ತುಮಕೂರು

ವಿವಿಧ ಬೆಳೆಗಳಿಗೆ ವಿಮಾ ಕಂತು ನಿಗದಿ

Published On :

ತುಮಕೂರು: ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳಿಗೆ ಪ್ರತಿ ಹೆಕ್ಟೇರಿಗೆ ನಿಗದಿಪಡಿಸಲಾಗಿರುವ ವಿಮಾ ಮೊತ್ತ ಹಾಗೂ ವಿಮಾಕಂತಿನ ವಿವರ ಈ ಕೆಳಕಂಡಂತಿದೆ.
ಮುಸುಕಿನ ಜೋಳ (ನೀ) ಬೆಳೆಗೆ ಸಾಲ ಪಡೆಯದ ರೈತರಿಗೆ ಪ್ರತಿ ಹೆಕ್ಟೇರಿಗೆ 30273 ವಿಮಾ ಮೊತ್ತ ನಿಗದಿಪಡಿಸಲಾಗಿದ್ದು, ಒಟ್ಟು ವಿಮಾ ಕಂತಿನ ಮೊತ್ತ 1847 ಆಗಿದ್ದು, ಸರ್ಕಾರದ ಸಹಾಯಧನ 923 ಆಗಿದ್ದು, ರೈತರು 924 ವಿಮಾ ಕಂತಿನ ಮೊತ್ತವನ್ನು ಪಾವತಿಸಬೇಕು. ಮುಸುಕಿನ ಜೋಳ (ಮ.ಆ) ಬೆಳೆಗೆ ಪ್ರತಿ ಹೆಕ್ಟೇರಿಗೆ 24117 ವಿಮಾ ಮೊತ್ತ ನಿಗದಿಪಡಿಸಲಾಗಿದ್ದು ರೈತರು 723 ವಿಮಾ ಕಂತಿನ ಮೊತ್ತವನ್ನು ಪಾವತಿಸಬೇಕು.
ಜೋಳ (ಮ.ಆ) ಬೆಳೆಗೆ ಸಾಲ ಪಡೆಯದ ರೈತರಿಗೆ ಹೆಕ್ಟೇರಿಗೆ 11374 ವಿಮಾ ಮೊತ್ತ ನಿಗದಿಪಡಿಸಲಾಗಿದ್ದು, ಒಟ್ಟು ವಿಮಾ ಕಂತಿನ ಮೊತ್ತ 1315 ಆಗಿದ್ದು, ಸರ್ಕಾರದ ಸಹಾಯಧನ 746 ಆಗಿದ್ದು, ರೈತರು 569 ವಿಮಾ ಕಂತಿನ ಮೊತ್ತವನ್ನು ಪಾವತಿಸಬೇಕು.
ರಾಗಿ (ನೀ) ಬೆಳೆಗೆ ಸಾಲ ಪಡೆಯದ ರೈತರಿಗೆ ಪ್ರತಿ ಹೆಕ್ಟೇರಿಗೆ 27074 ವಿಮಾ ಮೊತ್ತ ನಿಗದಿಪಡಿಸಲಾಗಿದ್ದು, ಒಟ್ಟು ವಿಮಾ ಕಂತಿನ ಮೊತ್ತ 1340 ಆಗಿದ್ದು, ಸರ್ಕಾರದ ಸಹಾಯಧನ 536 ಆಗಿದ್ದು, ರೈತರು 804 ವಿಮಾ ಕಂತಿನ ಮೊತ್ತವನ್ನು ಪಾವತಿಸಬೇಕು.
ರಾಗಿ (ಮ.ಆ.) ಬೆಳೆಗೆ ಸಾಲ ಪಡೆಯದ ರೈತರಿಗೆ ಪ್ರತಿ ಹೆಕ್ಟೇರಿಗೆ 13542 ವಿಮಾ ಮೊತ್ತ ನಿಗದಿಪಡಿಸಲಾಗಿದ್ದು, ಒಟ್ಟು ವಿಮಾ ಕಂತಿನ ಮೊತ್ತ 1889 ಆಗಿದ್ದು, ಸರ್ಕಾರದ ಸಹಾಯಧನ 1133 ಆಗಿದ್ದು, ರೈತರು 756 ವಿಮಾ ಕಂತಿನ ಮೊತ್ತವನ್ನು ಪಾವತಿಸಬೇಕು.
ಸಾವೆ (ಮ.ಆ.) ಬೆಳೆಗೆ ಸಾಲ ಪಡೆಯದ ರೈತರಿಗೆ ಪ್ರತಿ ಹೆಕ್ಟೇರಿಗೆ 5777 ವಿಮಾ ಮೊತ್ತ ನಿಗದಿಪಡಿಸಲಾಗಿದ್ದು, ಒಟ್ಟು ವಿಮಾ ಕಂತಿನ ಮೊತ್ತ 1073 ಆಗಿದ್ದು, ಸರ್ಕಾರದ ಸಹಾಯಧನ 726 ಆಗಿದ್ದು, ರೈತರು 347 ವಿಮಾ ಕಂತಿನ ಮೊತ್ತವನ್ನು ಪಾವತಿಸಬೇಕು.
