ತುಮಕೂರು

ಯುವ ಸಮೂಹ ನಿರಾಸಕ್ತಿಕಳೆಗುಂದಿದ ಕಾಮನಹಬ್ಬ

Published On :

ಕುಣಿಗಲ್: ಪಟ್ಟಣದಲ್ಲಿ ಬಣ್ಣಗಳ ಹಬ್ಬ ಹೋಳಿ ಹಬ್ಬ ಇತ್ತೀಚೆಗೆ ಯುವ ಸಮುದಾಯದ ನಿರ್ಲಕ್ಷ್ಯದಿಂದಾಗಿ ಕಳೆಗುಂದುವಂತಾಗಿದೆ.
ಪಟ್ಟಣದ ಕೋಟೆ ಪ್ರದೇಶದ ದೊಡ್ಡಗರಡಿ ಸಂಘದವರು ಕೋಟೆಯಲ್ಲಿ, ದೊಡ್ಡಪೇಟೆಯ ಭಗೀರಥ ಉಪ್ಪಾರ ಟ್ರಸ್ಟ್ ಇಂದಿನ ದಿನಗಳಲ್ಲಿ ಕೂರಿಸುತ್ತಿದ್ದರೆ, ಸಂಜೆಯಾಯಿತೆಂದರೆ ರತಿ-ಮನ್ಮಥ ದೇವಾಲಯಗಳು ಜನಾಕರ್ಷಣೆ ತಾಣವಾಗುತ್ತಿದ್ದವು. ಹಬ್ಬಕ್ಕಷ್ಟೆ ಸೀಮಿತಗೊಳ್ಳದೆ, ಸ್ಥಳೀಯ ಗರಡಿಗಳಲ್ಲಿ ವರ್ಷವಿಡಿ ಸಾಧನೆ ಮಾಡಿದ ಯುವಕರು ಪ್ರತಿದಿನ ಸಂಜೆ   ತಾವು ಸಾಧನೆ ಮಾಡಿದ ಜನಪದ ಸಾಹಸ ಕ್ರೀಡೆಗಳಾದ ದೊಣ್ಣೆ ವರಸೆ, ಕುಸ್ತಿಯ ವಿವಿಧ ಪಟ್ಟುಗಳನ್ನು ಪ್ರದರ್ಶಿಸುವ ಹುಲಿವೇಷ ಸ್ಪರ್ಧೆ  ಜೊತೆಯಲ್ಲಿ, ಪಾಳೇಗಾರ ವೇಷಧಾರಿಯು ನಾಲ್ಕಾರು ಮಂದಿಯಿಂದ ಬಂಧಿತನಾಗಿ ಜಿಂಕೆಖಡ್ಗ, ದೊಣ್ಣೆ ವರಸೆ ಸೇರಿದಂತೆ ಆಕರ್ಷಕ ಸಾಹಸ ಕ್ರೀಡೆಗಳ ಪ್ರದರ್ಶನ ಮೂಲಕ ಅವರ ಬಂಧನದಿಂದ ಮುಕ್ತ ಗೊಳ್ಳುವ ಪ್ರದರ್ಶನ ನೀಡುವ ವೇದಿಕೆಯಾಗಿ ಸಾಹಸ, ಜನಪದ ಕ್ರೀಡೆ ಮೆರೆಗು ಸೇರಿ ಕಾಮನಹಬ್ಬ ಆಕರ್ಷಣೀಯವಾಗಿರುತ್ತಿತ್ತು. ಆದರೆ, ಕಾಲ ಕಳೆದಂತೆ ಸರ್ಕಾರವು ಗರಡಿ ಮನೆಗಳ ಅಭಿವೃದ್ಧಿಗೆ ಪೂರಕ ಕ್ರಮ ಕೈಗೊಳ್ಳದ ಕಾರಣ ಸಾಹಸ ಜನಪದ ಕಲೆಗಳು ಮೂಲೆಗುಂಪಾದವು, ಇದರ ಜೊತೆಯಲ್ಲಿ ಯುವಜನತೆ ಆಧುನಿಕ ಕ್ರೀಡೆಯಾದ ಕ್ರಿಕೆಟಟ್ಸೇರಿದಂತೆ ಇತರೆ ಕ್ರೀಡೆಗಳ ಬಗ್ಗೆ ಹೆಚ್ಚಿನ ಒಲವನ್ನು ತೋರಿದ್ದರಿಂದ ನಮ್ಮ ದೇಸೀಯ ಜನಪದ ಕಲೆಗಳು ಸಹ ಜನಮಾನಸದಿಂದ ದೂರವಾದಂತಾಗಿದೆ.

ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ
ಪಾಂಡವಪುರ:
ತಾಲೂಕಿನ ದೇವೇಗೌಡನ ಕೊಪ್ಪಲು ಗ್ರಾಮದಲ್ಲಿ ಶುಕ್ರವಾರ ರಾತ್ರಿ ಚಿರತೆಯೊಂದು ತನ್ನ ಎರಡು ಮರಿಗಳೊಂದಿಗೆ ಪ್ರತ್ಯೇಕ್ಷಗೊಂಡ ಹಿನ್ನಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಗ್ರಾಮದ ಕೃಷ್ಣೇಗೌಡ ಎಂಬುವರ ಮನೆ ಎದುರಿನ ಬತ್ತದ ಗದ್ದೆಯಲ್ಲಿ ರಾತ್ರಿ ಸುಮಾರು 11.30 ರ ಸಮಯದಲ್ಲಿ ಚಿರತೆಯೊಂದು ತನ್ನ ಮರಿಗಳೊಂದಿಗೆ ಕಿರುಚಾಟ ಪ್ರಾರಂಭಿಸಿದೆ. ಗಾಬರಿಗೊಂಡು ಕೃಷ್ಣೇಗೌಡ ಮನೆಯಿಂದ ಹೊರ ಬಂದು ನೋಡಿದಾಗ ಚಿರತೆ ಕಂಡುಬಂದಿದೆ. ಗ್ರಾಮಸ್ಥರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಗಾಬರಿಗೊಂಡ ಚಿರತೆ ಗ್ರಾಮದ ಚಿಕ್ಕಬೆಟ್ಟದ ಕಡೆ ಹೋಗಿದೆ. ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಚಿರತೆ ಸೆರೆ ಹಿಡಿಯಲು ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.