ಮಲ್ಪೆ: 10ರಂದು ಶ್ರೀನಿವಾಸ ಕಲ್ಯಾಣೋತ್ಸವ-ಭರದ ಸಿದ್ಧತೆ
ಉಡುಪಿ: ಇಲ್ಲಿನ ಇತಿಹಾಸದಲ್ಲಿ ಮೊದಲ ಬಾರಿಗೆ 10ರಂದು ಮಲ್ಪೆ ಸಮುದ್ರ ತೀರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಆಯೋಜಿಸಲಾಗಿದೆ. ಕಲ್ಯಾಣೋತ್ಸವದ ಆಹ್ವಾನ ಪತ್ರಿಕೆಯನ್ನು ಕಲ್ಯಾಣೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಜಿ. ಶಂಕರ್ ಬುಧವಾರ ಬಿಡುಗಡೆಗೊಳಿಸಿದರು.
ತಿರುಪತಿಯಿಂದ ನಮ್ಮಲ್ಲಿಗೆ ಬರುವ ಶ್ರೀನಿವಾಸನನ್ನು ಮೊಗವೀರ ಬಾಂಧವರು ಆದರಪೂರ್ವಕವಾಗಿ ಸ್ವಾಗತಿಸುತ್ತೇವೆ. ಇದಕ್ಕೆ ಎಲ್ಲಾ ಸಮಾಜದವರು ತಮ್ಮೊಂದಿಗೆ ಸಹಕರಿಸಬೇಕು ಎಂದು ಆಶಿಸಿದರು.
ಸಮಿತಿ ಉಪಾಧ್ಯಕ್ಷ ವಾಸುದೇವ ಭಟ್ ಕಲ್ಯಾಣೋತ್ಸವದ ವಿವರ ನೀಡಿ, 9ರಂದು ಮಧ್ಯಾಹ್ನ 3 ಗಂಟೆಗೆ ತಿರುಪತಿಯಿಂದ ಶ್ರೀದೇವಿ - ಭೂದೇವಿ ಸಹಿತ ಆಗಮಿಸುವ ಶ್ರೀನಿವಾಸ ದೇವರಿಗೆ ಶ್ರೀಕಷ್ಣಮಠದಲ್ಲಿ ಪರ್ಯಾಯ ಸೋದೆ ಮಠದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ಪೂಜೆ ನೆರವೇರಿಸಲಿದ್ದಾರೆ. ಬಳಿಕ ಕಷ್ಣಮಠದಿಂದ ಮಲ್ಪೆ ತೀರದವರೆಗೆ ಮುಖ್ಯರಸ್ತೆಗಳಲ್ಲಿ ಆನೆ, ಬಿರುದಾವಳಿ, ವಾದ್ಯ ಘೋಷಗಳೊಂದಿಗೆ ಶ್ರೀನಿವಾಸ ದೇವರ ಭವ್ಯ ಮೆರವಣಿಗೆ ನಡೆಯಲಿದೆ ಎಂದರು.
ಶನಿವಾರ ಸಂಜೆ 7.30 ಕ್ಕೆ ಮಲ್ಪೆಯ ಶ್ರೀನಿವಾಸ ಕಲ್ಯಾಣ ವೇದಿಕೆಯಲ್ಲಿ ಮುಜರಾಯಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಹಿತ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ, ಭಾನುವಾರ ಬೆಳಗ್ಗೆ ಸುಪ್ರಭಾತ ಪೂಜೆ, ಸಂಜೆ 5.30ಕ್ಕೆ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನಗೊಳ್ಳಲಿದೆ ಎಂದರು.
ಸಮಿತಿ ಮಹಾಪೋಷಕ, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಕೇಶವ ಕುಂದರ್, ಉಪಾಧ್ಯಕ್ಷ ಉದ್ಯಮಿ ಪ್ರಮೋದ್ ಮಧ್ವರಾಜ್, ಇಂದ್ರಾಳಿ ಜಯಕರ ಶೆಟ್ಟಿ, ಜಿಪಂ ಅಧ್ಯಕ್ಷ ಉಪೇಂದ್ರ ನಾಯಕ್, ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಠಾಕೂರ್, ಉಪಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ಎರ್ಮಾಳು ಶಶಿಧರ ಶೆಟ್ಟಿ, ಹರಿಯಪ್ಪ ಕೋಟ್ಯಾನ್, ನಗರಸಭೆ ಅಧ್ಯಕ್ಷ ಕಿರಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಪಾಂಡುರಂಗ ಮಲ್ಪೆ ಇದ್ದರು.
ವೈಭವದ ಆಕರ್ಷಕ ಮೆರವಣಿಗೆ
ಶ್ರೀನಿವಾಸ ದೇವರಿಗೆ ಸಮರ್ಪಣೆಗೊಳ್ಳುವ ಕಪ್ಪ ಕಾಣಿಕೆಗಳನ್ನು ಮಂಗಳವಾದ್ಯಗಳ ಹಿಮ್ಮೇಳದೊಂದಿಗೆ ಮೊಗವೀರ ಬಾಂಧವರು ಸಹಸ್ರ ಸಂಖ್ಯೆಯಲ್ಲಿ ಸಮುದ್ರದಲ್ಲಿ ದೊಣಿಗಳ ಮೂಲಕ ಮೆರವಣಿಗೆಯಲ್ಲಿ ತರುತ್ತಾರೆ, ದೊಂದಿ ಬೆಳಕಿನಲ್ಲಿ ಈ ವೈಭದ ಮೆರವಣಿಗೆ ಈ ಕಲ್ಯಾಣೋತ್ಸವದ ಆಕರ್ಷಣೆಗಳಲ್ಲೊಂದಾಗಲಿದೆ.
ಕಲ್ಯಾಣೋತ್ಸವಕ್ಕೆ ಬೇಕಾದ ನೈವೇದ್ಯಗಳನ್ನು ವಡಭಾಂಡೇಶ್ವರ ದೇವಸ್ಥಾನದಲ್ಲಿ ತಯಾರಿಸಲಾಗುತ್ತದೆ. ಸುಮಾರು 52 ಬಗೆಯ ಈ ಖಾದ್ಯಗಳನ್ನೂ ಮೆರವಣಿಗೆಯಲ್ಲಿ ಕಡಲ ತೀರಕ್ಕೆ ಕೊಂಡೊಯ್ಯಲಾಗುತ್ತದೆ ಇದು ಕೂಡ ಇನ್ನೊಂದು ಆಕರ್ಷಣೆಯಾಗಿರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

