ತುಮಕೂರು

ಬಿಜೆಪಿ ವಿಜಯೋತ್ಸವ

Published On :

ಕುಣಿಗಲ್: ರಾಷ್ಟ್ರದಾದ್ಯಂತ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆಗೆ ಸಿದ್ಧತೆ ನಡೆಸಿರುವ ಹಿನ್ನೆಲೆಯಲ್ಲಿ ತಾಲೂಕು ಬಿಜೆಪಿವತಿಯಿಂದ ಜಿಲ್ಲಾ ಉಪಾಧ್ಯಕ್ಷ.ಕೆ.ಎಂ. ತಿಮ್ಮಪ್ಪನವರ ನೇತೃತ್ವದಲ್ಲಿ ಗ್ರಾಮದೇವತೆ ಸರ್ಕಲ್‌ನಲ್ಲಿ ವಿಜಯೋತ್ಸವ ಆಚರಿಸಿದರು.
ಗ್ರಾಮದೇವತೆ ಸರ್ಕಲ್‌ನಲ್ಲಿ ಸಂಘಟಿತರಾದ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ವಿತರಿಸಿ, ಬಿಜೆಪಿ ರಾಜ್ಯ, ರಾಷ್ಚ್ರ ನಾಯಕರ ಪರ ಘೋಷಣೆಗಳನ್ನು ಕೂಗಿದರು. ನಂತರ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷ ಎಂ. ತಿಮ್ಮಪ್ಪ, ರಾಷ್ಚ್ರದ ಸೈನಿಕರ ರಕ್ಷಣೆ ವಿಷಯ ಇರಲಿ, ಭ್ರಷ್ಟಾಚಾರ ನಿಯಂತ್ರಣದ ವಿಷಯ ಇರಲಿ ಪರಿಣಾಮಕಾರಿಯಾಗಿ ನಿರ್ವಹಿಸುವುದರಲ್ಲಿ ಕಾಂಗ್ರೆಸ್ ವಿಫಲವಾದ ಕಾರಣ,
ಕಾಂಗ್ರೆಸ್ ಸರ್ಕಾರ ಆಡಳಿತ ವೈಖರಿಯಿಂದ ಬೇಸತ್ತ ಜನತೆ ಬದಲಾವಣೆ ಬಯಸಿ  ನರೇಂದ್ರ ಮೋದಿ
ನೇತೃತ್ವದ ಬಿಜೆಪಿ  ಸಾರಸಗಟಾಗಿ ಬೆಂಬಲಿಸಿದೆ. ಅತ್ಯದ್ಭುತ ಸಾಧನೆ ಮಾಡಿದೆ. ದೇಶದ ಜನತೆಯ ನಂಬಿಕೆಗೆ ಚ್ಯುತಿ ಬಾರದ ರೀತಿಯಲ್ಲಿ, ಭಾವಿ ಪ್ರಧಾನಿ ನರೇಂದ್ರ ಮೋದಿಯವರು ಸದೃಢ, ಸಶಕ್ತ ಭಾರತ ರಾಷ್ಟ್ರ ನಿರ್ಮಾಣ ಮಾಡುವ ವಾಗ್ದಾನದಂತೆ ನಡೆಯುವುದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ಗೌರಮ್ಮ, ಪ್ರಮುಖರಾದ ನಾರಾಯಣಗೌಡ, ಲೋಕೇಶ್, ಗಂಗಾಧರಯ್ಯ, ಅನಂತರಾಮು, ಮಿಲ್ ಸೀನಣ್ಣ, ರಂಗನಾಥ, ರೇಣುಕಪ್ಪ, ನರಸಿಂಹ, ಗೋಪಿ, ಪುರಸಭೆ ಮಾಜಿ ಸದಸ್ಯೆ ಭಾಗ್ಯಮ್ಮ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.