ತೊಗರಿ (ಮ.ಆ.) ಬೆಳೆಗೆ ಸಾಲ ಪಡೆಯದ ರೈತರಿಗೆ ಪ್ರತಿ ಹೆಕ್ಟೇರಿಗೆ 16982 ವಿಮಾ ಮೊತ್ತ ನಿಗದಿಪಡಿಸಲಾಗಿದ್ದು, ಒಟ್ಟು ವಿಮಾ ಕಂತಿನ ಮೊತ್ತ 1963 ಆಗಿದ್ದು, ಸರ್ಕಾರದ ಸಹಾಯಧನ 1114 ಆಗಿದ್ದು, ರೈತರು 849 ವಿಮಾ ಕಂತಿನ ಮೊತ್ತ ಪಾವತಿಸಬೇಕು.
ಹೆಸರು (ಮ.ಆ.) ಬೆಳೆಗೆ ಸಾಲ ಪಡೆಯದ ರೈತರಿಗೆ ಪ್ರತಿ ಹೆಕ್ಟೇರಿಗೆ 9835 ವಿಮಾ ಮೊತ್ತ ನಿಗದಿಪಡಿಸಲಾಗಿದ್ದು, ಒಟ್ಟು ವಿಮಾ ಕಂತಿನ ಮೊತ್ತ 443 ಆಗಿದ್ದು, ಸರ್ಕಾರದ ಸಹಾಯಧನ 177 ಆಗಿದ್ದು, ರೈತರು 266 ವಿಮಾ ಕಂತಿನ ಮೊತ್ತವನ್ನು ಪಾವತಿಸಬೇಕು.
ಎಳ್ಳು (ಮ.ಆ.) ಬೆಳೆಗೆ ಸಾಲ ಪಡೆಯದ ರೈತರಿಗೆ ಪ್ರತಿ ಹೆಕ್ಟೇರಿಗೆ 21017 ವಿಮಾ ಮೊತ್ತ ನಿಗದಿಪಡಿಸಲಾಗಿದ್ದು, ಒಟ್ಟು ವಿಮಾ ಕಂತಿನ ಮೊತ್ತ 1594 ಆಗಿದ್ದು, ಸರ್ಕಾರದ ಸಹಾಯಧನ 797 ಆಗಿದ್ದು, ರೈತರು 797 ವಿಮಾ ಕಂತಿನ ಮೊತ್ತವನ್ನು ಪಾವತಿಸಬೇಕು
ಸೂರ್ಯಕಾಂತಿ (ನೀರಾವರಿ) ಬೆಳೆಗೆ ಸಾಲ ಪಡೆಯದ ರೈತರಿಗೆ ಪ್ರತಿ ಹೆಕ್ಟೇರಿಗೆ 39575 ವಿಮಾ ಮೊತ್ತ ನಿಗದಿಪಡಿಸಲಾಗಿದ್ದು, ಒಟ್ಟು ವಿಮಾ ಕಂತಿನ ಮೊತ್ತ 2394 ಆಗಿದ್ದು, ಸರ್ಕಾರದ ಸಹಾಯಧನ 1199 ಆಗಿದ್ದು, ರೈತರು 1195 ವಿಮಾ ಕಂತಿನ ಮೊತ್ತವನ್ನು ಪಾವತಿಸಬೇಕು.
ಸೂರ್ಯಕಾಂತಿ (ಮ.ಆ.) ಬೆಳೆಗೆ ಸಾಲ ಪಡೆಯದ ರೈತರಿಗೆ ಪ್ರತಿ ಹೆಕ್ಟೇರಿಗೆ 19909 ವಿಮಾ ಮೊತ್ತ ನಿಗದಿಪಡಿಸಲಾಗಿದ್ದು, ಒಟ್ಟು ವಿಮಾ ಕಂತಿನ ಮೊತ್ತ 1185 ಆಗಿದ್ದು, ಸರ್ಕಾರದ ಸಹಾಯಧನ 587 ಆಗಿದ್ದು, ರೈತರು 598 ವಿಮಾ ಕಂತಿನ ಮೊತ್ತ ಪಾವತಿಸಬೇಕು.
ನೆಲಗಡಲೆ (ಮ.ಆ.) ಬೆಳೆಗೆ ಸಾಲ ಪಡೆಯದ ರೈತರಿಗೆ ಪ್ರತಿ ಹೆಕ್ಟೇರಿಗೆ 10506 ವಿಮಾ ಮೊತ್ತ ನಿಗದಿಪಡಿಸಲಾಗಿದ್ದು, ಒಟ್ಟು ವಿಮಾ ಕಂತಿನ ಮೊತ್ತ 2055 ಆಗಿದ್ದು, ಸರ್ಕಾರದ ಸಹಾಯಧನ 1425 ಆಗಿದ್ದು, ರೈತರು 630 ವಿಮಾ ಕಂತಿನ ಮೊತ್ತವನ್ನು ಪಾವತಿಸಬೇಕು.
