ತುಮಕೂರು

ಪ್ರತಿಭೆ ವಿಕಾಸಗೊಳ್ಳಲು ಗುರು, ಗುರಿ ಮುಖ್ಯ

Published On :

ತುಮಕೂರು: ಮಕ್ಕಳಲ್ಲಿರುವ ಪ್ರತಿಭೆ ಹೊರಹೊಮ್ಮಲು ತಂದೆ ತಾಯಿ ಪೋಷಕರು ಕಾರಣವಾದರೂ ಆ ಪ್ರತಿಭೆ ವಿಕಸನಗೊಳ್ಳಲು ಗುರು ಹಾಗೂ ಗುರಿ ಬಹಳ ಮುಖ್ಯ ಎಂದು ವಿದ್ಯಾವಾಚಸ್ಪತಿ ಕವಿತಾಕೃಷ್ಣ ತಿಳಿಸಿದರು.
ಅವರು ಕ್ಯಾತ್ಸಂದ್ರದ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ಮಹಿಳಾ ಮಕ್ಕಳ ಸಾಹಿತ್ಯ ಕೂಟ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳು ಅರ್ಜುನನಂತೆ ಗುರಿಯುಳ್ಳವರಾಗಬೇಕು. ಅಬ್ದುಲ್ ಕಲಾಂರಂತೆ ವೈಜ್ಞಾನಿಕ ಚಿಂತನೆಯುಳ್ಳವರಾಗಬೇಕು ಎಂದರು.
ಇಂದಿನ ಮಕ್ಕಳ ಬೌದ್ಧಿಕ, ಭಾವನಾತ್ಮಕ, ಸೃಜನಶೀಲ ವಿಕಾಸಕ್ಕೆ ಅಡ್ಡಿಯಾಗಿ ನಿಂತಿರುವ ತಮ್ಮ ಪ್ರಾಬಲ್ಯದಿಂದ ಜಗತ್ತನ್ನೇ ಆವರಿಸಿರುವ ಮೊಬೈಲ್, ಅಂತರ್ಜಾಲ, ಫೇಸ್ ಬುಕ್, ಸಾಮಾಜಿಕ ಜಾಲ ಇವೆಲ್ಲವುಗಳು ವಿದ್ಯಾರ್ಥಿಗಳಿಗೆ ಸದ್ಬಳಕೆಗಿಂತ ದುರ್ಬಳಕೆಯೇ ಅತಿಯಾಗಿ ಮಕ್ಕಳ ಮಾನಸಿಕ, ಭಾವನಾತ್ಮಕ ವಲಯಗಳು ಕಲುಷಿತಗೊಂಡು ವಿಷಮಯವಾಗುತ್ತಿದೆ ಎಂದರು.
ದುರ್ಬಳಕೆ ನಿಲ್ಲಲಿ: ವಿದ್ಯಾರ್ಥಿಗಳು ತಮ್ಮ ಗುರಿ ಮುಟ್ಟಬೇಕೆಂದರೆ ಇವುಗಳ ದುರ್ಬಳಕೆ ನಿಲ್ಲಿಸಬೇಕು. ರಸ್ತೆಗಳಲ್ಲಿ ಹೋಗುವಾಗ ಮೊಬೈಲ್‌ಗಳನ್ನು ಬಳಸಲೇಕೂಡದು. ಅವುಗಳ ಬಳಕೆಯಿಂದ ಹೆಚ್ಚಿನ ಅನಾಹುತಗಳಿಗೆ ಕಾರಣವಾಗಿ ಬದುಕನ್ನೇ ಕೊನೆಗೊಳಿಸಬೇಕಾದ ಪ್ರಮೇಯ ಬಂದದೊಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಮಲಾ ಬಡ್ಡಿಹಳ್ಳಿ ಪ್ರತಿಭೆ ಜೊತೆಗೆ ಮಾನವೀಯತೆಯನ್ನು ಇಂದಿನ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಏನಾದರೂ ಆಗುವ ಮೊದಲು ಮಾನವನಾಗು ಎಂಬ ಕವಿವಾಣಿ ಈ ಅಮೂಲ್ಯ ನುಡಿಮುತ್ತಗಳನ್ನು ಸದಾ ನೆನಪಿನಲ್ಲಿರಿಸಿಕೊಳ್ಳಬೇಕು.
ತಂದೆ, ತಾಯಿ ಗುರು ಹಿರಿಯನ್ನು ಗೌರವದಿಂದ ಕಾಣಬೇಕು. ಪ್ರೀತಿ ಕರುಣೆ, ಅಂತಃಕರಣ, ಮಾನವತೆ ಮುಂತಾದವುಗಳು ತುಂಬಿಕೊಂಡಂತಹ  ಗಣಿಗಳಾಗಬೇಕು ಎಂದರು.
ಸದಾ ಎಚ್ಚರ ಅಗತ್ಯ: ಅಂತರಂಗ ಪರಿಶುದ್ಧತೆಯಿಂದ ಸಂಪನ್ನರಾಗಬೇಕು. ಹೆಣ್ಣು ಮಕ್ಕಳು ಬಾಹ್ಯ ಆಕರ್ಷಣೆಗೆ ಒಳಗಾಗಕೂಡದು. ತಮ್ಮ ಬದುಕಿನಲ್ಲಿ ಸದಾ ಎಚ್ಚರ ಅಗತ್ಯ ಎಂದು ನುಡಿದರು.
ಆಶಯ ನುಡಿಗಳನ್ನಾಡಿದ ಲೇಖಕಿ ಪದ್ಮಾಕೃಷ್ಣಮೂರ್ತಿ ಇಂದು ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ವಿಪುಲವಾದ ಅವಕಾಶಗಳಿವೆ. ಅವುಗಳನ್ನು ಬಳಸಿಕೊಂಡು ಮಕ್ಕಳು ಎತ್ತರಕ್ಕೇರಬೇಕು. ವಿಶೇಷವಾಗಿ ಹೆಣ್ಣು ಮಕ್ಕಳು ಹೆಚ್ಚು ದಕ್ಷತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ನಟರಾಜ್, ಎಲೆನ್‌ಸಿಂಗ್, ಪಾರ್ವತಿರಾಜ್, ಶಂಕರ್, ಸೀಗೆಹಳ್ಳಿ ನಾರಾಯಣ, ಶ್ರೀಧರ್, ಬಸವರಾಜು, ಸವಣೂರು, ಎಂ.ಹೆಚ್. ರವಿಕುಮಾರ್ ಹಾಗೂ ನಾಗರತ್ನಕೃಷ್ಣ ಮಾತನಾಡಿದರು. ಕಾಮಾಕ್ಷಮ್ಮ ಪ್ರಾರ್ಥಿಸಿದರು. ನರಸಿಂಹಯ್ಯ ಸಿದ್ದಾಪುರ ಸ್ವಾಗತಿಸಿದರು. ತನು ಅರವಿಂದ್ ವಂದಿಸಿದರು. ಉಷಾ ಎಂಸಿ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.