ತುಮಕೂರು

ಎಸ್‌ಸಿ ನಿಗಮದ ಅಭಿವೃದ್ಧಿ ಅಧಿಕಾರಿ ತರಾಟೆಗೆ

Published On :

ಪಾವಗಡ:  ಫಲಾನುಭವಿಗಳಿಂದ ಹಣ ಸುಲಿಗೆ ಮಾಡುವಲ್ಲಿ ನಿರತರಾಗಿದ್ದಾರೆಂಬ ಆರೋಪಕ್ಕೆ ಒಳಗಾಗಿರುವ ಎಸ್‌ಸಿ ನಿಗಮದ ಅಭಿವೃದ್ಧಿ ಅಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಛೀಮಾರಿ ಹಾಕಿದ ಪ್ರಸಂಗ ದಲಿತರ ಕುಂದುಕೊರತೆಗಳ ಸಭೆಯಲ್ಲಿ ನಡೆಯಿತು.
ತಹಸೀಲ್ದಾರ್ ಮಹಮ್ಮದ್ ಪಾಷ ಅವರ ಅಧ್ಯಕ್ಷತೆಯಲ್ಲಿ ಪಟ್ಟಣದ ತಾ. ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ದಲಿತರ ಕುಂದುಕೊರತೆಗಳ ಸಭೆಯಲ್ಲಿ ಪಾವಗಡ ತಾಲೂಕಿಗೆ ನಿಯೋಜಿತರಾದ ಜಿಲ್ಲಾ ಎಸ್‌ಸಿ ನಿಗಮದ ಅಭಿವೃದ್ಧಿ ಅಧಿಕಾರಿ  ಸಾಲ ಮಂಜೂರಾತಿ ಮತ್ತು ಸಹಾಯಧ ಕಲ್ಪಿಸಲು ಗ್ರಾಮೀಣ ಬಡ ಫಲಾನುಭವಿಗಳಿಂದ ಸಾವಿರಾರು ರು.ಗಳ ಲಂಚ ಪಡೆಯುವಲ್ಲಿ ನಿರತರಾಗಿದ್ದಾರೆಂದು ಹಲವರು ಆರೋಪಿಸಿದರು.
ದಲಿತ ವಿಮೋಚನ ಸೇನೆ ಅಧ್ಯಕ್ಷ ವಿರಪಸಮುದ್ರ ರಾಮಾಂಜಿನಪ್ಪ ಮಾತನಾಡಿ 2013-14ನೇ ಸಾಲಿಗೆ ಶಾಸಕ ಕೆ.ಎಂ. ತಿಮ್ಮರಾಯಪ್ಪ ಅವರ ಅಧ್ಯಕ್ಷತೆಯಲ್ಲಿ ನಿಗಮದಿಂದ ಆಯ್ಕೆಯಾದ ಎಸ್‌ಸಿ ಫಲಾನುಭವಿಗಳ ಸಹಾಯ ಧನ ಮಂಜೂರಾತಿಗೆ ಅಭಿವೃದ್ಧಿ ಅಧಿಕಾರಿ ತಿಮ್ಮರಾಯಪ್ಪ ಅವರಿಗೆ ಒಂದು ಸಾವಿರ ರು.ಗಳ ಮಂಜೂರಾತಿಗೆ ಇಂತಿಷ್ಟು ಎಂದು ಕಮಿಷನ್ ಹಣ ನೀಡಬೇಕು. ಕಮಿಷನ್ ಹಣ ನೀಡದಿದ್ದರೆ, ಫಲಾನುಭವಿಗಳಿಗೆ ಸತಾಯಿಸುತ್ತಾರೆಂದು ದೂರಿದರು. ನಿಗಮದಿಂದ ಆಯ್ಕೆಯಾದ ಮಹಿಳಾ ಸಂಘಗಳಿಗೆ ಸಹಾಯ ಧನ ಕಲ್ಪಿಸಲು ಈಗಾಗಲೇ ಪ್ರತಿ ಸಂಘದಿಂದ ಲಂಚದ ಹಣ ವಸೂಲಾತಿ ಮಾಡಿ ಇದುವರೆವಿಗೂ ಸಹಾಯಧನ ಕಲ್ಪಿಸದ ಕಾರಣ ಸಹಾಯ ಧನಕ್ಕಾಗಿ ಸಂಘದ ಮಹಿಳೆಯರು