ರಕ್ತ ವರ್ಗೀಕರಣ ಶಿಬಿರ
ಉಡುಪಿ: ಬೆಳ್ಮಣ್ ಜೇಸಿಐ ಹಾಗೂ ಸಮುದಾಯ ಆರೋಗ್ಯ ಕೇಂದ ಸಹಯೋಗದೊಂದಿಗೆ ರಕ್ತ ವರ್ಗೀಕರಣ ಶಿಬಿರವು ಶಿರ್ವ ಸಂತಮೇರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆಯಿತು. ಸಮುದಾಯ ಆರೋಗ್ಯ ಕೇಂದ್ರ ಶಿರ್ವ ಆಡಳಿತ ವೈದ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ ರಕ್ತ ವರ್ಗೀಕರಣದ ಮಾಹಿತಿ ನೀಡಿದರು.ಜೇಸಿ ವಲಯ 15ರ ವಲಯಾಧಿಕಾರಿ ಸಂದೀಪ್ ಕುಮಾರ್, ಸಂತಮೇರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ದೇವೇಂದ್ರ ನಾಯಕ್ ಇದ್ದರು. ಜೇಸಿಐ ಬೆಳ್ಮಣ್ನ ಅಧ್ಯಕ್ಷ ರಘುನಾಥ್ ನಾಯಕ್ ಪುನಾರು ಅಧ್ಯಕ್ಷತೆ ವಹಿಸಿದ್ದರು. ಸರ್ವಜ್ಞ ತಂತ್ರಿ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ, ಜೇಸಿ ಕಾರ್ಯದರ್ಶಿ ಸಂಜೀವ ವಂದಿಸಿದರು. 330 ವಿದ್ಯಾರ್ಥಿಗಳು ಭಾಗವಹಿಸಿದ್ದು, ತಮ್ಮ ರಕ್ತ ವರ್ಗೀಕರಣ ಮಾಡಿಸಿಕೊಂಡರು.
ರಸ್ತೆ ಕಾಂಕ್ರಿಟೀಕರಣಕ್ಕೆ ಚಾಲನೆ
ಉಡುಪಿ: ಅಲೆವೂರು ದುರ್ಗಾಪರಮೇಶ್ವರಿ ದೇವಸ್ಥಾನ ರಸ್ತೆಯ ಕಾಂಕ್ರಿಟ್ಕರಣಕ್ಕೆ ಅಲೆವೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ. ಲಕ್ಷೀ ಭಟ್ ಶನಿವಾರ ಚಾಲನೆ ನೀಡಿದರು. ಗ್ರಾ.ಪಂ. ಅಶೋಕ ಕುಮಾರ್ ಭಂಡಾರಿ, ಹರೀಶ ಕಿಣಿ ಮತ್ತು ಹರೀಶ ಸೇರಿಗಾರ್, ಡಾ. ಕೃಷ್ಣರಾಜ್ ಭಟ್, ಲಕ್ಷ್ಮೀರಮಣ ಉಪಾಧ್ಯಯ, ಪ್ರಶಾಂತ್ ಆಚಾರ್ಯ, ಶೇಖರ ಆಚಾರ್ಯ, ರಘುಪತಿ ಭಟ್, ಗೋಪಾಲ್ ಸೇರಿಗಾರ, ಸುರೇಶ ಆಚಾರಿ, ಅಲೆವೂರು ಶ್ರೀಧರ ಶೆಟ್ಟಿ, ರಂಜಿತ್ ಶೆಟ್ಟಿ ಇದ್ದರು.
ಕನ್ನಡ ಎಂಎಯಲ್ಲಿ ರ್ಯಾಂಕ್
ಉಡುಪಿ: ಕುವೆಂಪು ವಿವಿ ನಡೆಸಿದ ಕನ್ನಡ ಎಂಎ ಪರೀಕ್ಷೆ (ದೂರಶಿಕ್ಷಣ)ಯಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಮಲಶಿಲೆಯ ಎ. ಸೂರ್ಯನಾರಾಯಣ ಭಟ್ಟ- ಸುಶೀಲಾ ದಂಪತಿ ಪುತ್ರಿ ಭಾರತಿ ಎ. 8ನೇ ರ್ಯಾಂಕ್ ಗಳಿಸಿದ್ದಾರೆ. ಅವರು ಪ್ರಸ್ತುತ ಚಿಕ್ಕಮಗಳೂರಿನ ಕೊಪ್ಪದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ.
ಅಸ್ತ್ರ ಸಂಸ್ಥೆಯಿಂದ ಸುಳ್ಳು ಆರೋಪ: ಪುಲಸ್ಯಾ ರೈ
ಉಪ್ಪಿನಂಗಡಿ: ಕೊಂಬಾರು ಗ್ರಾಮದಲ್ಲಿ ಅಸ್ತ್ರ ಸಂಸ್ಥೆಯವರು ಸರ್ಕಾರ ಆದೇಶಿಸಿದ ಕಾರ್ಯ ಮಾಡದೆ ರಾಜಕೀಯ ವ್ಯಕ್ತಿಗಳೊಂದಿಗೆ ಸೇರಿಕೊಂಡು ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದು, ಈ ಕೃತ್ಯದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಪುಲಸ್ಯಾ ರೈ ಹೇಳಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಅಸ್ತ್ರ ಸಂಸ್ಥೆಯವರು ಕೊಂಬಾರಿನಲ್ಲಿ ಪಂಚವಾರ್ಷಿಕ ಮುನ್ನೋಟ ಸಮೀಕ್ಷೆಗೆ ಅಡ್ಡಿಪಡಿಸಿದ್ದಾರೆ, ತನ್ನನ್ನು ನಕ್ಸಲರೆಂದು ನಿಂದಿಸಿದ್ದಾರೆ ಎಂದು ಆರೋಪಿಸಿ ತಾನು ಸೇರಿದಂತೆ 9 ಜನರ ವಿರುದ್ಧ ನ್ಯಾಯಲಯದಲ್ಲಿ ಖಾಸಗಿ ದೂರು ನೀಡಿರುವುದಾಗಿ ಸಂಸ್ಥೆಯವರು ಹೇಳಿಕೆ ನೀಡಿದ್ದಾರೆ. ಅವರ ಆಪಾದನೆಯನ್ನು ನ್ಯಾಯಾಲಯದಲ್ಲೇ ಕಾನೂನು ಬದ್ಧವಾಗಿ ಎದುರಿಸಲಾಗುವುದು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

