಕೇಶ್, ಹಿರಿಯ ವಕೀಲರಾದ ಎಂ. ಮಹಲಿಂಗಪ್ಪ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.