ಕರು ಹಾಕದಿದ್ರೂ 5 ಲೀ. ಹಾಲು ಕೊಡುವ ಹಸು!
ಸುಳ್ಯ: ಇಲ್ಲೊಂದು ಹಸು ಕರು ಹಾಕದಿದ್ದರೂ ಹಾಲು ಕೊಡುತ್ತಿದೆ!. ಎಡಮಂಗಲ ಸಮೀ ಪದ ಪೊಯ್ಯೆತ್ತೂರು ಗಣಪತಿ ಭಟ್ ಶಿವಕುಮಾರಿ ದಂಪತಿ ಸಾಕುತ್ತಿರುವ ಎರಡು ವರ್ಷ ಹತ್ತು ತಿಂಗಳ ಹಸು ಇದುವರೆಗೆ ಕರುವನ್ನೇ ಹಾಕಿಲ್ಲ. ಆದರೆ, ಕಳೆದ ಆರು ತಿಂಗಳಿಂದ ನಿರಂತರವಾಗಿ ದಿನವೊಂದಕ್ಕೆ ಐದು ಲೀಟರ್ನಂತೆ ಹಾಲು ನೀಡುತ್ತಿದೆ. ಈ ಸಂಗತಿಯ ಕುರಿತು ಪ್ರತಿಕ್ರಿಯಿಸಿರುವ ಪಶು ವೈದ್ಯಕೀಯ ನಿರೀಕ್ಷಕ ಡಾ. ದೇವಿಪ್ರಸಾದ್ ಕಾನತ್ತೂರು, ಇದು ಅಪರೂಪದ ಸಂಗತಿ. ಕೆಲವು ಸಂದರ್ಭಗಳಲ್ಲಿ ದನ ಕರು ಹಾಕದಿದ್ದರೆ ಹಾರ್ಮೋನ್ ಔಷಧ ನೀಡಲಾಗುತ್ತದೆ. ಈ ದನಕ್ಕೂ ನೀಡಲಾಗಿತ್ತು. ಆದ್ದರಿಂದ ಹೀಗಾಗಿರಬಹುದು ಎಂದು ತಿಳಿಸಿದ್ದಾರೆ.
ನಾಗರಹೊಳೆಯಲ್ಲಿ ಆನೆಗಳಿಗೆ ಸಂರಕ್ಷಿತ ಆವಾಸ: ರೈ
ಮಂಗಳೂರು: ಆನೆಗಳಿಂದ ಜನರಿಗೆ ತೊಂದರೆ ತಪ್ಪಿಸಲು ಮತ್ತು ಆನೆಗಳ ಸಂರಕ್ಷಣೆಗೆ ನಾಗರಹೊಳೆ ರಕ್ಷಿತಾರಣ್ಯದಲ್ಲಿ ಆವಾಸ ಸ್ಥಾನ ಮಾಡಲಾಗುವುದು ಎಂದು ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ಹೇಳಿದರು. ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಸಚಿವ ರೈ, ನಾಗರಹೊಳೆ ಪ್ರದೇಶದಲ್ಲಿ ಈಗಾಗಲೆ 30 ಕಿ.ಮೀ. ಉದ್ದಕ್ಕೆ ಕಂದಕ ತೋಡಲಾಗಿದೆ. ಇನ್ನು 41 ಕಿ.ಮೀ. ಕಂದಕ ತೋಡಬೇಕಾಗಿದೆ. ಎಲ್ಲ ಆನೆಗಳನ್ನು ಒಂದೆಡೆ ಸೇರಿಸಿ ಸಂರಕ್ಷಿಸಲಾಗುವುದು. ಇದರಿಂದ ಜನರಿಗೆ ಆನೆ ಹಾವಳಿ ತಪ್ಪಲಿದೆ. ಆನೆಗಳಿಗೂ ರಕ್ಷಣೆ ಸಿಗಲಿದೆ ಎಂದರು. ಆನೆಗಳು ಸಂಚರಿಸುವ ಪಥ ಬದಲಾಗಿದೆ. ಆನೆ ಪಥ ಪ್ರದೇಶದಲ್ಲಿರುವ ರೈತರು ಸ್ವಯಂ ಪ್ರೇರಿತರಾಗಿ ಜಾಗ ಬಿಟ್ಟುಕೊಟ್ಟರೆ ಅವರಿಗೆ ಪರಿಹಾರ ನೀಡಲಾಗುವುದು. ಆನೆ ಕಾರಿಡಾರ್ ಯೋಜನೆ 13 ಸಾವಿರ ಕೋಟಿ. ಕಾಲ ಕ್ರಮೇಣ ಜಾರಿಗೆ ಬರಲಿದೆ ಎಂದರು.