ಬತ್ತ (ನೀರಾವರಿ) ಬೆಳೆಗೆ ಸಾಲ ಪಡೆಯದ ರೈತರಿಗೆ ಪ್ರತಿ ಹೆಕ್ಟೇರಿಗೆ 32363 ವಿಮಾ ಮೊತ್ತ ನಿಗಧಿಪಡಿಸಲಾಗಿದ್ದು, ಒಟ್ಟು ವಿಮಾ ಕಂತಿನ ಮೊತ್ತ 1215 ಆಗಿದ್ದು, ಸರ್ಕಾರದ ಸಹಾಯಧನ 486 ಆಗಿದ್ದು, ರೈತರು 726 ಮೊತ್ತ  ಪಾವತಿಸಬೇಕು.
ಹರಳು (ಮ.ಆ.) ಬೆಳೆಗೆ ಸಾಲ ಪಡೆಯದ ರೈತರಿಗೆ ಹೆಕ್ಟೇರಿಗೆ 14235 ವಿಮಾ ಮೊತ್ತ ನಿಗದಿಪಡಿಸಲಾಗಿದ್ದು, ಒಟ್ಟು ವಿಮಾ ಕಂತಿನ ಮೊತ್ತ 2028 ಆಗಿದ್ದು, ಸಹಾಯಧನ 1217 ಆಗಿದ್ದು, ರೈತರು 811 ವಿಮಾ ಕಂತಿನ ಮೊತ್ತಪಾವತಿಸಬೇಕು.
ನವಣೆ (ಮ.ಆ.) ಬೆಳೆಗೆ ಸಾಲ ಪಡೆಯದ ರೈತರಿಗೆ ಪ್ರತಿ ಹೆಕ್ಟೇರಿಗೆ 2656 ವಿಮಾ ಮೊತ್ತ ನಿಗದಿಪಡಿಸಲಾಗಿದ್ದು, ಒಟ್ಟು ವಿಮಾ ಕಂತಿನ ಮೊತ್ತ 387ಆಗಿದ್ದು, ಸರ್ಕಾರದ ಸಹಾಯಧನ 232 ಆಗಿದ್ದು, ರೈತರು 155 ವಿಮಾ ಕಂತಿನ ಮೊತ್ತವನ್ನು ಪಾವತಿಸಬೇಕು.
ಹುರುಳಿ (ಮ.ಆ.) ಬೆಳೆಗೆ ಸಾಲ ಪಡೆಯದ ರೈತರಿಗೆ ಪ್ರತಿ ಹೆಕ್ಟೇರಿಗೆ 9658 ವಿಮಾ ಮೊತ್ತ ನಿಗದಿಪಡಿಸಲಾಗಿದ್ದು, ಒಟ್ಟು ವಿಮಾ ಕಂತಿನ ಮೊತ್ತ 1174 ಆಗಿದ್ದು, ಸರ್ಕಾರದ ಸಹಾಯಧನ 692 ಆಗಿದ್ದು, ರೈತರು 482 ವಿಮಾ ಕಂತಿನ ಮೊತ್ತ ಪಾವತಿಸಬೇಕು.
ಉದ್ದು (ಮ.ಆ.) ಬೆಳೆಗೆ ಸಾಲ ಪಡೆಯದ ರೈತರಿಗೆ ಪ್ರತಿ ಹೆಕ್ಟೇರಿಗೆ 9508 ವಿಮಾ ಮೊತ್ತ ನಿಗದಿಪಡಿಸಲಾಗಿದ್ದು, ಒಟ್ಟು ವಿಮಾ ಕಂತಿನ ಮೊತ್ತ 1231 ಆಗಿದ್ದು, ಸರ್ಕಾರದ ಸಹಾಯಧನ 739 ಆಗಿದ್ದು, ರೈತರು 492 ವಿಮಾ ಕಂತಿನ ಮೊತ್ತವನ್ನು ಪಾವತಿಸಬೇಕು.
ಮಾಹಿತಿಗಾಗಿ ಕೃಷಿ ಇಲಾಖೆ, ಸ್ಥಳೀಯ ವಾಣಿಜ್ಯ ಬ್ಯಾಂಕ್, ಗ್ರಾಮೀಣ ಬ್ಯಾಂಕ್, ಸಹಕಾರ ಬ್ಯಾಂಕ್, ಕಂದಾಯ ಇಲಾಖೆ ಮತ್ತು ಸಹಕಾರ ಇಲಾಖೆ ಕಚೇರಿಯನ್ನು ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.