ಅಪಘಾತ: ಒಬ್ಬನ ಸಾವು, ಇಬ್ಬರಿಗೆ ತೀವ್ರ ಗಾಯ
ಕ.ಪ್ರ.ವಾರ್ತೆ ಕುಣಿಗಲ್ ಮೇ 20
ಚಲಿಸುತ್ತಿದ್ದ ಕ್ಯಾಂಟರ್ ಸರಕು ವಾಹನಕ್ಕೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು ಇಬ್ಬರು ಗಾಯಗೊಂಡಿಡ್ಡಿದ್ದಾರೆ. ಪೊಲೀಸರು ಗಾಯಾಳುಗಳನ್ನು ರಕ್ಷಿಸುವ ಜೊತೆಯಲ್ಲಿ ಹತ್ತಕ್ಕೂ ಹೆಚ್ಚು ಅಂಕದ ಕೊಳಿಗಳನ್ನು ಸಹ ರಕ್ಷಿಸಿದ್ದಾರೆ.
ಮೃತನನ್ನು ತಮಿಳುನಾಡು ರಾಜ್ಯದ ಈರೋಡ್ ಜಿಲ್ಲೆಯ ಭವಾನಿ ತಾಲೂಕಿನ ಸಿತ್ತೂರ್ ಗ್ರಾಮದ ರಾಜು (30) ಎಂದು ಗುರುತಿಸಲಾಗಿದ್ದು, ಗಾಯಾಳುಗಳನ್ನು ಪಳನೀಸ್ವಾಮಿ, ಪೆರುಮಾಳ್ ಎಂದು ಗುರುತಿಸಲಾಗಿದೆ ಇವರೆಲ್ಲರೂ ಭವಾನಿ ತಾಲೂಕಿನ ಸುತ್ತಮುತ್ತಲ ಗ್ರಾಮಗಳವರಾಗಿದ್ದು, ಸ್ವಗ್ರಾಮದಿಂದ ಬೆಂಗಳೂರಿನ ಮೂಲಕ ಮಂಗಳೂರು ಕಡೆಗೆ ತೆರಳುತ್ತಿದ್ದು ಮಂಗಳವಾರ ಬೆಳಗಿನ ಜಾವ ಐದುಗಂಟೆ ಸಮಯದಲ್ಲಿ ಕಾರು ಪಟ್ಟಣದ ಹೊರವಲಯದಲ್ಲಿನ ರಾಹೆ 75ರ ಬೈಪಾಸ್ ರಸ್ತೆಯ ಅಲ್ಲಪ್ಪನಗುಡ್ಡೆ ಗ್ರಾಮದ ಬಳಿ, ಬೆಂಗಳೂರಿನಂದ ಹಾಸನಕ್ಕೆ ಸರಕು ತುಂಬಿಕೊಂಡು ಚಾಲನೆಯಲ್ಲಿದ್ದ ಕ್ಯಾಂಟರ್ ವಾಹನಕ್ಕೆ ಹಿಂಬದಿಯಿಂದ ಕಾರು ಗುದ್ದಿದ ಪರಿಣಾಮ, ರಾಜು ಸ್ಥಳದಲ್ಲೆ ಮೃತಪಟ್ಟನು.
ರಾತ್ರಿ ಗಸ್ತಿನಲ್ಲಿದ್ದ ಡಿವೈಎಸ್ಪಿ ಗಣೇಶ್, ಸಿಪಿಐ ಧರ್ಮೇಂದ್ರ, ಪಿಎಸೈ ಗುರುಪ್ರಸಾದ್ ಸಿಬ್ಬಂದಿ ಸ್ಥಳಕ್ಕೆ ತೆರಳಿ, ಗಾಯಾಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳಿಸಿದರು.
ಅಪಘಾತಗೊಂಡ ಕಾರಿನಲ್ಲಿ ಹತ್ತಕ್ಕೂ ಹೆಚ್ಚು ಬಲಿಷ್ಠವಾದ ಕೋಳಿಗಳಿದ್ದು, (ಸಾಮಾನ್ಯವಾಗಿ ಈ ಬಲಿಷ್ಠ ಕೋಳಿಗಳನ್ನು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋಳಿ ಅಂಕಕ್ಕೆ ಬಳಸಲಾಗುತ್ತೆ) ಅವುಗಳು ಪರದಾಡ ತೊಡಗಿದ ಹಿನ್ನೆಲೆಯಲ್ಲಿ ವಿಧಿ ಇಲ್ಲದೆ ಪೊಲೀಸರು, ಕೋಳಿಗಳನ್ನು ರಕ್ಷಿಸಿ, ಠಾಣೆಯ ಒಂದು ಕೊಠಡಿಯಲ್ಲಿ ಕೂಡಿಹಾಕಿ ನಂತರ ಮಧ್ಯಾಹ್ನದ ವೇಳೆಗೆ ವಾರಾಸುದಾರರಿಗೆ ಹಸ್ತಾಂತರಿಸಿದರು. ಕೋಳಿಗಳು ಠಾಣೆಯಲ್ಲಿಟ್ಟಿದ್ದರಿಂದ ಠಾಣೆಗೆ ಬಂದವರಿಗೆಲ್ಲಾ ಕೋಳಿಗಳ ಕೂಗು ಕೇಳಿಸುತ್ತಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