ಕಬ್ಬಿನ ಬಾಕಿ ಹಣ ನೀಡದವರ ವಿರುದ್ಧ ಕಠಿಣ ಕ್ರಮ: ಹುಕ್ಕೇರಿ
ಹಾವೇರಿ: ರೈತರ ಕಬ್ಬಿನ ಬಾಕಿ ಹಣ ಪಾವತಿಸದ ರಾಜ್ಯದ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಸಕ್ಕರೆ, ಮುಜರಾಯಿ, ಸಣ್ಣ ಕೈಗಾರಿಕೆ ಸಚಿವ ಪ್ರಕಾಶ ಹುಕ್ಕೇರಿ ಎಚ್ಚರಿಸಿದ್ದಾರೆ. ನಗರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸರ್ಕಾರದ ನೂರು ದಿನ ನೂರಾರು ನಿರ್ಣಯ ಎಂಬ ಕಿರು ಹೊತ್ತಗೆ ಬಿಡುಗಡೆ ಮಾಡಿ ಮಾತನಾಡಿ, ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳು ರೈತರ 200 ಕೋಟಿ ಕಬ್ಬು ಖರೀದಿಸಿದ ಬಾಕಿ ಇರಿಸಿಕೊಂಡಿವೆ. ಕಾರ್ಖಾನೆಗಳ ಆಡಳಿತ ಮಂಡಳಿಗಳು ಈ ಬಾಕಿ ಹಣವನ್ನು ಆಗಸ್ಟ್ ತಿಂಗಳೊಳಗೆ ಪಾವತಿಸಬೇಕು. ಇಲ್ಲದಿದ್ದರೆ ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆಗಳ ಆರಂಭಕ್ಕೆ ಅವಕಾಶ ನೀಡುವುದಿಲ್ಲ ಎಂದರು. ಹಾನಿಯಲ್ಲಿರುವ ಸಕ್ಕರೆ ಕಾರ್ಖಾನೆಗಳ ಪುನಶ್ಚೇತನಕ್ಕಾಗಿ ಸಿಎಂ ಜತೆ ಚರ್ಚಿಸಲಾಗಿದ್ದು, ಅಂಥ ಕಾರ್ಖಾನೆಗಳ ಪುನಶ್ಚೇತನಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. 51 ಕೋಟಿ ವೆಚ್ಚ ಮಾಡಿದರು ಇನ್ನೂ ಆರಂಭವಾಗದ ಬೆಳಗಾವಿಯ ಮಾರ್ಕಂಡೇಯ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ 14 ಕೋಟಿ ಸಾಲ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಹಾವೇರಿ ಜಿಲ್ಲೆಯ ಸಂಗೂರು ಸಕ್ಕರೆ ಕಾರ್ಖಾನೆಯನ್ನು ಜೆಎಂ ಶುಗರ್ಸ್ಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗಿದೆ. ಹೀಗಾಗಿ ಕಾರ್ಖಾನೆ ಮಾಲೀಕರು ಸರ್ಕಾರದೊಂದಿಗೆ ಆಗಿರುವ ಒಪ್ಪಂದದ ಪ್ರಕಾರ ಕಬ್ಬು ನುರಿಸಿ ರೈತರಿಗೆ ಸಕಾಲದಲ್ಲಿ ರೈತರಿಗೆ ಬಾಕಿ ಪಾವತಿಸಬೇಕು ಎಂದು ಆದೇಶಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

