7 ಮಂದಿ ದರೋಡೆ ಆರೋಪಿಗಳ ಸೆರೆ
ಉಡುಪಿ: ಪಡುಬೆಳ್ಳೆ ಗ್ರಾಮದ ದಾಮೋದರ ಸಾಮಗ ಮನೆಯಿಂದ ಮುಂಜಾನೆ ಲಕ್ಷಾಂತರ ರು. ದರೋಡೆ ಮಾಡಿದ 7 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸ್ಥಳೀಯ ನಿವಾಸಿಗಳಾದ ಅಬ್ದುಲ್ ಹಮೀದ್ (32), ಶಬ್ಬೀರ್ ಅಹಮ್ಮದ್ (31), ಮಹಮ್ಮದ್ ಉಸ್ಮಾನ್ (35), ಉಮ್ಮರ್ ಫಾರೂಕ್ (23), ಸತೀಶ್ ಪೂಜಾರಿ (26), ಸುಧೀರ್ ಕುಮಾರ್ (35) ಮತ್ತು ಸಮ್ಮದ್ ಹಾಳೆಕಟ್ಟೆ (32) ಬಂಧಿತರು. ಜ. 3ರಂದು ರಾತ್ರಿ ಸಾಮಗರ ಮನೆಗೆ ನುಗ್ಗಿದ ಈ ಕಳ್ಳರು ಮನೆಯವರನ್ನು ಕೊಲ್ಲುವುದಾಗಿ ಬೆದರಿಸಿ, ಮನೆಯಲ್ಲಿದ್ದ ಸುಮಾರು ರು. 1.69 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಿದ್ದರು. ಅವರನ್ನು ಕಾಪು ವೃತ್ತ ನಿರೀಕ್ಷಕ ಶಿವಾನಂದ ಎಸ್. ವಾಲೀಕಾರ, ಶಿರ್ವ ಠಾಣಾಧಿಕಾರಿ ಕೆ.ಆರ್. ನಾಯ್ಕ್ ಮತ್ತು ಅವರ ಸಿಬ್ಬಂದಿ ಬಂಧಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ದರೋಡೆ ಸಂಚು ಹೀಗೆ...: ಆರೋಪಿಗಳು ಕೆಲವು ದಿನಗಳ ಹಿಂದೆ ಸಾಮಗರ ಮನೆಯಲ್ಲಿ ನೆಲಕ್ಕೆ ಟೈಲ್ಸ್ ಹಾಸಲು ಬಂದಿದ್ದು, ಆಗ ಮನೆಯಲ್ಲಿ ಚಿನ್ನಾಭರಣಗಳಿರುವುದನ್ನು ಗೊತ್ತು ಮಾಡಿಕೊಂಡು ಈ ದರೋಡೆಯ ಯೋಜನೆ ರೂಪಿಸಿದ್ದರು. ಆರೋಪಿಗಳಿಂದ ದರೋಡೆ ಮಾಡುವಾಗ ಧರಿಸಿದ್ದ 4 ಮಂಕಿ ಕ್ಯಾಪ್, 2 ಚೂರಿಗಳು, ಟಾರ್ಚ್ ಮತ್ತು ದರೋಡೆ ಮಾಡಿದ್ದ ಚಿನ್ನಾಭರಣ - ನಗದು ವಶಪಡಿಸಿಕೊಳ್ಳಲಾಗಿದೆ.
ಈ ಆರೋಪಿಗಳಲ್ಲಿ ಹಮೀದ್ ಮತ್ತು ಶಬ್ಬೀರ್ 6 ತಿಂಗಳ ಹಿಂದೆ ಕಾರ್ಕಳದ ಪಳ್ಳಿ ಎಂಬಲ್ಲಿ ಪಾದಚಾರಿ ಮಹಿಳೆಯ ಕತ್ತಿನಲ್ಲಿದ್ದ 20 ಗ್ರಾಂ. ತೂಕದ ಸರ ಅಪಹರಿಸಿದ್ದು, ಅದನ್ನು ವಶ ಪಡಿಸಿಕೊಳ್ಳಲಾಗಿದೆ. ಅಲ್ಲದೆ ಮಹಮ್ಮದ್ ಉಸ್ಮಾನ್, ಹಮೀದ್, ಶಬ್ಬೀರ್ ಕಾಪು ಠಾಣೆಯ ಮೂಡಬೆಟ್ಟು ರುಖಿಯಾ ಎಂಬವರ ಮನೆಯಿಂದ ರು. 4,400 ಮೌಲ್ಯದ ಚಿನ್ನಾಭರಣ ಕಳವು ಆರೋಪಿಗಳಾಗಿದ್ದಾರೆ. ಇನ್ನು ಸತೀಶ್ ಪೂಜಾರಿ ಮೇಲೆ ಪಡುಬಿದ್ರಿ ಮತ್ತು ಉಡುಪಿ ಠಾಣೆಯಲ್ಲಿ ಕಳವು ಪ್ರಕರಣಗಳಿವೆ. ಈ ಆರೋಪಿಗಳು ಇನ್ನೂ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವ ಸಾಧ್ಯತೆಗಳಿರುವುದರಿಂದ ಹೆಚ್ಚಿನ ವಿಚಾರಣೆಗೆ ನ್ಯಾಯಾಲಯವು ಅವರನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

