ತುಮಕೂರು

ಮಾನವಕುಲಕ್ಕೆ ಎಲೆಕ್ಟ್ರಾನಿಕ್ಸ್ ವರದಾನ

Published On :

ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿದ ಬೆಂಗಳೂರು ಇಸ್ರೋ ಸೆಟಲೈಟ್ ಸೆಂಟರ್ನ ಪ್ರಾಜೆಕ್ಟ್ ಡೈರೆಕ್ಟರ್ ಜಿ. ಶಿವಣ್ಣ ಅಭಿಮತ
ಕ.ಪ್ರ.ವಾರ್ತೆ ತುಮಕೂರು ಮೇ 10
ಮಾನವ ಕುಲ ಇಂದು ಹೆಚ್ಚು ಆರೋಗ್ಯವಾಗಿ ಜೀವಿಸಲು ಎಲೆಕ್ಟ್ರಾನಿಕ್ಸ್ ಅದರಲ್ಲೂ ವೈದ್ಯಕೀಯ ಕ್ಷೇತ್ರದಲ್ಲಿ ಬಳಸುವ ಎಲೆಕ್ಟ್ರಾನಿಕ್ಸ್ ಮಹತ್ವದ ಪಾತ್ರ ವಹಿಸಿದೆ ಎಂದು ಬೆಂಗಳೂರು ಇಸ್ರೋ ಸೆಟಲೈಟ್ ಸೆಂಟರ್ನ ಪ್ರಾಜೆಕ್ಟ್ ಡೈರೆಕ್ಟರ್ ಜಿ. ಶಿವಣ್ಣ ಅಭಿಪ್ರಾಯಪಟ್ಟರು.
ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನ ಟೆಲಿಕಮ್ಯುನಿಕೇಷನ್ಸ್ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಎಮರ್ಜಿಂಗ್ ಟ್ರೆಂಡ್ಸ್ ಇನ್ ಕಮ್ಯುನಿಕೇಷನ್ ಅಂಡ್ ಬಯೋವುಡಿಕಲ್ ಎಂಜಿನಿಯರಿಂಗ್(ಎನ್ಸಿಇಸಿಬಿ-2014)  ಉದ್ಘಾಟಿಸಿ ಮಾತನಾಡಿದರು.
ಅದಕ್ಕೆ ಪೂರಕವಾಗಿ ಉಪಗ್ರಹ ಸಂವಹನ ಭೂಮಿಯಲ್ಲಿನ ಎಲ್ಲ ಸಂವಹನ ಮಾರ್ಗಗಳೂ ಹಾನಿಗೊಳ್ಳುವ ವಿಪತ್ತಿನ ಸಂದರ್ಭದಲ್ಲಿ ಅತ್ಯಂತ ಸಮರ್ಥ ಸಂವಹನ ನೀಡುವ ಮೂಲಕ ಮಾನವಕುಲಕ್ಕೆ ನೆರವಾಗಿದೆ. ಇದನ್ನು ಸಾಧ್ಯವಾಗಿಸಿದ ಎಲೆಕ್ಟ್ರಾನಿಕ್ಸ್ ತಂತ್ರಜ್ಞಾನಕ್ಕೆ ಮಾನವಕುಲ ಆಭಾರಿಯಾಗಿರುತ್ತದೆ ಎಂದು ತಿಳಿಸಿದರು.
ಎಲೆಕ್ಟ್ರಾನಿಕ್ಸ್ ನಾವು ಜೀವಿಸುವ ವಿದಾನವನ್ನೇ ಬದಲಾಯಿಸಿದೆ. ಎಲೆಕ್ಟ್ರಾನಿಕ್ಸ್ ಬಳಕೆ ಮೊದಲ ಮಹಾಯುದ್ಧದಲ್ಲಿ ಟ್ರಾನ್ಸಿಸ್ಟರ್ ಮೂಲಕ ಪ್ರಾರಂಭವಾಯಿತು. ಅಂದಿನಿಂದ ಇಂದಿನ ಸ್ಮಾರ್ಟ್ ಫೋನ್ವರೆಗೆ ಮಹತ್ತರ ಬದಲಾವಣೆಗಳನ್ನು ಕಂಡಿದೆ ಎಂದರು.
ಐಐಟಿ ಗೌಹಾಟಿಯ ಪ್ರೊಫೆಸರ್ ಡಾ.ಎಸ್.ಆರ್. ಮಹಾದೇವ ಪ್ರಸನ್ನ, ಐಐಟಿ ಗೌಹಾಟಿಯ ಪ್ರೊಫೆಸರ್ ದಂಡಾಪತ್, ಪ್ರಾಂಶುಪಾಲ ಡಾ.ಕೆ.ಎ. ಕೃಷ್ಣಮೂರ್ತಿ, ಪ್ರೂ.ಟಿ.ಆರ್. ಚಂದ್ರಶೇಖರ್, ಟೆಲಿಕಮ್ಯುನಿಕೇಷನ್ಸ್ ವಿಭಾಗ ಮುಖ್ಯಸ್ಥ ಪ್ರೊ.ಎಚ್.ಎಸ್. ಜಯರಾಮು, ಪ್ರೊ.ಎಂ.ಝಡ್. ಕುರಿಯನ್, ಡಾ.ಕೆ.ಬಿ. ಶಿವಕುಮಾರ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.