ತುಮಕೂರು

ಜಿಲ್ಲೆಯಲ್ಲಿ ಕುಸಿದ ಫಲಿತಾಂಶ

Published On :

ತುಮಕೂರು: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತುಮಕೂರು ಜಿಲ್ಲೆ ಶೇ.58 ಫಲಿತಾಂಶ ದಾಖಲಿಸಿದೆ. ಕಳೆದ ಬಾರಿ 63.38 ಶೇಕಡದೊಂದಿಗೆ 14ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ 58 ಫಲಿತಾಂಶ ದಾಖಲಿಸುವ ಮೂಲಕ 17ನೇ ಸ್ಥಾನಕ್ಕೆ ಕುಸಿದಿದೆ.
ಜಿಲ್ಲೆಯಲ್ಲಿ ಈ ಬಾರಿ 26 518 ಮಂದಿ ಪರೀಕ್ಷೆ ಬರೆದಿದ್ದರು. ಇವರಲ್ಲಿ 15 ಸಾವಿರದ 380 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 6,520 ಮಂದಿ ಬಾಲಕರು ಹಾಗೂ 8860 ಮಂದಿ ಬಾಲಕಿಯರು ತೇರ್ಗಡೆಯಾಗಿದ್ದಾರೆ. ಈ ಬಾರಿಯೂ  ಬಾಲಕಿಯೇ ಮೇಲುಗೈ ಸಾಧಿಸಿದ್ದಾರೆ.
ಕಲಾ ವಿಭಾಗದಲ್ಲಿ 10,555 ವಿದ್ಯಾರ್ಥಿಗಳಲ್ಲಿ 5,353 ಮಂದಿ ತೇರ್ಗಡೆಯಾಗುವ ಮೂಲಕ ಶೇ.50.72 ಫಲಿತಾಂಶ ದೊರೆತಿದ್ದು, ಕಲಾ ವಿಷಯಗಳ ಪರೀಕ್ಷೆಗೆ ಹಾಜರಾದ 5,070 ಬಾಲಕರ ಪೈಕಿ 2309 ಮಂದಿ ಹಾಗೂ 5,485 ಮಂದಿ ಬಾಲಕಿಯರ ಪೈಕಿ 3,044 ಮಂದಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ  ಪರೀಕ್ಷೆಗೆ ಹಾಜರಾದ  8713 ವಿದ್ಯಾರ್ಥಿಗಳಲ್ಲಿ 6141 ಮಂದಿ ಉತ್ತೀರ್ಣಣರಾಗುವ ಮೂಲಕ ಶೇ.70.48ರಷ್ಟು ಫಲಿತಾಂಶ ದೊರೆತಿದ್ದು,  ವಾಣಿಜ್ಯ ವಿಷಯಗಳ ಪರೀಕ್ಷೆಗೆ ಹಾಜರಾದ 4850 ಬಾಲಕರು ಹಾಗೂ 3750 ಬಾಲಕಿಯರು ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ 7,251 ವಿದ್ಯಾರ್ಥಿಗಳ ಪೈಕಿ 3,886 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.53.59 ರಷ್ಟು ಫಲಿತಾಂಶ ದಾಖಲಿಸಿದ್ದು, ವಿಜ್‌ಞಾನ ವಿಷಯದಲ್ಲಿ ಪರೀಕ್ಷೆಗೆ ಹಾಜರಾದ 3,709 ಬಾಲಕರು ಹಾಗೂ 2,066 ಬಾಲಕಿಯರು ತೇರ್ಗಡೆಹೊಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.