ನಿತ್ಯ ತಾಪಂ ಬಳಿ ಆಗಮಿಸಿ ಅಭಿವೃದ್ಧಿ ಅಧಿಕಾರಿಗಾಗಿ ಕಾದು ಶಾಪ ಹಾಕಿ ಮನೆಗೆ ಹೋಗುತ್ತಿದ್ದಾರೆಂದು ಕಿಡಿಕಾರಿದರು. ದಲಿತ ವಿದ್ಯಾರ್ಥಿ ಒಕ್ಕೂಟದ ರಮೇಶ್ ಮಾತನಾಡಿ ತುಮಕೂರಿನಲ್ಲಿ ವಾಸವಿದ್ದ ಅಭಿವೃದ್ಧಿ ಅಧಿಕಾರಿ  ಫಲಾನುಭವಿಗಳಿಗೆ ದಿಕ್ಕು ತಪ್ಪಿಸುವಲ್ಲಿ ನಿರತರಾಗಿದ್ದು ಸಾಲ ಸೌಲಭ್ಯಕ್ಕೆ ಬಂದ ಬಡವರಿಂದ ಡಿಎಂ ಹೆಸರು ಹೇಳಿಕೊಂಡು ಹಣ ಸುಲಿಗೆ ಮಾಡುವಲ್ಲಿ ನಿರತರಾಗಿದ್ದಾರೆ. ಗಂಗಾ ಕಲ್ಯಾಣ ಫಲಾನುಭವಿಗಳಿಂದ 5ರಿಂದ 10ಸಾವಿರದ ರುಗಳ ವಸೂಲಾತಿ ಮಾಡಿದ್ದಾರೆಂದು ಸಭೆಯಲ್ಲಿ ಆರೋಪಿಸಿ ತನಿಖೆ ಮಾಡಿ ಇಂತಹ ಭ್ರಷ್ಟ ಅಧಿಕಾರಿಗಳನ್ನು ಮೊದಲು ತೊಲಗಿಸಿ ಎಂದು ಒತ್ತಾಯಿಸಿದರು. ವಿದ್ಯಾರ್ಥಿಗಳ ವೇತನ ಕಲ್ಪಿಸುವಲ್ಲಿ ಸಮಾಜ ಕಲ್ಯಾಣಾಧಿಕಾರಿ ವೈ.ಆರ್. ಚೌದರಿ ವಂಚಿಸುತ್ತಿದ್ದು ಕಾಲೊನಿಗಳಲ್ಲಿ ಕಳಪೆ ಕಾಮಗಾರಿಗಳು ಮತ್ತು ಯೋಜನೆಯ ಅನುದಾನ ದುರುಪಯೋಗಪಡಿಸಕೊಂಡಿದ್ದಾರೆಂದು ತಾ.ದಂಡೋರ ಅಧ್ಯಕ್ಷ ವಳ್ಳೂರು ನಾಗೇಶ್ ಆರೋಪಿಸಿದರು. ಪುರಸಭೆ, ಕೃಷಿ, ತೋಟಗಾರಿಕೆ, ಜಲಾನಯನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳಲ್ಲಿ ಎಸ್‌ಸಿಗಳ ಹೆಸರಿನಲ್ಲಿ ಅನೇಕ ಯೋಜನೆಗಳು ದುರುಪಯೋಗವಾಗಿವೆ ಎಂದು ಆರೋಪಿಸಿದರು. ತಾ.ಮಟ್ಟದ ವಿವಿಧ ಇಲಾಖೆಯ ಅಧಿಕಾರಗಳ ವರ್ಗ ಹಾಗೂ ಜಿಲ್ಲಾ ಸಂಚಾಲಕ ಸಿ.ಕೆ. ತಿಪ್ಪಸ್ವಾಮಿ, ತಮಟೆ ಸಂಘದ ಸುಬ್ಬರಾಯಪ್ಪ, ತಾ.ಡಿಜೆಎಸ್ ಅಧ್ಯಕ್ಷ ನಾರಾಯಣಪ್ಪ, ಡಿಎಸ್‌ಎಸ್ ಸಂಚಾಲಕ ಪೆದ್ದಣ್ಣ ಕನ್ನಮೇಡಿ ಕೃಷ್ಣಮೂರ್ತಿ, ನರಸಿಂಹಪ್ಪಸೇರಿದಂತೆ ಅನೇಕ ಮಂದಿ ದಲಿತ ಪದಾಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.